Omicron Variant Symptoms : ಸೋಂಕಿತರಿಗೆ ಸಾಧಾರಣ ರೋಗ ಲಕ್ಷಣ

Suvarna News   | Asianet News
Published : Dec 08, 2021, 10:43 AM ISTUpdated : Dec 08, 2021, 10:59 AM IST
Omicron Variant Symptoms : ಸೋಂಕಿತರಿಗೆ ಸಾಧಾರಣ ರೋಗ ಲಕ್ಷಣ

ಸಾರಾಂಶ

ರಾಜಸ್ಥಾನದ ಒಮಿಕ್ರೋನ್‌ ಸೋಂಕಿತರು ಸೇಫ್‌ ಎಲ್ಲ 9 ಒಮಿಕ್ರಾನ್‌ ಸೋಂಕಿತರ ಆರೋಗ್ಯ ಸ್ಥಿರ ಸೋಂಕಿತರಿಗೆ ಸಾಧಾರಣ ರೋಗಲಕ್ಷಣಗಳು  

ಜೈಪುರ: ಒಮಿಕ್ರಾನ್‌ ರೂಪಾಂತರಿ ಕೋವಿಡ್‌ ಸೋಂಕಿನ ಬಗ್ಗೆ ವಿಶ್ವದಲ್ಲಿ ಆತಂಕವಿದ್ದರೂ, ಇದು ಡೆಲ್ಟಾ ವೈರಸ್‌ನಷ್ಟು ಅಪಾಯಕಾರಿಯಲ್ಲ ಎಂದು ರಾಜಸ್ಥಾನದ ಸವಾಯ್‌ ಮಾನ್‌ ಸಿಂಗ್‌ ವೈದ್ಯಕೀಯ ಕಾಲೇಜಿನ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ  ಒಮಿಕ್ರಾನ್‌ಗೆ ತುತ್ತಾದ ರಾಜಸ್ಥಾನದ 9 ಮಂದಿ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ ರೋಗಲಕ್ಷಣಗಳು ತುಂಬಾ ಕಮ್ಮಿ ಇವೆ. ಉಸಿರಾಟ ಸಮಸ್ಯೆ, ಶ್ವಾಸಕೋಶದ ಮೇಲೆ ವೈರಸ್‌ ದಾಳಿ ಕಂಡುಬಂದಿಲ್ಲ. ಹೀಗಾಗಿ  ಒಮಿಕ್ರಾನ್‌ ಸೋಂಕಿತರಿಗೆ ಕೃತಕ ಆಮ್ಲಜನಕದ ವ್ಯವಸ್ಥೆ ಬೇಕಿಲ್ಲ. ಚಿಕಿತ್ಸೆ ಪಡೆಯುತ್ತಿರುವ 9 ಸೋಂಕಿತರ ಆರೋಗ್ಯ ಸ್ಥಿರವಾಗಿದ್ದು, ಕೆಲವರಲ್ಲಿ ಸೌಮ್ಯ ಸ್ವಭಾವದ ಸೋಂಕು ಮತ್ತೆ ಕೆಲವರಲ್ಲಿ ಸೋಂಕಿನ ಲಕ್ಷಣಗಳೇ ಇಲ್ಲ. ಅವರೆಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ಜತೆಗೆ ಈ ವೈರಸ್‌ ಸೋಕಿಗೆ ತುತ್ತಾದವರಿಗೆ ಡೆಲ್ಟಾರೀತಿ ರುಚಿ ಮತ್ತು ವಾಸನೆ ಗ್ರಹಿಸುವ ಸಾಮರ್ಥ್ಯ ಕುಸಿದಿಲ್ಲ ಎಂದು ಡಾ. ಸುಧೀರ್‌ ಬಂಡಾರಿ(Sudhir Bandari) ತಿಳಿಸಿದರು.

ಮತ್ತೊಂದೆಡೆ ದಕ್ಷಿಣ ಆಫ್ರಿಕಾದಲ್ಲಿ ಈ ಸೋಂಕಿಗೆ ತುತ್ತಾದ 1000 ಮಂದಿ ರೋಗಿಗಳ ಪೈಕಿ ಶೇ.4.9ರಷ್ಟು ಮಂದಿ ಮಾತ್ರವೇ ಐಸಿಯು ಬೆಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಜಗತ್ತಿನಾದ್ಯಂತ  ಹೊಸ ರೂಪಾಂತರಿ ಒಮಿಕ್ರಾನ್‌(Omicron) ಭೀತಿ ಹುಟ್ಟಿಸಿರುವುದಂತೂ ನಿಜ. ಇದಕ್ಕೆ ಪ್ರಮುಖ ಕಾರಣ, ಪ್ರಪಂಚದ ವಿವಿಧ ದೇಶಗಳ ತಜ್ಞರು ದಿನಕ್ಕೊಂದು ಹೇಳಿಕೆ ನೀಡುತ್ತಿರುವುದು. ಒಬ್ಬರು ಒಮಿಕ್ರಾನ್‌ ಬಗ್ಗೆ ಅಷ್ಟೇನೂ ಭಯ ಬೇಕಿಲ್ಲ ಎಂದರೆ, ಮಗದೊಬ್ಬರು ಡೆಲ್ಟಾಗಿಂತಲೂ ಹೆಚ್ಚಿನ ಅಪಾಯ ತಂದೊಡ್ಡಬಲ್ಲುದು ಎನ್ನುತ್ತಾರೆ. ಹಾಗಾದರೆ, ಒಮಿಕ್ರಾನ್‌ ಕುರಿತ ನಿಜ ಸಂಗತಿ ಏನು ಎಂಬ ಪ್ರಶ್ನೆಗೆ ಇನ್ನೂ ಒಂದಿಷ್ಟು ದಿನ ಕಾಯಬೇಕು ಎನ್ನುತ್ತಾರೆ ಕೆಲವು ತಜ್ಞರು.

Omicron Variant: ಒಮಿಕ್ರಾನ್‌ ನಿಯಂತ್ರಣಕ್ಕೆ ಬೂಸ್ಟರ್ ಡೋಸ್‌ನಿಂದ ಪರಿಹಾರ..?

ಒಮಿಕ್ರಾನ್‌ ರೂಪಾಂತರಿ ಮೊದಲಿಗೆ ಗೊತ್ತಾಗಿದ್ದು ದಕ್ಷಿಣ ಆಫ್ರಿಕಾ(South Africa) ದೇಶದಲ್ಲಿ. ಇಲ್ಲಿ ನ.26ರಂದು 3,402 ಕೇಸ್‌ ಪತ್ತೆಯಾಗಿದ್ದರೆ, ಡಿ.1ರ ವೇಳೆಗೆ 8561 ಕೇಸ್‌ಗಳು ದೃಢವಾಗಿದ್ದವು. ಅದರಲ್ಲೂ ಗುಟೆಂಗ್‌(Gauteng) ಪ್ರಾಂತ್ಯದಲ್ಲಿ ಹೆಚ್ಚು ಪ್ರಕರಣ ಪತ್ತೆಯಾಗಿವೆ. ಇಲ್ಲಿ ಸರಿಯಾದ ವರದಿಗಳು ಬರುವ ಮುನ್ನವೇ ವಿಶ್ವ ಆರೋಗ್ಯ ಸಂಸ್ಥೆ ಒಮಿಕ್ರಾನ್‌ ಕುರಿತಂತೆ ಹೇಳಿಕೆ ನೀಡಿತು. ಇದು ಅತ್ಯಂತ ಕಳವಳಕಾರಿಯಾದ ಮತ್ತು ಅಪಾಯಕಾರಿಯಾದ ರೂಪಾಂತರಿ. ಇದುವರೆಗಿನ ಎಲ್ಲ ವೇರಿಯಂಟ್‌ಗಳಿಗಿಂತಲೂ ಶಕ್ತಿಯುತವಾಗಿದೆ. ಹೀಗಾಗಿ ಎಲ್ಲ ದೇಶಗಳು ಎಚ್ಚರಿಕೆಯಿಂದ ಇರಬೇಕು ಎಂದು ಬಿಟ್ಟಿತು. ಇದು ಜಗತ್ತಿನೆಲ್ಲೆಡೆ ಭಯಕ್ಕೆ ಕಾರಣವಾದರೆ, ಬೇರೆ ಬೇರೆ ಸಂಶೋಧನ ಸಂಸ್ಥೆಗಳು ತಮಗೆ ತಿಳಿದ ಹಾಗೆ ಅಂದಾಜು ಮಾಡಲು ನಿಂತವು. ವಿಶೇಷವೆಂದರೆ ಇದುವರೆಗೆ ಒಮಿಕ್ರಾನ್‌ ಹೇಗೆ ವರ್ತಿಸುತ್ತದೆ ಎಂಬ ಬಗ್ಗೆ ಸರಿಯಾದ ದತ್ತಾಂಶಗಳೇ ಸಿಕ್ಕಿಲ್ಲ.

Omcricon ಆತಂಕ, ವಿಶೇಷ ಲಸಿಕೆ ತಯಾರಿಸುತ್ತಿದೆ ಅಮೆರಿಕ, ಜನವರಿಯಿಂದ ಲಭ್ಯ ಸಾಧ್ಯತೆ!

ಒಮಿಕ್ರಾನ್‌ ವೇಗವಾಗಿ ಹರಡುವ ಗುಣ ಹೊಂದಿದೆ, ಆದರೆ ಗಂಭೀರವಾದ ಪರಿಣಾಮವುಂಟು ಮಾಡದು ಎಂದು ವಿಶ್ಲೇಷಿಸಿರುವ ತಜ್ಞರು, ಇದಕ್ಕೆ ಪೂರಕವಾಗಿ ಇದುವರೆಗೆ ದಕ್ಷಿಣ ಆಫ್ರಿಕಾ ಸೇರಿದಂತೆ ಎಲ್ಲಿಯೂ ಒಮಿಕ್ರಾನ್‌ನಿಂದ ಸಾವನ್ನಪ್ಪಿಲ್ಲ ಎಂದು ಹೇಳುತ್ತಾರೆ. ಒಮಿಕ್ರಾನ್‌ ಪತ್ತೆಯಾದ ಮೇಲೆ ದಕ್ಷಿಣ ಆಫ್ರಿಕಾದಲ್ಲಿ 40 ಸಾವಿರ ಮಂದಿಗೆ ಸೋಂಕು ತಗಲಿದೆ. ಆದರೆ ಇವರಲ್ಲಿ ಕಡಿಮೆ ಪ್ರಮಾಣದ ರೋಗ ಲಕ್ಷಣಗಳು ಕಂಡಿದ್ದು, ಸಾವನ್ನಪ್ಪಿರುವ ಬಗ್ಗೆ ವರದಿಯಾಗಿಲ್ಲ. ಹಾಗೆಯೇ ವಿಶ್ವ ಆರೋಗ್ಯ ಸಂಸ್ಥೆ ಕೂಡ ಒಮಿಕ್ರಾನ್‌ನಿಂದ ಇದುವರೆಗೆ ಯಾರೊಬ್ಬರೂ ಸಾವನ್ನಪ್ಪಿಲ್ಲ ಎಂದು ಸ್ಪಷ್ಟಪಡಿಸಿದೆ.

ಒಮಿಕ್ರಾನ್ ರೂಪಾಂತರಗಳ ಸೋಂಕು ಹೆಚ್ಚಾದಂತೆ, ಅಮೆರಿಕ(America), ಬ್ರಿಟನ್ ಮತ್ತು ಇತರ ದೇಶಗಳು ತಮ್ಮ ನಾಗರಿಕರಿಗೆ ಕೊರೋನಾ ಲಸಿಕೆಯನ್ನು ತೀವ್ರಗೊಳಿಸಿವೆ ಎಂಬುವುದು ಉಲ್ಲೇಖನೀಯ.  ಇತ್ತ ಕರ್ನಾಟಕದಲ್ಲಿ ಎರಡು ಒಮಿಕ್ರಾನ್‌ ಪ್ರಕರಣಗಳು ಪತ್ತೆಯಾಗಿದ್ದು, ಆತಂಕ ಮೂಡಿಸಿದೆ. ಇನ್ನು ಕರ್ನಾಟಕದಲ್ಲಿ (Karnataka) ಇಂದು (ಡಿ. 7) ಹೊಸದಾಗಿ 299 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು. ಸೋಂಕಿನಿಂದ 6 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 29,98,699 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 29,53,327 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಕೊರೊನಾದಿಂದ 38,243 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 7,100  ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ