ಲಡಾಖ್‌ನಲ್ಲಿ ವಿಶ್ವದ 5ನೇ ಅತಿ ಎತ್ತರದ ವಾಯುನೆಲೆ ನಿರ್ಮಾಣ: ಚೀನಾ ಗಡಿಯಲ್ಲಿ ಭಾರತದ ಮತ್ತೊಂದು ಬಲಿಷ್ಠ ಹೆಜ್ಜೆ

Published : Nov 14, 2025, 10:46 AM IST
Ladakh Nyioma airbase

ಸಾರಾಂಶ

ಚೀನಾದೊಂದಿಗಿನ ಉದ್ವಿಗ್ನತೆ ಇತ್ತೀಚೆಗೆ ತಗ್ಗಿದೆಯಾದರೂ ಭದ್ರತೆಯ ವಿಷಯದಲ್ಲಿ ಮೈಮರೆಯದ ಭಾರತ, ಚೀನಾ ಗಡಿಗೆ ಸಮೀಪವಿರುವ ಲಡಾಖ್‌ನಲ್ಲಿ ನಿಯೋಮಾ ಹೆಸರಿನ ವಾಯುನೆಲೆಯನ್ನು ನಿರ್ಮಿಸಿದೆ.

ಶ್ರೀನಗರ (ನ.14): ಚೀನಾದೊಂದಿಗಿನ ಉದ್ವಿಗ್ನತೆ ಇತ್ತೀಚೆಗೆ ತಗ್ಗಿದೆಯಾದರೂ ಭದ್ರತೆಯ ವಿಷಯದಲ್ಲಿ ಮೈಮರೆಯದ ಭಾರತ, ಚೀನಾ ಗಡಿಗೆ ಸಮೀಪವಿರುವ ಲಡಾಖ್‌ನಲ್ಲಿ ನಿಯೋಮಾ ಹೆಸರಿನ ವಾಯುನೆಲೆಯನ್ನು ನಿರ್ಮಿಸಿದೆ. ವಿಶ್ವದಲ್ಲೇ ಅತಿ ಎತ್ತರದ ವಾಯುನೆಲೆಗಳಲ್ಲಿ 5ನೇ ಸ್ಥಾನ ಪಡೆದಿರುವ ಇದನ್ನು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್‌ಚೀಫ್‌ ಮಾರ್ಷಲ್‌ ಎ.ಪಿ. ಸಿಂಗ್‌ ಉದ್ಘಾಟಿಸಿದ್ದು, ಬುಧವಾರದಿಂದ ಕಾರ್ಯಾರಂಭಿಸಿದೆ.

ಸಿಂಗ್‌ ಅವರು ದೆಹಲಿಯ ಹೊರವಲಯದಿಂದ ನಿಯೋಮ್‌ನ ಮುಧ್‌ ವಾಯುನೆಲೆಗೆ ತಮ್ಮ ಸಿ-130ಜೆ ಸೂಪರ್‌ ಹರ್ಕ್ಯುಲಸ್‌ ವಿಮಾನದಲ್ಲಿ ಬಂದಿಳಿಯುವ ಮೂಲಕ, ವಿಷೇಷವಾಗಿ ಅದರ ಕಾರ್ಯಾರಂಭಕ್ಕೆ ಚಾಲನೆ ನೀಡಿದರು. ಮೊದಲು ಇದನ್ನು ಯುದ್ಧವಿಮಾನಗಳು ಇಳಿಯುವ ಸ್ಥಳವಾಗಿ ಅಷ್ಟೇ ಬಳಕೆ ಮಾಡಲಾಗುತ್ತಿತ್ತು. ಈಗ ಪೂರ್ಣಪ್ರಮಾಣದ ವಾಯುನೆಲೆಯಾಗಿ ಬಳಸಲಾಗುವುದು.

ಮಹತ್ವವೇಕೆ?

ಗಲ್ವಾನ್‌ ಸಂಘರ್ಷದ ಬಳಿಕ ಕಳೆದ 5 ವರ್ಷಗಳಲ್ಲಿ ಚೀನಾ, ಭಾರತದ ಸಮೀಪವಿರುವ ತನ್ನೆಲ್ಲಾ ವಾಯುನೆಲೆಗಳನ್ನು ಉನ್ನತೀಕರಿಸುತ್ತಾ ಬಂದಿದೆ. ಇದಕ್ಕೆ ಪ್ರತಿಯಾಗಿ ಭಾರತ ಕೂಡ ಅಂತಹ ಹೆಜ್ಜೆ ಇಟ್ಟಿದೆ. 13710 ಅಡಿ ಎತ್ತರದಲ್ಲಿರುವ ನಿಯೋಮ್‌ ವಾಯುನೆಲೆಯು ಭಾರತ ಮತ್ತು ಚೀನಾ ನಡುವಿನ ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ)ಯಿಂದ ಕೇವಲ 35 ಕಿ.ಮೀ. ದೂರದಲ್ಲಿದ್ದು, ವ್ಯೂಹಾತ್ಮಕವಾಗಿ ಮಹತ್ವ ಪಡೆದುಕೊಂಡಿದೆ.

ಇತ್ತೀಚೆಗಷ್ಟೇ 230 ಕೋಟಿ ರು. ವೆಚ್ಚದಲ್ಲಿ ಇದನ್ನು ಉನ್ನತೀಕರಿಸಿ, 2.7 ಕಿ.ಮೀ. ಏರ್‌ಸ್ಟ್ರಿಪ್‌ ವಿಸ್ತರಣೆ, ಭಾರದ ಯುದ್ಧ ವಿಮಾನಗಳನ್ನು ನಿಭಾಯಿಸಬಲ್ಲ ರನ್‌ವೇ ಆಗಿ ಪರಿವರ್ತನೆ, ಹೊಸ ವಾಯು ಸಂಚಾರ ನಿಯಂತ್ರಣ(ಎಟಿಸಿ) ಸಂಕೀರ್ಣ, ಕ್ರಾಷ್‌ ಬೇ ಮತ್ತು ವಸತಿ ವ್ಯವಸ್ಥೆ ನಿರ್ಮಾಣ ಮಾಡಲಾಗಿತ್ತು. ಮೊದಲಿಗೆ, ಲಡಾಖ್‌ನ ಇತರೆ ಭಾಗಗಳಿಗೆ ಶಸ್ತ್ರಾಸ್ತ್ರ ಪೂರೈಸಲು ಇದನ್ನು ಬಳಸಲಾಗುವುದು. 2026ರಲ್ಲಿ ಕಾರ್ಯಾಚರಣೆಗಳನ್ನು ಆರಂಭಿಸಲಾಗುವುದು ಎಂದು ವರದಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ