ರಾಮಮಂದಿರದಲ್ಲಿ 24 ಅರ್ಚಕರು,ಇಬ್ಬರು ಎಸ್‌ ಸಿ ಮತ್ತು ಒಬ್ಬ ಒಬಿಸಿ ಆಯ್ಕೆ

By Sushma Hegde  |  First Published Jan 3, 2024, 12:50 PM IST

ಮೂರು ಹಂತದ ಸಂದರ್ಶನದ ನಂತರ 24 ಅರ್ಚಕರನ್ನು ಆಯ್ಕೆ ಮಾಡಲಾಗಿದೆ. ಈ ಸಂದರ್ಶನದಲ್ಲಿ 3200 ಕ್ಕೂ ಹೆಚ್ಚು ಅರ್ಚಕರು ಭಾಗವಹಿಸಿದ್ದರು. ಕ್ಲಿಷ್ಟಕರ ಪ್ರಶ್ನೆಗಳಿಗೆ ಉತ್ತರವನ್ನು ಪಡೆದು ಈ ಅರ್ಚಕರನ್ನು ಆಯ್ಕೆ ಮಾಡಲಾಗಿದೆ. ಇನ್ನು ತರಬೇತಿ ಸಮಯದಲ್ಲಿ ಎಲ್ಲರೂ ಹೊರಗಿನ ಪ್ರಪಂಚದಿಂದ ಸಂಪೂರ್ಣವಾಗಿ ದೂರವಿರುತ್ತಾರೆ.
 


ಮೂರು ಹಂತದ ಸಂದರ್ಶನದ ನಂತರ 24 ಅರ್ಚಕರನ್ನು ಆಯ್ಕೆ ಮಾಡಲಾಗಿದೆ. ಈ ಸಂದರ್ಶನದಲ್ಲಿ 3200 ಕ್ಕೂ ಹೆಚ್ಚು ಅರ್ಚಕರು ಭಾಗವಹಿಸಿದ್ದರು. ಕ್ಲಿಷ್ಟಕರ ಪ್ರಶ್ನೆಗಳಿಗೆ ಉತ್ತರವನ್ನು ಪಡೆದು ಈ ಅರ್ಚಕರನ್ನು ಆಯ್ಕೆ ಮಾಡಲಾಗಿದೆ. ಇನ್ನು ತರಬೇತಿ ಸಮಯದಲ್ಲಿ ಎಲ್ಲರೂ ಹೊರಗಿನ ಪ್ರಪಂಚದಿಂದ ಸಂಪೂರ್ಣವಾಗಿ ದೂರವಿರುತ್ತಾರೆ.

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ 24  ಅರ್ಚಕರಿರುತ್ತಾರೆ. ವಿಶೇಷವೆಂದರೆ ಈ ಅರ್ಚಕರಲ್ಲಿ ಇಬ್ಬರು ಪರಿಶಿಷ್ಠ ಜಾತಿ ಮತ್ತು ಒಬ್ಬರು ಇತರೆ ಹಿಂದುಳಿದ ವರ್ಗದವರು ಇದ್ದಾರೆ.ರಾಮಮಂದಿರದ ಮಹಂತ್ ಮಿಥಿಲೇಶ್ ನಂದಿನಿ ಶರಣ್ ಮತ್ತು ಮಹಂತ್ ಸತ್ಯನಾರಾಯಣ ದಾಸ್ ಅವರು ದೇವಾಲಯದ ವಿಗ್ರಹಗಳನ್ನು ಪೂಜಿಸಲು ಪೌರೋಹಿತ್ಯ ಮತ್ತು ಆಚರಣೆಗಳ ತರಬೇತಿಯನ್ನು ನೀಡುತ್ತಿದ್ದಾರೆ.

Tap to resize

Latest Videos

ಇನ್ನು ಬ್ರಾಹ್ಮಣೇತರರು ಅರ್ಚಕರಾಗಿ ನೇಮಕಗೊಂಡಿರುವುದು ಇದೇ ಮೊದಲಲ್ಲ.ಈ ಹಿಂದೆ ರಾಮಮಂದಿರದ ಮುಖ್ಯ ಅರ್ಚಕರು ಇತರೆ ಹಿಂದುಳಿದ ವರ್ಗದವರಾಗಿದ್ದರು.ದಕ್ಷಿಣ ಭಾರತದ ದೇವಾಲಯಗಳಲ್ಲಿ, 70 ಪ್ರತಿಶತದಷ್ಟು ಅರ್ಚಕರು ಬ್ರಾಹ್ಮಣೇತರರು. 

ಕಠಿಣ ತರಬೇತಿ...ಮೊಬೈಲ್ ಗೂ ನಿಷೇಧ..

ರಾಮನಂದಿ ಸಂಪ್ರದಾಯದಂತೆ ಎಲ್ಲ ಅರ್ಚಕರಿಗೂ ಮೂರು ತಿಂಗಳ ತರಬೇತಿ ನೀಡಲಾಗುತ್ತೆ. ಈ ಸಮಯದಲ್ಲಿ  ಯುವಕರು ಗುರುಕುಲದ ನಿಯಮಗಳನ್ನು ಅನುಸರಿಸಬೇಕು.  ಮೊಬೈಲ್ ಬಳಸುವಂತಿಲ್ಲ ಅಥವಾ ಹೊರಗಿನವರನ್ನು ಸಂಪರ್ಕಿಸುವಂತಿಲ್ಲ.

ಹನುಮಂಜಿಯವರ ವೇದ ಧ್ಯಾನ ಮಂತ್ರ, ಸೇರಿದಂತೆ 14 ಪ್ರಶ್ನೆಗಳ ಮೇಲೆ ಆಯ್ಕೆ

14 ಪ್ರಶ್ನೆಗಳ ಅಡ್ಡಿಯನ್ನು ದಾಟಿ ಎಲ್ಲಾ 24 ಅರ್ಚಕರನ್ನು ನವೆಂಬರ್‌ನಲ್ಲಿ ಆಯ್ಕೆ ಮಾಡಲಾಗಿದೆ. ಮೂರು ಸುತ್ತಿನ ಸಂದರ್ಶನದ ನಂತರ 3240 ಅಭ್ಯರ್ಥಿಗಳ ಪೈಕಿ 25 ಮಂದಿಯನ್ನು ತರಬೇತಿಗೆ ಆಯ್ಕೆ ಮಾಡಲಾಗಿದೆ. ನಂತರ ಅಭ್ಯರ್ಥಿಗಳಲ್ಲಿ ಒಬ್ಬರಾದ ಆಚಾರ್ಯ ದೈವಜ್ಞ ಕೃಷ್ಣ ಶಾಸ್ತ್ರಿ ಅವರು ತಮ್ಮ ಹೆಸರನ್ನು ಹಿಂತೆಗೆದುಕೊಂಡರು. ಆಚಾರ್ಯ ಶಾಸ್ತ್ರಿ ಪ್ರಕಾರ, ಕೊನೆಯ ಸುತ್ತಿನ ಮೂರು ಪ್ರಶ್ನೆಗಳು ಅತ್ಯಂತ ಕಠಿಣವಾಗಿದ್ದವು. ಮೊದಲ ಹಂತದಲ್ಲಿ ಸಂಧ್ಯಾ ವಂದನೆ, ಹೆಸರು, ಗೋತ್ರ, ಶಾಖ, ಪ್ರವರ ಮತ್ತು ಎರಡನೇ ಹಂತದಲ್ಲಿ ಆಚಾರ್ಯ ಪದವಿಗೆ ಅನುಗುಣವಾಗಿ ಪ್ರಶ್ನೆಗಳನ್ನು ಕೇಳಲಾಯಿತು.

click me!