
ನವದೆಹಲಿ: ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರು ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ನಡೆದಿತ್ತು ಎನ್ನಲಾದ 'ರೈಲ್ವೆ ಉದ್ಯೋ ಗಕ್ಕಾಗಿ ಭೂಮಿ ಹಗರಣ'ದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ತನ್ನ ಮೊದಲ ಆರೋಪಪಟ್ಟಿ ದಾಖಲಿಸಿದೆ. ಇದರಲ್ಲಿ ಲಾಲು ಪತ್ನಿ, ಬಿಹಾರದ ಮಾಜಿ ಸಿಎಂ ರಾಬ್ಡಿ ದೇವಿ ಮತ್ತು ಅವರ ಪುತ್ರಿ ಮಿಸಾ ಭಾರತಿ ಸೇರಿ ಹಲವರನ್ನು ಹೆಸರಿಸಿದೆ.
ಲಾಲು ಮತ್ತೊಬ್ಬ ಪುತ್ರಿ ಹೇಮಾ ಯಾದವ್ (40), ಯಾದವ್ ಕುಟುಂಬದ ಆಪ್ತ ಸಹವರ್ತಿ ಅಮಿತ್ ಕತ್ಯಾಲ್ (49), ಮಾಜಿ ರೈಲ್ವೆ ಉದ್ಯೋಗಿ ಹೃದಯಾನಂದ್ ಚೌಧರಿ, 2 ಕಂಪನಿಗಳಾದ ಎಕೆ ಇನ್ಫೋಸಿಸ್ಟಮ್ಸ್ ಪ್ರೈ. ಲಿಮಿಟೆಡ್ ಮತ್ತು ಎಬಿ ಎಕ್ಸ್‌ಪೋರ್ಟ್ ಪ್ರೈ. ಲಿಮಿಟೆಡ್‌ಗಳನ್ನೂ ಚಾರ್ಜ್‌ಶೀಟ್‌ನಲ್ಲಿ ಹೆಸರಿಸಲಾಗಿದೆ.
ಉದ್ಯೋಗಕ್ಕಾಗಿ ಭೂಮಿ ಪ್ರಕರಣ, ಬಹುಕೋಟಿ ಹಗರಣದಲ್ಲಿ ಪತ್ನಿ, ಮಗ ಸೇರಿ ಲಾಲೂ ಪ್ರಸಾದ್ ಗೆ ಬಿಗ್ ರಿಲೀಫ್
ಇದನ್ನು ಪರಿಗಣಿಸಿದ ಅಕ್ರಮ ಹಣ ವರ್ಗಾ ವಣೆ ತಡೆ ಕಾಯ್ದೆ ನ್ಯಾಯಾಲಯ, ಜ.16ರಂದು ಮುಂದಿನ ವಿಚಾರಣೆ ನಿಗದಿಪಡಿಸಿದೆ. ಈಗಾಗಲೇ ಈ ಹಗರಣದಲ್ಲಿ ಲಾಲು, ಅವರ ಪುತ್ರ ಹಾಗೂ ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಅವರ ವಿಚಾರಣೆ ನಡೆದಿದೆ.
ಏನಿದು ಹಗರಣ?
ಲಾಲು ಯುಪಿಎ-1 ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದ ಅವಧಿಗೆ ಸಂಬಂಧಿಸಿದ ಹಗರಣವಾಗಿದೆ. 2004ರಿಂದ 2009ರವರೆಗೆ, ಭಾರತೀಯ ರೈಲ್ವೆಯ ವಿವಿಧ ವಲಯಗಳಲ್ಲಿ ಗ್ರೂಪ್ 'ಡಿ' ಹುದ್ದೆಗಳಿಗೆ ಹಲವರನ್ನು ನೇಮಿಸಲಾಗಿತ್ತು. ಇವರು ನೌಕರಿ ಪಡೆಯಲು ಲಂಚ ರೂಪದಲ್ಲಿ ತಮ್ಮ ಜಮೀನನ್ನು ಲಾಲು ಕುಟುಂಬ ಸದಸ್ಯರಿಗೆ ವರ್ಗಾಯಿಸಿದ್ದಾರೆ ಎಂಬ ಆರೋಪವಿದೆ.
'ಇಸ್ರೋ ವಿಜ್ಞಾನಿಗಳು ಮೋದಿಯನ್ನು ಸೂರ್ಯನತ್ತ ಕಳಿಸಬೇಕು' ಇಂಡಿ ಒಕ್ಕೂಟದ ಸಭೆ ಬಳಿಕ ಲಾಲೂ ಪ್ರಸಾದ್ ಹೇಳಿಕೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ