ಶಾಸ್ತ್ರೀ ಸಾವಿನ ರಹಸ್ಯ ಬಗ್ಗೆ ಹೊಸ ಪುಸ್ತಕ: ಎಸ್‌. ಎಲ್‌ ಭೈರಪ್ಪಗೆ ಮೊದಲ ಪ್ರತಿ!

By Kannadaprabha News  |  First Published Jul 16, 2020, 10:30 AM IST

ಶಾಸ್ತ್ರೀ ಸಾವಿನ ಬಗ್ಗೆ ತಿಳಿದಿರುವುದು ಅರ್ಧ ಸತ್ಯ?| ಎಸ್‌.ಉಮೇಶ್‌ ಅವರ ತಾಷ್ಕೆಂಟ್‌ ಡೈರಿ| ಅಪರೂಪದ ಪುಸ್ತಕ ನಾಳೆ ಲೋಕಾರ್ಪಣೆ


ಮೈಸೂರು(ಜು.16): ಮೈಸೂರಿನ ಲೇಖಕ ಎಸ್‌.ಉಮೇಶ್‌ ರಚಿಸಿರುವ ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರೀ ಅವರ ಕುರಿತ ಪುಸ್ತಕ ‘ತಾಷ್ಕೆಂಟ್‌ ಡೈರಿ’ ಶುಕ್ರವಾರ(ಜು.17) ಲೋಕಾರ್ಪಣೆಯಾಗಲಿದೆ. ಶಾಸ್ತ್ರೀ ಅವರ ಸಾವಿನ ಬಗ್ಗೆ ಎಲ್ಲರಿಗೂ ತಿಳಿದಿರುವುದು ಅರ್ಧ ಸತ್ಯವೇ? ಎಂಬ ಕುತೂಹಲಕ್ಕೆ ಈ ಕೃತಿ ಕಾರಣವಾಗಲಿದೆ.

ಪ್ರಖ್ಯಾತ ಕಾದಂಬರಿಕಾರ, ಸರಸ್ವತಿ ಸಮ್ಮಾನ್‌ ಪುರಸ್ಕೃತ ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ ಅವರಿಗೆ ಮೊದಲ ಪ್ರತಿಯನ್ನು ಸಮರ್ಪಣೆ ಮಾಡುವ ಮೂಲಕ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ.

Latest Videos

undefined

ತುರ್ತುಸ್ಥಿತಿ ಘೋಷಣೆಗೆ 45 ವರ್ಷ: ಇಂದಿರಾಗೆ ಎಮರ್ಜೆನ್ಸಿ ಹೇರುವ ಸಲಹೆ ನೀಡಿದ್ದು ಯಾರು?

ಇದು ದೇಶದ 2ನೇ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರೀ ಅವರನ್ನು ಕುರಿತ ಅಪರೂಪದ ಕೃತಿ. ಈ ಪುಸ್ತಕದಲ್ಲಿ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ಅಪರೂಪದ ಲೇಖನವಿದೆ. ಪುಸ್ತಕದ ಬೆನ್ನುಡಿಯನ್ನು ಶಾಸ್ತ್ರೀ ಅವರ ಪುತ್ರ ಅನಿಲ್‌ ಶಾಸ್ತ್ರೀ ಬರೆದಿದ್ದಾರೆ.

ಒಂದು ಸಾಮಾನ್ಯ ಕುಟುಂಬದಿಂದ ಬಂದು ದೇಶದ ಅತ್ಯುನ್ನತ ಪದವಿಯನ್ನು ಅಲಂಕರಿಸಿದ ಮಹಾನ್‌ ವ್ಯಕ್ತಿಯೊಬ್ಬರ ಜೀವನ ಕಥನ ಈ ಕೃತಿ. ವ್ಯಕ್ತಿಯೊಬ್ಬ ತನ್ನ ಆದರ್ಶ ಮತ್ತು ಉದಾತ್ತ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ಹೇಗೆ ಕೊಂಡೊಯ್ಯಬಲ್ಲ ಎನ್ನುವುದಕ್ಕೆ ಜ್ವಲಂತ ನಿದರ್ಶನ. ಹದಿನೈದು ಅಧ್ಯಾಯಗಳಿರುವ ಈ ಕೃತಿಯಲ್ಲಿ ಶಾಸ್ತ್ರೀ ಅವರ ಸಾರ್ವಜನಿಕ ಬದುಕಿನ ಹತ್ತಾರು ಮನಕಲಕುವ ಘಟನೆಗಳಿವೆ. ಪ್ರಧಾನ ಮಂತ್ರಿಯಾಗಿ ಅವರು ದೇಶವನ್ನು ಮುನ್ನಡೆಸಿದ ವರ್ಣನೆಯಿದೆ. 1965 ರಲ್ಲಿ ಭಾರತ-ಪಾಕಿಸ್ತಾನದ ನಡುವೆ ನಡೆದ ಭಯಾನಕ ಯುದ್ಧದ ಕಥನವಿದೆ. ಯುದ್ಧದ ಸಮಯದಲ್ಲಿ ಶಾಸ್ತ್ರೀಜಿ ತೆಗೆದುಕೊಂಡ ದಿಟ್ಟನಿರ್ಧಾರಗಳ ವಿವರಣೆ ಇದೆ. ಶಾಂತಿದೂತನಂತೆ ತಾಷ್ಕೆಂಟಿಗೆ ತೆರಳಿ ಶವವಾಗಿ ಭಾರತಕ್ಕೆ ಮರಳಿದ ಕಣ್ಣೀರ ಕಥೆಯಿದೆ. ಅವರ ಸಾವಿನ ಕುರಿತ ಸತ್ಯಾನ್ವೇಷಣೆ ಇದೆ. ಅವರ ಸಾವಿನ ಸುತ್ತ ಹೆಣೆದುಕೊಂಡ ಅನುಮಾನದ ಸಂಪೂರ್ಣ ವಿಶ್ಲೇಷಣೆಯಿದೆ.

ಭಾರತ ಸರ್ಕಾರದ ದಾಖಲೆಗಳು, ಸಂಸತ್ತಿನ ನಡಾವಳಿಗಳು, ಶಾಸ್ತ್ರೀಜಿ ಅವರೊಂದಿಗೆ ಕೆಲಸ ಮಾಡಿದ್ದ ಅನೇಕ ಅಧಿಕಾರಿಗಳು ಬರೆದಿದ್ದ ಪುಸ್ತಕಗಳು, ಸಿಐಎ ಮತ್ತು ಕೆಜಿಬಿ ಆರ್ಕೈವ್‌ಗಳು- ಹೀಗೆ ಇವೆಲ್ಲವನ್ನೂ ಕ್ರೋಡೀಕರಿಸಿ ಪ್ರಕಟಗೊಂಡಿರುವ ಅಮೂಲ್ಯ ಕೃತಿ ತಾಷ್ಕೆಂಟ್‌ ಡೈರಿ.

ವಿಧಿಯ ಕೈವಾಡ ಆ ವರ್ಷ 2 ದುರಂತ ನಡೆಯಿತು; ಶಾಸ್ತ್ರಿ ನಿಧನರಾದರು, ಇಂದಿರಾ ಪ್ರಧಾನಿಯಾದರು!

ಸದ್ಯಕ್ಕೆ ಕೊರೋನಾ ಹಿನ್ನೆಲೆಯಲ್ಲಿ ಧಾತ್ರಿ ಪ್ರಕಾಶನ ವಾಟ್ಸ್‌ಆ್ಯಪ್‌(9900580394) ಮತ್ತು ವೆಬ್‌ಸೈಟ್‌(ಡಿಡಿಡಿ.dhaಠ್ಟಿಜಿp್ಠಚ್ಝಿಜ್ಚಿaಠಿಜಿಟ್ಞ.್ಚಟಞ) ನಲ್ಲಿ ವಿವರಗಳನ್ನು ಪಡೆದುಕೊಂಡು ನಂತರ ಪೋಸ್ಟ್‌ ಅಥವಾ ಕೊರಿಯರ್‌ ಮುಖಾಂತರ ಓದುಗರ ಮನೆ ಮನೆಗೆ ಪುಸ್ತಕವನ್ನು ಕಳಿಸುತ್ತದೆ. ಅಲ್ಲದೆ, ಒಂದೆರಡು ದಿನಗಳಲ್ಲಿ ಸಪ್ನಬುಕ್‌ ಹೌಸ್‌ ಮತ್ತು ನವಕರ್ನಾಟಕ ಸೇರಿದಂತೆ ನಾಡಿನ ಎಲ್ಲ ಪುಸ್ತಕ ಮಳಿಗೆಗಳಲ್ಲಿ ಪುಸ್ತಕ ದೊರೆಯಲಿದೆ.

click me!