ಲಡ್ಕಿ ಬಹಿನ್‌’ ಯೋಜನೆಯಡಿ 14,000 ಪುರುಷರ ನೋಂದಣಿ!

Kannadaprabha News   | Kannada Prabha
Published : Jul 28, 2025, 06:36 AM IST
Ladki Bahin Yojana

ಸಾರಾಂಶ

ಬಡ ಕುಟುಂಬದ ಹೆಣ್ಣುಮಕ್ಕಳು, ಮಹಿಳೆಯರಿಗಾಗಿ ಮಹಾರಾಷ್ಟ್ರದ ಫಡ್ನವೀಸ್‌ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ‘ಲಡ್ಕಿ ಬಹಿನ್‌’ ಯೋಜನೆಯ ಆಡಿಟ್‌ ವೇಳೆ ಭಾರೀ ಅಕ್ರಮಗಳು ಬೆಳಕಿಗೆ ಬಂದಿವೆ.

 ಮುಂಬೈ: ಬಡ ಕುಟುಂಬದ ಹೆಣ್ಣುಮಕ್ಕಳು, ಮಹಿಳೆಯರಿಗಾಗಿ ಮಹಾರಾಷ್ಟ್ರದ ಫಡ್ನವೀಸ್‌ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ‘ಲಡ್ಕಿ ಬಹಿನ್‌’ ಯೋಜನೆಯ ಆಡಿಟ್‌ ವೇಳೆ ಭಾರೀ ಅಕ್ರಮಗಳು ಬೆಳಕಿಗೆ ಬಂದಿವೆ. ಮಹಿಳೆಯರಿಗಾಗಿಯೇ ಮೀಸಲಾದ ಈ ಯೋಜನೆಯಡಿ 14,000ಕ್ಕೂ ಹೆಚ್ಚು ಗಂಡಸರೂ ಹಣಕಾಸು ನೆರವು ಪಡೆಯುತ್ತಿರುವ ವಿಚಾರ ಪತ್ತೆಯಾಗಿದೆ.

ಕಳೆದ ವರ್ಷ ಘೋಷಣೆಯಾಗಿರುವ ಈ ಯೋಜನೆಯಡಿ ವಾರ್ಷಿಕ 2.5 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಕುಟುಂಬದ 21ರಿಂದ 65 ವರ್ಷದ ನಡುವಿನ ಮಹಿಳೆಯರು, ಹೆಣ್ಣುಮಕ್ಕಳಿಗೆ ಮಾಸಿಕ 1,500 ರು. ನೀಡಲಾಗುತ್ತದೆ. ಯೋಜನೆ ಜಾರಿಯಾಗಿ 10 ತಿಂಗಳ ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಡಿಟ್‌ ನಡೆಸಿದ್ದು, ಈ ವೇಳೆ ಹಲವು ಅಕ್ರಮಗಳು ಬೆಳಕಿಗೆ ಬಂದಿವೆ.

ಆನ್‌ಲೈನ್‌ ನೋಂದಣಿ ವ್ಯವಸ್ಥೆಯಲ್ಲಿ ವಂಚನೆ ಮಾಡಿ ತಮ್ಮನ್ನು ತಾವು ಮಹಿಳೆಯರು ಎಂಬಂತೆ ಬಿಂಬಿಸಿಕೊಂಡು 14,298 ಪುರುಷರೂ ಯೋಜನೆಯಡಿ ಸುಮಾರು 21.44 ಕೋಟಿ ರು. ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಇನ್ನು ಯೋಜನೆಯಡಿ ದೊಡ್ಡಪ್ರಮಾಣದಲ್ಲಿ ಅನರ್ಹರೂ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ 1,640 ಕೋಟಿ ರು. ನಷ್ಟವಾಗಿದೆ. ಯೋಜನೆಯಡಿ ಒಂದು ಕುಟುಂಬದ ಇಬ್ಬರು ಮಹಿಳೆಯರಷ್ಟೇ ಹೆಸರು ನೋಂದಣಿ ಮಾಡಿಕೊಳ್ಳಬಹುದು. ಆದರೆ, ಅದೇ ಕುಟುಂಬದ ಸುಮಾರು 7.97 ಲಕ್ಷಕ್ಕೂ ಹೆಚ್ಚು ಮೂರನೇ ಮಹಿಳೆಯರೂ ಹೆಸರು ದಾಖಲಿಸಿ ಸರ್ಕಾರಕ್ಕೆ ಬೊಕ್ಕಸಕ್ಕೆ 1,196 ಕೋಟಿ ನಷ್ಟ ಉಂಟು ಮಾಡಿದ್ದಾರೆ.

ಇನ್ನು ಈ ಯೋಜನೆ 65 ವರ್ಷದವರೆಗಿನ ಮಹಿಳೆಯರಿಗಷ್ಟೇ ಸೀಮಿತ. ಆದರೆ 2.87 ಲಕ್ಷದಷ್ಟು 65 ವರ್ಷ ದಾಟಿದ ಮಹಿಳೆಯರೂ ಹೆಸರು ನೋಂದಾಯಿಸಿಕೊಂಡಿದ್ದು, ಇದರಿಂದ ಸರ್ಕಾರಕ್ಕೆ 431 ಕೋಟಿ ರು. ನಷ್ಟವುಂಟು ಮಾಡಿದ್ದಾರೆ, ಸ್ವಂತ ಕಾರು ಹೊಂದಿರುವ 1.62 ಲಕ್ಷ ಮಹಿಳೆಯರೂ ಫಲಾನುಭವಿಗಳಾಗಿರುವುದು ಪತ್ತೆಹಚ್ಚಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live:ಇಂಡಿಗೋ ಏರ್‌ಲೈನ್ಸ್ ಸಮಸ್ಯೆ ತನಿಖೆಗೆ 4 ಸದಸ್ಯರ ತಂಡ ರಚಿಸಿದ ಕೇಂದ್ರ ಸರ್ಕಾರ
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌