ಜಮ್ಮು; ಉಗ್ರರು ಮಗನ ಕೊಂದಿದ್ದರು... ಅಂಜದೆ ಕೃಷ್ಣ ಡಾಬಾ ಮತ್ತೆ ಒಪನ್ ಮಾಡಿದ ಅಪ್ಪ

Published : Apr 14, 2021, 03:46 PM IST
ಜಮ್ಮು; ಉಗ್ರರು ಮಗನ ಕೊಂದಿದ್ದರು...  ಅಂಜದೆ ಕೃಷ್ಣ ಡಾಬಾ ಮತ್ತೆ ಒಪನ್ ಮಾಡಿದ ಅಪ್ಪ

ಸಾರಾಂಶ

ಜಮ್ಮು ಕಾಶ್ಮೀರದಲ್ಲಿ ಉಗ್ರ ದಾಳಿ/  ಹೋಟೆಲ್ ಮಾಲೀಕನ ಪುತ್ರನ ಹತ್ಯೆ ಮಾಡಿದ್ದ ಉಗ್ರರು/ ಎರಡು ತಿಂಗಳ ನಂತರ ಕೃಷ್ಣ ಡಾಬಾ ಮತ್ತೆ ಓಪನ್/ ನಾವು ಇಲ್ಲಿಯೆ ಹುಟ್ಟಿ ಬೆಳೆದಿದ್ದೇವೆ

ಶ್ರೀನಗರ (ಏ. 14) ಉಗ್ರಗಾಮಿಗಳು ಮಗನ ಹತ್ಯೆ ಮಾಡಿ ಎರಡು ತಿಂಗಳು ಕಳೆದಿದೆ.  ಆ ಎಲ್ಲ ನೋವನ್ನು ಮೆಟ್ಟಿ ನಿಂತಿರುವ ತಂದೆ ಮತ್ತೆ ತಮ್ಮ ಎಂದಿನ ಕೆಲಸಕ್ಕೆ ಮರಳಿದ್ದಾರೆ.

ಜಮ್ಮು ಕಾಶ್ಮೀರ ಸೋನ್ವಾರ್ ಪ್ರದೇಶದಲ್ಲಿ ಉಗ್ರರು ಕೃಷ್ಣ ಬೋಜನಾಲಯದ ಮಾಲೀಕರ ಪುತ್ರನ ಹತ್ಯೆ ಮಾಡಿದ್ದರು. ತಂದೆ ರಮೇಶ್ ಕುಮಾರ್ ಈಗ ತಮ್ಮ ಹೋಟಲ್ ಮತ್ತೆ ಆರಂಭಿಸಿದ್ದಾರೆ.

ವಿಧ್ವಂಸಕ ಕೃತ್ಯಕ್ಕೆ ಹೊಂಚು ಹಾಕಿದ್ದ ಮದರಸಾ ಶಿಕ್ಷಕ

ಇಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದಿದ್ದೇವೆ, ನಾವು ಇಲ್ಲಿಂದ ಎಲ್ಲಿಗೂ ಹೋಗುವುದಿಲ್ಲ ಎಂದು ರಮೇಶ್ ಕುಮಾರ್ ಹೇಳಿದ್ದಾರೆ. ಉಗ್ರರ ದಾಳಿಗೆ ನಲುಗಿದ್ದ ಕೃಷ್ಣ ಡಾಬಾ ಫೆಬ್ರವರಿಯಿಂ,ದ  ಬಂದ್ ಆಗಿತ್ತು.  ರಮೇಶ್ ಅವರ ಪುತ್ರ ಆಕಾಶ್ ಮೆಹ್ರಾ ಅವರನ್ನುನ ಉಗ್ರರು ಅತಿ ಹತ್ತಿರದಿಂದ ಶೂಟ್ ಮಾಡಿದ್ದರು.

ಗಂಭೀರ ಗಾಯಗೊಂಡಿದ್ದ ಆಕಾಶ್ ಆಸ್ಪತ್ರೆಯಲ್ಲಿ ಸಾವು ಕಂಡಿದ್ದರು.  ಪ್ರಕರಣಕ್ಕೆ ಸಂಬಂಧಿಸಿ ಲಕ್ಷರ್-ಇ-ತೋಯ್ಬಾ ಸೋಘಟನೆಗೆ ಸೇರಿದ ಮೂವರನ್ನು ಜಮ್ಮು ಪೊಲೀಸರರು ಬಂಧಿಸಿದ್ದರು. ಮುಸ್ಲಿಂ ಜನ್ ಬಜ್ ಪೋರ್ಸ್ ದಾಳಿಯ ಹೊಣೆ ಹೊತ್ತುಕೊಂಡಿತ್ತು. ಪ್ರವಾಸಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಡುವ ಪ್ರದೇಶದಲ್ಲಿ ಕಷ್ಣ ಡಾಬಾ ಇದೆ.  ವಿದೇಶದ ನಿಯೋಗವೊಂದು  ಭೇಟಿ ನೀಡಿದ್ದ ವೇಳೆ ದಾಳಿಯಾಗಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?