
ಭೋಪಾಲ್: ಕೋಣೆಯೊಳಗೆ ಯುವತಿಯರ ಮೇಲೆ ಗಂಡ ಅತ್ಯಾ*ಚಾರ ಮಾಡ್ತಿದ್ರೆ ಪತ್ನಿ ಕಾವಲು ಕಾಯುತ್ತಿದ್ದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಪೊಲೀಸರು ಮಹಿಳೆ ಮತ್ತು ಆಕೆಯ ಪತಿ, ಮೈದುನನ್ನು ಬಂಧಿಸಿದ್ದಾರೆ. ಮಧ್ಯಪ್ರದೇಶದ ಗುನಾ ಜಿಲ್ಲೆಯ ಕೈಂಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು livehindustan ವರದಿ ಮಾಡಿದೆ. ಸಂತ್ರಸ್ತೆ ದೂರು ನೀಡಿದ ನಂತರ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ಎಸ್‌ಪಿ ಹಿತಿಕ ವಾಸ್ಲಾ ಪ್ರಕಾರ, ಗುಲಾಬಗಂಜ್ ನಿವಾಸಿಯಾಗಿರುವ ಯಾಸ್ಮೀನ್ ಖಾನ್ ಎಂಬಾಕೆ ಬ್ಯೂಟಿ ಪಾರ್ಲರ್ ತರಬೇತಿ ನೀಡುತ್ತಿದ್ದಳು. ಈ ಬ್ಯೂಟಿ ಪಾರ್ಲರ್‌ನಲ್ಲಿ ಯಾಸ್ಮೀನ್ ಗಂಡ ಶರೀಫ್ ಖಾನ್ ಹಾಜರಿರುತ್ತಿದ್ದನು. ಸುಮಾರು 4 ತಿಂಗಳ ಹಿಂದೆ ಸಂತ್ರಸ್ತೆಗೆ ತನ್ನ ಮನೆಗೆ ಬರುವಂತೆ ಯಾಸ್ಮೀನ್ ಹೇಳಿದ್ದಳು. ಸಂತ್ರಸ್ತೆ ಮನೆಗೆ ಹೋದಾಗ ಅಲ್ಲಿ ಯಾಸ್ಮೀನ್ ಬದಲಾಗಿ ಆಕೆಯ ಗಂಡ ಶರೀಪ್ ಖಾನ್ ಕುಳಿತಿದ್ದನು.
ಯಾಸ್ಮೀನ್‌ಗಾಗಿ ಕಾಯುತ್ತಿರುವ ಸಂದರ್ಭದಲ್ಲಿ ಯುವತಿ ಮೇಲೆ ಶರೀಫ್ ಅತ್ಯಾ*ಚಾರ ಎಸಗಿದ್ದಾನೆ. ನಂತರ ಈ ವಿಷಯ ಯಾರಿಗಾದ್ರೂ ತಿಳಿಸಿದ್ರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ. ಹಾಗಾಗಿ ಸಂತ್ರಸ್ತೆ ನಾಲ್ಕು ತಿಂಗಳು ಅತ್ಯಾ*ಚಾರದ ವಿಷಯವನ್ನು ಯಾರ ಮುಂದೆಯೂ ಹೇಳಿರಲಿಲ್ಲ. ಶರೀಫ್ ತನ್ನ ಮೇಲೆ ಅತ್ಯಾ*ಚಾರ ಎಸಗಿರುವ ವಿಷಯವನ್ನು ಯಾಸ್ಮೀನ್ ಮುಂದೆ ಸಂತ್ರಸ್ತೆ ಹೇಳಿಕೊಂಡಿದ್ದಳು. ಆದ್ರೆ ಈ ವಿಷಯವನ್ನು ಯಾಸ್ಮೀನ್ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ ಎಂದು ಯುವತಿ ಹೇಳಿಕೊಂಡಿದ್ದಾಳೆ.
ಈ ಘಟನೆ ಬಳಿಕ ಸಂತ್ರಸ್ತೆಯನ್ನು ಹಲವು ಬಾರಿ ಮನೆಗೆ ಕರೆಸಿಕೊಂಡು ಬೆದರಿಸಿ ಗಂಡನೊಂದಿಗೆ ಮಲಗಲು ಕಳುಹಿಸುತ್ತಿದ್ದಳು. ಶರೀಫ್ ಖಾನ್ ಕೋಣೆಯಲ್ಲಿ ರೇ*ಪ್ ಮಾಡ್ತಿದ್ರೆ ಯಾಸ್ಮೀನ್ ಗೇಟ್ ಬಳಿ ನಿಂತು ಕಾವಲು ಕಾಯುತ್ತಿದ್ದಳು ಎಂದು ಎಸ್‌ಪಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Raichur : ಬಾಣಂತಿಯ ನಿಗೂಢ ಸಾವಿಗೆ ದೆವ್ವ ಕಾರಣ? CCTV ದೃಶ್ಯ ನೋಡಿ ಬೆಚ್ಚಿದ ಸ್ಥಳೀಯರು
ಫೋನ್ ಮಾಡಿ ಶನಿವಾರ ಮನೆಗೆ ಬರುವಂತೆ ಯುವತಿಯನ್ನು ಶರೀಫ್ ಖಾನ್ ಕರೆದಿದ್ದಾನೆ. ಬರದಿದ್ರೆ ಅತ್ಯಾ*ಚಾರದ ವಿಷಯವನ್ನು ಬಹಿರಂಗಪಡಿಸೋದಾಗಿ ಬೆದರಿಕೆ ಹಾಕಿದ್ದಾನೆ. ಮನೆಗೆ ಹೋದಾಗ ಅಲ್ಲಿ ಯಾಸ್ಮೀನ್, ಆಕೆಯ ಗಂಡ ಶರೀಫ್ ಮತ್ತು ಮೈದುನ ಮುವೀನ್ ಖಾನ್ ಸಹ ಇದ್ದನು. ಈ ವೇಳೆ ಇಬ್ಬರ ಮುಂದೆಯೇ ಯುವತಿಯನ್ನು ಕೋಣೆಗೆ ಎಳೆದೊಯ್ದು ರೇ-ಪ್ ಮಾಡಲು ಶರೀಫ್ ಮುಂದಾಗಿದ್ದಾನೆ. ಯುವತಿ ವಿರೋಧಿಸಿದಾಗ ಇಬ್ಬರ ನಡುವೆ ಜಗಳ ಏರ್ಪಟ್ಟಿದೆ. ಆಗ ಶರೀಫ್ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ.
ಈ ಸಂದರ್ಭದಲ್ಲಿ ಆತಂಕಗೊಂಡ ಯುವತಿ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾಳೆ. ಯುವತಿ ಪೋಷಕರು ಬರುತ್ತಿದ್ದಂತೆ ಮೂವರು ಆರೋಪಿಗಳು ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದ್ದು, ಅಷ್ಟರಲ್ಲಿ ಅವರನ್ನು ಹಿಡಿದಿದ್ದಾರೆ. ಯುವತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಮೆಲ್ಲಗೆ ಬರ್ತಾನೆ, ಕಾಂಪೌಂಡ್ ಹಾರ್ತಾನೆ; ಅತ್ತಿತ್ತ ನೋಡಿ ಮಹಿಳೆಯರ ಒಳಉಡುಪು ಕದಿತಾನೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ