ಭಿಕ್ಷುಕಿಯ ಮನೆಯಲ್ಲಿತ್ತು ಕೆಟಿಎಂ ಬೈಕ್, 12 ವಿವಿಧ ಬ್ರಾಂಡ್‌ನ ಫೋನ್ ಇನ್ನೂ ಏನೇನೋ?

Published : Feb 05, 2025, 03:08 PM ISTUpdated : Feb 06, 2025, 11:00 AM IST
ಭಿಕ್ಷುಕಿಯ ಮನೆಯಲ್ಲಿತ್ತು ಕೆಟಿಎಂ ಬೈಕ್, 12 ವಿವಿಧ ಬ್ರಾಂಡ್‌ನ ಫೋನ್ ಇನ್ನೂ ಏನೇನೋ?

ಸಾರಾಂಶ

ಬಿಹಾರದ ಮುಜಾಫರ್‌ಪುರದಲ್ಲಿ ಭಿಕ್ಷುಕಿಯೋರ್ವಳ ಮನೆಯಲ್ಲಿ ಕೆಟಿಎಂ ಬೈಕ್, ಚಿನ್ನ, ವಿದೇಶಿ ನಾಣ್ಯಗಳು ಪತ್ತೆಯಾಗಿದ್ದು, ಮಹಿಳೆಯನ್ನು ಬಂಧಿಸಲಾಗಿದೆ ಆಕೆಯ ಅಳಿಯ ಪರಾರಿಯಾಗಿದ್ದಾನೆ.

ಪಾಟ್ನಾ: ಕಳವು ಪ್ರಕರಣದಲ್ಲಿ ಭಿಕ್ಷುಕನೋರ್ವ ಭಾಗಿಯಾಗಿದ್ದಾನೆ ಎಂಬ ಆರೋಪದ ಮೇಲೆ ಆತನ ಮನೆಗೆ ತೆರಳಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಶಾಕ್ ಕಾದಿತ್ತು.  ಅಲ್ಲಿ ಕೆಟಿಎಂ ಬೈಕ್, 12 ವಿವಿಧ ಬ್ರಾಂಡ್‌ಗಳ ಮೊಬೈಲ್ ಫೋನ್, ನೇಪಾಳ, ಅಫ್ಘಾನಿಸ್ತಾನ ಕುವೈತ್‌  ಸೇರಿದಂತೆ ವಿವಿಧ ದೇಶಗಳಿಗೆ  ಸಂಬಂಧಿಸಿದ ನಾಣ್ಯಗಳು, ಚಿನ್ನದ ಚೈನ್ ಹಾಗೂ ಚಿನ್ನದ ಆಭರಣಗಳನ್ನು ನೋಡಿ ಪೊಲೀಸರು ಬೆಚ್ಚಿ ಬಿದ್ದಿದ್ದರು. ಇಂತಹ ಘಟನೆಯೊಂದು ನಡೆದಿರುವುದು ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ. 

ಈ ಘಟನೆಗೆ ಸಂಬಂಧಿಸಿದಂತೆ ಗ್ರಾಮೀಣ ವಿಭಾಗದ ಎಸ್‌ಪಿ ವಿದ್ಯಾ ಸಾಗರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು,  ಸ್ಥಳೀಯರು ಹೇಳುವಂತೆ ನೀಲಂ ದೇವಿ ಎಂಬ ಮಹಿಳೆ ಭಿಕ್ಷುಕಿಯಾಗಿದ್ದು, ಜನವಸತಿ ಪ್ರದೇಶದಲ್ಲಿ ಮನೆ ಮನೆಗೆ ಹೋಗಿ ಭಿಕ್ಷೆ ಬೇಡುತ್ತಿದ್ದಳು. ಆದರೆ ಇತ್ತೀಚೆಗೆ, ಆಕೆ ಸೊಳ್ಳೆ ಪರದೆಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದರು.  ಆದರೆ ಭಿಕ್ಷಾಟನೆಯ ಹಿಂದಿನ ನಿಜವಾದ ಉದ್ದೇಶ ತನ್ನ ಕಳ್ಳತನದ ಗುರಿಗಳನ್ನು ಗುರುತಿಸುವುದಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಈಕೆ ಹಗಲು ಮನೆ ಮನೆ ಬಂದು ಸ್ಥಳ ನೋಡಿಕೊಂಡು ಹೋಗುತ್ತಿದ್ದಾರೆ ರಾತ್ರಿ ಈಕೆಯ ಅಳಿಯ ಕೆಲ ನಿರ್ದಿಷ್ಠ ಸ್ಥಳಗಳಲ್ಲಿದ್ದ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದ ಎಂದು ಹೇಳಿದ್ದಾರೆ. 

ಘಟನೆಗೆ ಸಂಬಂಧಿಸಿದಂತೆ ನೀಲಂ ದೇವಿಯನ್ನು ಬಂಧಿಸಲಾಗಿದ್ದು, ಆತನ ಅಳಿಯ ಚುಟುಕ್ ಲಾಲ್ ಪರಾರಿಯಾಗಿದ್ದಾನೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ವಶಪಡಿಸಿಕೊಂಡ ಎಲ್ಲಾ ವಸ್ತುಗಳು ತನ್ನ ಅಳಿಯನಿಗೆ ಸೇರಿದ್ದು ಎಂದು ನೀಲಂ ದೇವಿ ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಮನೆಯಿಂದ ವಶಪಡಿಸಿಕೊಂಡ ಕೆಟಿಎಂ ಬೈಕ್ ಅನ್ನು ಕಳ್ಳತನಕ್ಕೆ ಬಳಸಲಾಗುತ್ತಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ವಶಪಡಿಸಿಕೊಂಡ ವಸ್ತುಗಳಲ್ಲಿ ವಿವಿಧ ಬ್ರಾಂಡ್‌ಗಳ 12 ಮೊಬೈಲ್ ಫೋನ್‌ಗಳು, ನೇಪಾಳ, ಅಫ್ಘಾನಿಸ್ತಾನ ಮತ್ತು ಕುವೈತ್‌ನ ನಾಣ್ಯಗಳು, ಚಿನ್ನದ ಸರ ಮತ್ತು ಇತರ ಚಿನ್ನದ ಆಭರಣಗಳು ಮತ್ತು ಕೆಟಿಎಂ ಬೈಕ್ ಸೇರಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಮಹಿಳೆಯ ಅಳಿಯ ಪರಾರಿಯಾಗಿದ್ದಾನೆ ಮತ್ತು ಆತನ ಬಂಧನವಾದರೆ ಆತನ ಗ್ಯಾಂಗ್‌ನ ಉಳಿದವರನ್ನು ಪತ್ತೆ ಮಾಡಲು ಸುಲಭವಾಗುತ್ತದೆ. ವಿದೇಶಿ ನಾಣ್ಯಗಳು ಆಕೆಯ ಮನೆಗೆ ಹೇಗೆ ತಲುಪಿದವು ಎಂಬುದರ ಕುರಿತು ನಾವು ತನಿಖೆ ನಡೆಸುತ್ತಿದ್ದೇವೆ. ಮಹಿಳೆಯನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಎಸ್‌ಪಿ ವಿದ್ಯಾ ಸಾಗರ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ