ಪಶ್ಚಿಮ ಬಂಗಾಳದ ಟಿಎಂಸಿ ನಾಯಕಿ ಅಮೃತಾ ಎಕ್ಕಾ ಅವರ ಪತಿ ಫ್ರಾನ್ಸಿಸ್ ಎಕ್ಕಾ ಬಳಿ ಅಪರೂಪದ ವಿಕಿರಣಶೀಲ ರಾಸಾಯನಿಕ 'ಕ್ಯಾಲಿಫೋರ್ನಿಯಂ' ಪತ್ತೆಯಾಗಿದೆ. ದಾಳಿಯಲ್ಲಿ ಡಿಆರ್‌ಡಿಒಗೆ ಸಂಬಂಧಿಸಿದ ದಾಖಲೆಗಳು ಸಿಕ್ಕಿದ್ದು, ಫ್ರಾನ್ಸಿಸ್‌ನನ್ನು ಬಂಧಿಸಲಾಗಿದೆ.
ಕೋಲ್ಕತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ನಾಯಕಿ ಅಮೃತಾ ಎಕ್ಕಾ ಅವರ ಪತಿಯ ಬಳಿ ಅಪರೂಪದ, ಅತ್ಯಂತ ದುಬಾರಿ ಮೌಲ್ಯದ ಹಾಗೂ ಬಲು ಅಪಾಯಕಾರಿಯಾದ 'ಕ್ಯಾಲಿಫೋರ್ನಿಯಂ' ಎಂಬ ವಿಕಿರಣಶೀಲ ರಾಸಾಯನಿಕ ವಸ್ತು ಪತ್ತೆಯಾಗಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ. ಡಾರ್ಜಿಲಿಂಗ್ ಜಿಲ್ಲೆಯ ನಕ್ಸಲ್‌ಬರಿಯಲ್ಲಿರುವ ಫ್ರಾನ್ಸಿಸ್ ಎಕ್ಕಾ ನಿವಾಸದ ಮೇಲೆ ಪೊಲೀಸರು ನಡೆಸಿದ ದಾಳಿ ವೇಳೆ ರಕ್ಷಣಾ ಅಭಿವೃದ್ಧಿ ಹಾಗೂ ಸಂಶೋಧನೆ ಸಂಸ್ಥೆ (ಡಿಆರ್‌ಡಿಒ)ಗೆ ಸಂಬಂಧಿಸಿದ ದಾಖಲೆಗಳು ಕೂಡ ಸಿಕ್ಕಿವೆ. ಫ್ರಾನ್ಸಿಸ್ ಮನೆಲೀ ಪತ್ತೆ ಯಾದ ಕ್ಯಾಲಿಫೋರ್ನಿಯಂ ಎಷ್ಟು ಪ್ರಮಾಣದ್ದಾಗಿದೆ ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಅಣು ರಿಯಾಕ್ಟರ್‌ನಂತಹ ಅತ್ಯಂತ ಭದ್ರತಾ ಕ್ಷೇತ್ರಗಳಲ್ಲಿ ಇದನ್ನು ಬಳಸಲಾಗುತ್ತದೆ. ಪ್ರತಿ ಗ್ರಾಂಗೆ 17 ಕೋಟಿ ವರೆಗೂ ಬೆಲೆ ಇದೆ. ಈಹಿನ್ನೆಲೆ ಫ್ರಾನ್ಸಿಸ್ ಎಕ್ಕಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಸಂಭಲ್ ಬೆನ್ನಲ್ಲೇ ಮತ್ತೊಂದು ಮಸೀದಿ ವಿವಾದ
ಬದಾಯೂಂ: ರಾಜಸ್ಥಾನದ ಅಜೇರ್‌ನ ಮೊಯಿನುದ್ದೀನ್ ಚಿಸ್ತಿ ದರ್ಗಾ, ಉತ್ತರ ಪ್ರದೇಶದ ಸಂಭಲ್ ಮಸೀದಿಗಳನ್ನು ದೇಗುಲ ಧ್ವಂಸಗೊಳಿಸಿ ನಿರ್ಮಿಸಲಾಗಿತ್ತು ಎಂಬ ಆರೋಪದ ನಡುವೆಯೇ, ಉತ್ತರಪ್ರದೇಶದ ಮತ್ತೊಂದು ಮಸೀದಿಯ ವಿರುದ್ದವೂ ಇಂಥದ್ದೇ ಆರೋಪ ಕೇಳಿಬಂದಿದ್ದು ಭಾರೀ ಸುದ್ದಿ ಮಾಡಿದೆ. ಬದಯೂಂನಲ್ಲಿರುವ 850 ವರ್ಷ ಹಳೆ ಯದಾದ ಶಾಮ್ಪಿ ಶಾಹಿ ಮಸೀದಿ ಜಾಗದಲ್ಲಿ ಈ ಹಿಂದೆ ನೀಲಕಂಠ ಮಹಾದೇವ ದೇಗುಲವಿತ್ತು ಎಂದು ಅಖಿಲ ಭಾರತ ಹಿಂದೂ ಮಹಾ ಸಭಾ ಎಂಬ ಸಂಘಟನೆ ನ್ಯಾಯಾಲಯದಲ್ಲಿ 2022ರಲ್ಲೇ ಪ್ರಕರಣ ದಾಖಲಿಸಿತ್ತು.
undefined
ಈ ಪ್ರಕರಣದ ಕುರಿತು ಶನಿವಾರ ನ್ಯಾಯಾಲಯ ವಿಚಾರಣೆ ನಡೆಸಿದೆ. ಈ ವೇಳೆ ಮಸೀದಿ ಜಾಗ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸ್ವೀಕಾರಾರ್ಹವಲ್ಲ ಎಂದು ಮುಸ್ಲಿದ್ ಇಂತೆಝಾಮಿಯಾ ಸಮಿತಿ ವಾದ ಮಂಡಿಸಿದೆ. ಪ್ರಕರಣದಲ್ಲಿ ವಕ್ಸ್ ಸಮಿತಿ ಈಗಾಗಲೇ ತನ್ನ ವಾದ ಪೂರ್ಣಗೊಳಿಸಿದ್ದು, ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಡಿ.5ಕ್ಕೆ ಮುಂದೂಡಿದೆ.
ಮಸೀದಿ ಹಿನ್ನೆಲೆ?: ಬದಾಯೂಂನ ಪ್ರಮುಖ ಮಸೀದಿಯಾಗಿರುವ ಶಮಿ ಶಾಹಿ ಮಸೀದಿಗೆ 850 ವರ್ಷಗಳ ಇತಿಹಾಸವಿದೆ. 23500 ಜನರು ಸೇರಬಹುದಾದ ಈ ಮಸೀದಿ ಭಾರತದ 3ನೇ ಅತಿ ಹಳೆಯ ಮತ್ತು 7ನೇ ಅತಿದೊಡ್ಡ ಮಸೀದಿ ಎಂಬ ದಾಖಲೆ ಹೊಂದಿದೆ.
ಇದನ್ನೂ ಓದಿ:News 360: ಕಾಶಿ,ಮಥುರಾ ನಂತರ ಮತ್ತೆರಡು ಮಸೀದಿಗಳ ವಿವಾದ..!
ಇದನ್ನೂ ಓದಿ:ಸಂಭಲ್ ದಂಗೆಕೋರರಿಂದಲೇ ಆಸ್ತಿ ಹಾನಿಯ ಮೊತ್ತ ವಸೂಲಿ!