
ಲುಧಿಯಾನ(ಜ.12): ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶದ ರಾಜಕಾರಣದಲ್ಲಿ ಸದ್ಯ ಮಿಂಚುತ್ತಿರುವ ಧ್ರುವತಾರೆಗಳು. ಈ ದೇಶದಲ್ಲಿ ಮೋದಿ-ಶಾ ಜೋಡಿಗೆ ಮರುಳಾಗದವರಿಲ್ಲ. ವಿರೋಧಿಗಳೂ ಕೂಡ ಅವರ ನಡುವಿನ ಒಗ್ಗಟ್ಟನ್ನು ಕೊಂಡಾಡುತ್ತಾರೆ.
ದೇಶಕ್ಕೆ ಹೊಸ ಭರವಸೆ ನೀಡಿ ಅದರಂತೆ ಆಡಳಿತ ನಡೆಸುತ್ತಿರುವ ಮೋದಿ-ಶಾ ಜೋಡಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಉತ್ತರದ ಕಾಶ್ಮೀರದಿಂದ ಹಿಡಿದು, ದಕ್ಷಿಣದ ಕನ್ಯಾಕುಮಾರಿವರೆಗೆ, ಪೂರ್ವದ ಅರುಣಾಚಲ ಪ್ರದೇಶದಿಂದ ಹಿಡಿದು ಪಶ್ಚಿಮದ ಗುಜರಾತ್‌ವರೆಗೆ ಮೋದಿ-ಶಾ ಜೋಡಿಯನ್ನು ಪ್ರಶಂಸಿಸುವವರ ಸಂಖ್ಯೆಗೇನೂ ಕಡಿಮೆಯಿಲ್ಲ.
ಮೋದಿ-ಶಾ ಆಡಿದ್ದ ’ಮಂಡಲದ ಆಟದ’ ಪರಿಣಾಮವೇ ಆರ್ಟಿಕಲ್ 370 ರದ್ದು!
ಅದರಂತೆ ಮಕರ ಸಂಕ್ರಾಂತಿ ಹಬ್ಬಕ್ಕಾಗಿ ಲುಧಿಯಾನದ ಮಾರುಕಟ್ಟೆಯಲ್ಲಿ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಭಾವಚಿತ್ರವುಳ್ಳ ಗಾಳಿಪಟಗಳು ರಾರಾಜಿಸುತ್ತಿವೆ. ಪಂಜಾಬ್‌ನಲ್ಲಿ ಮಕರ ಸಂಕ್ರಾಂತಿಯನ್ನು ಲೋಹ್ರಿ ಎಂದು ಕರೆಯಲಾಗುತ್ತದೆ.
ಮಕರ ಸಂಕ್ರಾಂತಿಯನ್ನು ಸ್ವಾಗತಿಸಲು ಸಜ್ಜಾಗಿರುವ ಲುಧಿಯಾನ ನಗರದಲ್ಲಿ ಗಾಳಿಪಟಗಳ ಅಬ್ಬರ ಜೋರಾಗಿದೆ. ಜೋಡಿ ನಂ.1 ಹೆಸರಲ್ಲಿ ಮೋದಿ-ಶಾ ಅವರ ಭಾವಚಿತ್ರವುಳ್ಳ ಗಾಳಿಪಟಗಳು ಭರ್ಜರಿ ಮಾರಾಟವಾಗುತ್ತಿವೆ.
ಇವಿಷ್ಟೇ ಅಲ್ಲದೇ ಸಿಖ್‌ರು ಹೆಚ್ಚಾಗಿರುವ ಕೆನಡಾ ಹಾಗೂ ಆಸ್ಟ್ರೆಲೀಯಾ ದೇಶಗಳ ರಾಷ್ಟ್ರಧ್ವಜಗಳ ಗಾಳಿಪಟಗಳೂ ಭರ್ಜರಿ ಮಾರಾಟವಾಗುತ್ತಿವೆ. ಪಂಜಾಬ್‌ನಲ್ಲಿ ಮಕರ ಸಂಕ್ರಾಂತಿಯನ್ನು ಲೋಹ್ರಿ ಎಂದು ಕರೆಯಲಾಗುತ್ತದೆ.
ಜನವರಿ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ವಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ