ಭಯೋತ್ಪಾದಕ ಚಟುವಟಿಕೆಗೆ ಯುವಕರನ್ನ ನೇಮಿಸಿಕೊಳ್ತಿದ್ದ ಲಷ್ಕರ್ ಉಗ್ರ ಶಬ್ಬೀರ್ ಅಹ್ಮದ್ ಅರೆಸ್ಟ್

Published : Mar 30, 2026, 11:18 AM IST
terrorist shabir ahmed lone arrested

ಸಾರಾಂಶ

Lashkar terrorist shabir ahmed lone arrested ರಾಜಧಾನಿ ದೆಹಲಿಯಲ್ಲಿ ಭದ್ರತಾ ಸಂಸ್ಥೆಗಳು ದೊಡ್ಡ ಯಶಸ್ಸು ಸಾಧಿಸಿವೆ… ದೇಶದ ಭದ್ರತೆಗೆ ಭೀತಿ ಉಂಟುಮಾಡುತ್ತಿದ್ದ ಉಗ್ರನನ್ನು ಗಡಿಯಲ್ಲಿ ಹಿಡಿದಿದ್ದಾರೆ! 

ದೆಹಲಿ ಪೊಲೀಸರು ಮತ್ತು ಇತರ ಭದ್ರತಾ ಸಂಸ್ಥೆಗಳು ಜಂಟಿ ಕಾರ್ಯಾಚರಣೆ ನಡೆಸಿ, ಲಷ್ಕರ್-ಎ-ತೈಬಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಶಬ್ಬೀರ್ ಅಹ್ಮದ್ ಲೋನ್ ಅನ್ನು ದೆಹಲಿ ಗಡಿಯ ಬಳಿಬಂಧಿಸಿದ್ದಾರೆ. ಮೂಲಗಳ ಪ್ರಕಾರ, ಈ ಉಗ್ರನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಸೂಚನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದನು. ಬಾಂಗ್ಲಾದೇಶದಲ್ಲಿ ಹೊಸ ಉಗ್ರ ಜಾಲವನ್ನು ನಿರ್ಮಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾನೆ ಎಂಬ ಮಾಹಿತಿ ಬಹಿರಂಗವಾಗಿದೆ.

ಹೇಗೆ ಬಂಧನ?

ಗುಪ್ತಚರ ಮಾಹಿತಿ ಸಿಕ್ಕ ನಂತರ, ಭದ್ರತಾ ಸಂಸ್ಥೆಗಳು ಸೂಕ್ಷ್ಮ ಯೋಜನೆ ರೂಪಿಸಿ ಬಲೆ ಬೀಸಿದವು. ಲೋನ್ ದೆಹಲಿ ಗಡಿಯನ್ನು ತಲುಪಿದ ಕ್ಷಣದಲ್ಲೇ ಆತನನ್ನು ಸೆರೆಹಿಡಿಯಲಾಯಿತು. ಪ್ರಾಥಮಿಕ ತನಿಖೆಯಲ್ಲಿ, ಅವನು ಗಡಿಯಾಚೆಯಿಂದ ಬಂದ ಸೂಚನೆಗಳನ್ನು ಪಾಲಿಸುತ್ತಿದ್ದನು ಎಂಬುದು ತಿಳಿದುಬಂದಿದೆ.

ದೊಡ್ಡ ಸಂಚು ಬಯಲು!

ತನಿಖೆಯಲ್ಲಿ ಇನ್ನಷ್ಟು ಶಾಕಿಂಗ್ ವಿಚಾರಗಳು ಹೊರಬಂದಿವೆ, ದೇಶದ ವಿವಿಧ ಭಾಗಗಳಲ್ಲಿ ಯುವಕರನ್ನು ಉಗ್ರ ಚಟುವಟಿಕೆಗಳಿಗೆ ನೇಮಕ ಮಾಡುತ್ತಿದ್ದನು. ದೆಹಲಿ, ಕೋಲ್ಕತ್ತಾ, ತಮಿಳುನಾಡು ಪ್ರದೇಶಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಯುವಕರನ್ನು ನೇಮಿಸಿಕೊಳ್ಳುತ್ತಿದ್ದನೆಂದು ತನಿಖೆಯಿಂದ ತಿಳಿದುಬಂದಿದೆ. ಇದೇ ಉಗ್ರನು 2007ರಲ್ಲಿ ಕೂಡ ಭಯೋತ್ಪಾದಕ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಮತ್ತೊಬ್ಬ ಮಾಸ್ಟರ್ ಮೈಂಡ್ ಹುಡುಕಾಟ

ಭದ್ರತಾ ಸಂಸ್ಥೆಗಳು ಇದೀಗ ಶೇಖ್ ಸಜ್ಜದ್ ಗುಲ್ ಎಂಬ ಪ್ರಮುಖ ಮಾಸ್ಟರ್ ಮೈಂಡ್‌ನ ಹುಡುಕಾಟದಲ್ಲಿವೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಬಾಂಗ್ಲಾದೇಶಕ್ಕೆ ಪರಾರಿಯಾಗಿದ್ದಾ. 2002 ರಲ್ಲಿ ದೆಹಲಿಯ ನಿಜಾಮುದ್ದೀನ್ ಠಾಣೆಯಲ್ಲಿ ಬಂಧಿಸಲಾಯಿತು ಮತ್ತು 2003 ರಲ್ಲಿ ಶಿಕ್ಷೆ ವಿಧಿಸಿದ ನಂತರ, ತಿಹಾರ್ ಜೈಲಿನಲ್ಲಿ ದೀರ್ಘಕಾಲ ಕಳೆದು, 2017 ರಲ್ಲಿ ಬಿಡುಗಡೆಯಾದ ನಂತರ, ಪಾಕಿಸ್ತಾನಕ್ಕೆ ಪಲಾಯನ ಮಾಡಿದರು ಮತ್ತು ಈಗ ಲಷ್ಕರ್-ಎ-ತೈಬಾ (ಎಲ್‌ಇಟಿ)-ಸಂಬಂಧಿತ ಸಂಘಟನೆಯಾದ "ದಿ ರೆಸಿಸ್ಟೆನ್ಸ್ ಫ್ರಂಟ್" ನೊಂದಿಗೆ ಸಂಬಂಧ ಹೊಂದಿದ್ದಾನೆ ಎನ್ನಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಂಡ ರೇ* ಮಾಡ್ತಿದ್ರೆ, ಹೊರಗೆ ಕಾವಲು ಕಾಯ್ತಿದ್ದ ಬ್ಯುಟಿ ಪಾರ್ಲರ್ ಆಂಟಿ ಯಾಸ್ಮೀನ್
ಭಾರತದಿಂದ ಶ್ರೀಲಂಕಾಕ್ಕೆ 38,000 ಮೆಟ್ರಿಕ್ ಟನ್ ಪೆಟ್ರೋಲ್, ಡೀಸೆಲ್‌: ಪೆಟ್ರೋಲ್ ಬಂಕಲ್ಲೂ ಸೀಮೆಎಣ್ಣೆ ವಿತರಣೆಗೆ ಸದ್ಯ ಅವಕಾಶ: ಕೇಂದ್ರ