ಹೆಚ್ಚು ಲೈಕ್ಸ್ ಹಾಗೂ ಕಮೆಂಟ್ ಪಡೆಯಲು, ರಾತ್ರೋರಾತ್ರಿ ಜನಪ್ರಿಯರಾಗಲು ಸೇರಿದಂತೆ ಹಲವು ಕಾರಣಗಳಿಂದ ಹುಚ್ಚು ವಿಡಿಯೋ ರೆಕಾರ್ಡ್ ಮಾಡುವುದು ಕೆಲವರಿಗೆ ಸಾಮಾನ್ಯವಾಗಿದೆ. ಹೀಗೆ ಸ್ಟಂಟ್ ವಿಡಿಯೋ ರೆಕಾರ್ಡ್ ಮಾಡಲು 300 ಅಡಿ ಎತ್ತರಿಂದ ಹೂಗ್ಲಿ ನದಿಗೆ ಇಬ್ಬರು ಯುವಕರು ಹಾರಿದ್ದಾರೆ. ಮುಂದೇನಾಯ್ತು ಇಲ್ಲಿದೆ ವಿಡಿಯೋ.
ಕೋಲ್ಕತಾ(ಫೆ.08): ಬರೋಬ್ಬರಿ 300 ಅಡಿ ಎತ್ತರಿದಿಂದ ತುಂಬಿ ಹರಿಯುತ್ತಿರುವ ನದಿಗೆ ಹಾರಲು ಗುಂಡಿಗೆ ಬೇಕು. ಸೇತುವೆ ಮೇಲಿಂದ ಹಾದು ಹೋಗುವಾಗ ಕಳೆಗ ನೋಡಲು ಭಯವಾಗುತ್ತೆ. ಆದರೆ ಈ ಯುವಕರು ಕೋಲ್ಕತಾದಲ್ಲಿರುವ ಹೂಗ್ಲಿ ನದಿಗೆ(ಗಂಗಾ ನದಿ) ಅಡ್ಡಲಾಗಿ ಕಟ್ಟಿರುವ ವಿದ್ಯಾಸಾಗರ್ ಸೇತುವೆ(ಹೂಗ್ಲಿ ಸೇತುವೆ)ಯಿಂದ ಯುವಕರು ಹಾರಿ ಸಾಹಸ ಪ್ರದರ್ಶಿಸಿದ್ದಾರೆ.
undefined
ಹ್ಯಾರಿ ಹೌದಿನಿ ಆಗ್ತಿನಿ ಅಂತಾ ಹೂಗ್ಲಿ ನದಿಗೆ ಹಾರಿದವ ಮೇಲೆಳಲಿಲ್ಲ!..
ಯುವಕರ ಗುಂಪು ಸೇತುವೆ ಗ್ರಿಲ್ ಬಳಿ ನಿಂತು ಧೈರ್ಯ ಪ್ರದರ್ಶಿಸಿದ್ದಾರೆ. ಇದರಲ್ಲಿ ಇನ್ನಿಬ್ಬರು ಯುವಕರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ನದಿಗೆ ಹಾರಿದ್ದಾರೆ. ಹಾರಿದ ಇಬ್ಬರಲ್ಲಿ ಓರ್ವ ನಾಪತ್ತೆಯಾಗಿದ್ದಾನೆ. ಮತ್ತೊರ್ವನನ್ನು ರಕ್ಷಿಸಲಾಗಿದೆ. ಹುಚ್ಚು ಸಾಹಸ ದುರಂತದಲ್ಲಿ ಅಂತ್ಯವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಇದೆಂಥಾ ದುಸ್ಸಾಹಸ! ಮಾರಣಾಂತಿಕ ನೆರೆಯಲ್ಲಿ ಈಜಲು ಹೋದ ವ್ಯಕ್ತಿ ಕಣ್ಮರೆ
ಸ್ಟಂಟ್ ವಿಡಿಯೋ ಚಿತ್ರೀಕರಣಕ್ಕಾಗಿ ಈ ಯುವಕರು ಸಾಹಸ ಪ್ರದರ್ಶನ ಮಾಡಿದ್ದಾರೆ. ನದಿಗೆ ಹಾರಿದ ಇಬ್ಬರು ಯುವಕರಲ್ಲಿ ವರ್ಷದ ಮೊಹಮ್ಮದ್ ಝಾಕೀರ್ ಸರ್ದಾರ್ ನಾಪತ್ತೆಯಾಗಿದ್ದಾನೆ. ಮತ್ತೊರ್ವ ಮೊಹಮ್ಮದ್ ತಸ್ತಿಗೀರ್ ಅಲಮ್‌ನನ್ನು ರಕ್ಷಿಸಲಾಗಿದೆ. ಇನ್ನು ಕೆಲ ಯುವಕರು ಸೇತುವ ಅಂಚಿನಲ್ಲಿ ನಿಂತು ಸಾಹಸ ಪ್ರದರ್ಶಿಸಿದ್ದಾರೆ. ಇವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ನಾಪತ್ತೆಯಾಗ ಯುವಕನ ತಂದೆ ದೂರು ದಾಖಲಿಸಿದ್ದಾರೆ. ರಕ್ಷಣಾ ಪಡೆ ನಾಪತ್ತೆಯಾದ ಯುವಕನಿಗಾಗಿ ಹುಡುಕಾಟ ಆರಂಭಿಸಿದೆ. ಮಧ್ಯಾಹ್ನ 1.30ಕ್ಕೆ ಯುವಕರು ನದಿ ಹಾರಿ ಸಾಹಸ ಪ್ರದರ್ಶಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.