
ಶ್ರೀನಗರ(ಮೇ.25): ಯಾಸಿನ್ ಮಲಿಕ್... ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಹೆಚ್ಚಿಸಿದ ವ್ಯಕ್ತಿ. ಈತ ಕಣಿವೆಯಲ್ಲಿ ಶಸ್ತ್ರಾಸ್ತ್ರಗಳ ಆಧಾರದ ಮೇಲೆ ಭಯೋತ್ಪಾದನೆಯನ್ನು ಹರಡಿ, ಕಾಶ್ಮೀರದ ಸ್ವಾತಂತ್ರ್ಯವನ್ನು ಪ್ರತಿಪಾದಿಸುತ್ತಲೇ ಇದ್ದಾತ. ಇಂದು ಅದೇ ಯಾಸಿನ್ ಮಲಿಕ್ ಶಿಕ್ಷೆ ಪ್ರಕಟವಾಗಲಿದೆ. ಮಲಿಕ್ ಶಿಕ್ಷೆಗೆ ಪಾಕಿಸ್ತಾನದಲ್ಲಿ ಕೋಲಾಹಲ ಎದ್ದಿದೆ. ಯಾಸಿನ್ ಮಲಿಕ್ ಪತ್ನಿ ಮುಶಾಲ್ ಹುಸೇನ್ ಮಲಿಕ್ ಕೂಡ ಬಹಿರಂಗವಾಗಿ ಪತಿ ಬೆಂಬಲಕ್ಕೆ ನಿಂತಿದ್ದಾಳೆ.
1986 ರಲ್ಲಿ ಜನಿಸಿದ ಮುಶಾಲ್ ಹುಸೇನ್ ಪಾಕಿಸ್ತಾನದ ಕರಾಚಿ ನಿವಾಸಿ. ಈಕೆ ಪಾಕಿಸ್ತಾನದ ಅತ್ಯಂತ ಶ್ರೀಮಂತ ಕುಟುಂಬದಿಂದ ಬಂದವಳು. ಯಾಸಿನ್ ಮಲಿಕ್ ಮತ್ತು ಮುಶಾಲ್ ಫೆಬ್ರವರಿ 2009 ರಲ್ಲಿ ವಿವಾಹವಾದರು. 2012 ರಲ್ಲಿ, ಈ ದಂಪತಿಗೆ ಒಂದು ಹೆಣ್ಣು ಮಗು ಹುಟ್ಟಿತು. ಈ ಮಗುವಿನ ಹೆಸರು ರಜಿಯಾ ಸುಲ್ತಾನ್. ಮುಶಾಲ್ ತನ್ನ ಪತಿ ಯಾಸಿನ್ ಗಿಂತ 20 ವರ್ಷ ಚಿಕ್ಕವಳು.
ಕಾಶ್ಮೀರಿ ಪಂಡಿತರ ನರಮೇಧದಲ್ಲಿ ಭಾಗಿಯಾದ ಉಗ್ರರ ವಿರುದ್ಧ ತನಿಖೆ ಮಾಡಿ
ಮುಶಾಲ್ ಹುಸೇನ್ ತಂದೆ ಎಂಎ ಹುಸೇನ್ ಅವರು ಪ್ರಸಿದ್ಧ ಅರ್ಥಶಾಸ್ತ್ರಜ್ಞರಾಗಿದ್ದರು. ಮುಶಾಲ್‌ನ ತಾಯಿ ರೆಹಾನಾ ಪಾಕಿಸ್ತಾನಿ ಮುಸ್ಲಿಂ ಲೀಗ್‌ನ ನಾಯಕಿ. ಮುಶಾಲ್ ಅವರ ಸಹೋದರ ಯುಎಸ್‌ನಲ್ಲಿ ವಿದೇಶಾಂಗ ನೀತಿ ವಿಶ್ಲೇಷಕರಾಗಿದ್ದಾರೆ.
ಯಾಸಿನ್ ಮತ್ತು ಮುಶಾಲ್ ಮದುವೆಯಾದದ್ದು ಹೇಗೆ?
ಮುಶಾಲ್ ಮತ್ತು ಯಾಸಿನ್ 2005 ರಲ್ಲಿ ಭೇಟಿಯಾದರು. ಆಗ ಯಾಸಿನ್ ಪಾಕಿಸ್ತಾನದಲ್ಲಿದ್ದ. ಕಾಶ್ಮೀರದ ಪ್ರತ್ಯೇಕತಾವಾದಿ ಚಳವಳಿಗೆ ಪಾಕಿಸ್ತಾನದ ಬೆಂಬಲ ಪಡೆಯಲು ಅವರು ಅಲ್ಲಿಗೆ ಹೋಗಿದ್ದ. ಈ ವೇಳೆ ಯಾಸಿನ್ ಮುಶಾಲ್ ಅವರನ್ನು ಭೇಟಿಯಾದರು. ಪ್ರತ್ಯೇಕತಾವಾದಿ ಯಾಸಿನ್ ಮಲಿಕ್ ಭಾಷ ಕೇಳಿದ ನಂತರ, ಮುಶಾಲ್ ತುಂಬಾ ಪ್ರಭಾವಿತಳಾದಳು, ನಂತರ ಇಬ್ಬರೂ ಪ್ರೀತಿಸಿದರು. ಇದಾದ ಬಳಿಕ ಮುಶಾಲ್ ಮತ್ತು ಯಾಸಿನ್ ಅವರ ತಾಯಿ ಹಜ್ ಯಾತ್ರೆಯಲ್ಲಿ ಭೇಟಿಯಾದರು, ಅಲ್ಲಿ ಅವರು ತಮ್ಮ ಮದುವೆಯ ವಿಷಯವನ್ನು ನಿಶ್ಚಯಪಡಿಸಿಕೊಂಡರು.
ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮುಶಾಲ್ 'ನಾನು ಯಾಸಿನ್ ಬಳಿಗೆ ಹೋಗಿ, ಅವರ ಮಾತು ನನಗೆ ಇಷ್ಟವಾಯಿತು ಎಂದು ಹೇಳಿದೆ. ನಾನು ಅವರ ಕೈಕುಲುಕಿದೆ. ಬಳಿಕ ಅವರು ತಮ್ಮ ಆಟೋಗ್ರಾಫ್ ನೀಡಿದರು. ಇದಾದ ನಂತರ ಸಂಭಾಷಣೆ ಪ್ರಾರಂಭವಾಯಿತು ಮತ್ತು ಒಂದು ದಿನ ಯಾಸಿನ್ ಮುಶಾಲ್‌ಗೆ ಪ್ರಪೋಜ್ ಮಾಡಿದ. ಈ ವೇಳೆ ಯಾಸಿನ್ ಮುಶಾಲ್‌ಗೆ ಬಳಿ ನಾನು ಪಾಕಿಸ್ತಾನವನ್ನು ಇಷ್ಟಪಡುತ್ತೇನೆ, ಅದರಲ್ಲೂ ವಿಶೇಷವಾಗಿ ನೀನು ನನಗಿಷ್ಟ' ಎಂದಿದ್ದ ಎಂದು ಉಲ್ಲೇಖಿಸಿದ್ದಳು.
Jammu and Kashmir: ಲಷ್ಕರ್‌ನ ಐವರು ಹೈಬ್ರಿಡ್ ಉಗ್ರರ ಬಂಧನ!
ಮುಶಾಲ್ ಹುಸೇನ್ ಕಾಶ್ಮೀರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಪೋಸ್ಟ್ ಮಾಡುತ್ತಲೇ ಇರುತ್ತಾಳೆ. ಅವರು ಯಾಸಿನ್ ಮಲಿಕ್ ಬಗ್ಗೆ ಅನೇಕ ಭಾರತ ವಿರೋಧಿ ಪೋಸ್ಟ್‌ಗಳನ್ನು ಮಾಡಿದ್ದಾಳೆ. ಈ ಪೋಸ್ಟ್ ಅನ್ನು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸೇರಿದಂತೆ ಇತರ ನಾಯಕರು ಸಹ ಬೆಂಬಲಿಸಿದ್ದಾರೆ. ಮುಶಾಲ್ ಭಾರತ ಸರ್ಕಾರದಿಂದ ಯಾಸಿನ್ ಬಿಡುಗಡೆಗೆ ಒತ್ತಾಯಿಸಿದ್ದಾಳೆ. ಅತ್ತ ಯಾಸಿನ್ ಬಿಡುಗಡೆಗೆ ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.
2017 ರಲ್ಲಿ, ಜೆಕೆಎಲ್‌ಎಫ್ ನಾಯಕ ಯಾಸಿನ್ ಮಲಿಕ್ ವಿರುದ್ಧ ಎನ್‌ಐಎ ಭಯೋತ್ಪಾದನೆ ನಿಧಿಯ ಪ್ರಕರಣವನ್ನು ದಾಖಲಿಸಿತ್ತು. ಪಾಕಿಸ್ತಾನದಿಂದ ಹಣ ಪಡೆದು ಕಾಶ್ಮೀರದಲ್ಲಿ ಪ್ರತ್ಯೇಕತಾವಾದ ಮತ್ತು ಭಯೋತ್ಪಾದನೆಯನ್ನು ಹೆಚ್ಚಿಸುತ್ತಿದ್ದಾನೆ ಎನ್ನಲಾಗಿತ್ತು. ನಂತರ 19 ಮೇ 2022 ರಂದು, NIA ನ್ಯಾಯಾಲಯವು ಯಾಸಿನ್ ಮಲಿಕ್ ತಪ್ಪಿತಸ್ಥ ಎಂದು ಘೋಷಿಸಿತು. ಇದೀಗ ಆತನ ಶಿಕ್ಷೆಯ ಪ್ರಮಾಣ ಇಂದು ಪ್ರಕಟವಾಗಬೇಕಿದೆ. ಯಾಸಿನ್ ಮಲಿಕ್ ಸದ್ಯ ತಿಹಾರ್ ಜೈಲಿನಲ್ಲಿದ್ದಾನೆ.
1990 ರಲ್ಲಿ 4 ವಾಯುಪಡೆ ಸಿಬ್ಬಂದಿಯನ್ನು ಕೊಂದ ಆರೋಪವೂ ಮಲಿಕ್ ಮೇಲಿದೆ, ಅದನ್ನು ಆತನೇ ಒಪ್ಪಿಕೊಂಡಿದ್ದಾನೆ. ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬಿಯಾ ಸಯೀದ್ ಅವರನ್ನು ಅಪಹರಿಸಿದ ಆರೋಪವೂ ಅವನ ಮೇಲಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ