ಕಿಂಡರ್ ಜಾಯ್, ಸಫೋಲಾ ಸೇರಿ ಹಲವು ಉತ್ಪನ್ನಕ್ಕೆ ಆಹಾರ ಸುರಕ್ಷತೆ ಪ್ರಾಧಿಕಾರ ನೋಟಿಸ್, ಕಾರಣವೇನು?

Published : Jun 19, 2026, 05:16 PM IST
FSSAI Notice

ಸಾರಾಂಶ

ಮಕ್ಕಳಿಗೆ ನೀವು ಕಿಂಡರ್ ಜಾಯ್ ಕೊಡುತ್ತಿದ್ದೀರಾ? ಇದೀಗ FSSAI ಕಿಂಡರ್ ಜಾಯ್ ಸೇರಿದಂತೆ ಹಲವು ಉತ್ಪನ್ನಗಳಿಗೆ ನೋಟಿಸ್ ನೀಡಿದೆ. ಅಷ್ಟಕ್ಕೂ ಅಹಾರ ಗುಣಮಟ್ಟ ಹಾಗೂ ಸುರಕ್ಷತಾ ಪ್ರಾಧಿಕಾರ ನೋಟಿಸ್ ನೀಡಿದ್ದು ಯಾಕೆ? 

ನವದೆಹಲಿ (ಜೂ.19) ಭಾರತದ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ (FSSAI) ಕಿಂಡರ್ ಜಾಯ್ ಸಫೋಲಾ ಸೇರಿದಂತೆ 14 ಆಹಾರ ಉತ್ಪನ್ನಗಳಿಗೆ ನೋಟಿಸ್ ನೀಡಿದೆ. ಗ್ರಾಹಕರಿಗೆ ಆಗುತ್ತಿರುವ ಮೋಸದ ಕುರಿತು ಬಂದಿರುವ ಹಲವು ದೂರುಗಳನ್ನು ಆಧರಿಸಿ ಇದೀಗ ನೋಟಿಸ್ ನೀಡಿ ಕ್ರಮಕ್ಕೆ ಮುಂದಾಗಿದೆ. ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಯ್ದೆ 2006ರ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ನೋಟಿಸ್ ನೀಡಲಾಗಿದೆ. ಉತ್ಪನ್ನಗಳು ಗ್ರಾಹಕರ ದಾರಿ ತಪ್ಪಿಸುತ್ತಿದೆ. ಹೇಳುವುದು ಒಂದು, ಉತ್ಪನ್ನ ಮತ್ತೊಂದು. ಗ್ರಾಹಕರಿಗೆ ಮೋಸವಾಗುತ್ತಿದೆ ಎಂದು ನೋಟಿಸ್ ನೀಡಲಾಗಿದೆ.

ದಾರಿತಪ್ಪಿಸುವ ಕಿಂಡರ್ ಜಾಯ್

ಕಿಂಡರ್ ಜಾಯ್ ಬಹುತೇಕ ಎಲ್ಲಾ ಮಕ್ಕಳು ಬಯಸುತ್ತಾರೆ. ಇನ್ನು ಪೋಷಕರು ಮಕ್ಕಳು ಕೇಳಿದ ತಕ್ಷಣವೇ ಕೊಡಿಸುತ್ತಾರೆ. ಆದರೆ ಕಿಂಡರ್ ಜಾಯ್‌ ಗ್ರಾಹಕರಿಗೆ ತಪ್ಪು ಮಾಹಿ ನೀಡಿ ಉತ್ಪನ್ನ ಮಾರಾಟ ಮಾಡುತ್ತಿದೆ. ಕಿಂಡರ್ ಜಾಯ್‌ನಲ್ಲಿ ರಿಚ್ ಇನ್ ಮಿಲ್ಕ್ ಸಾಲಿಡ್ಸ್ ( ಗರಿಷ್ಠ ಹಾಲಿನಂಶ) ಹೊಂದಿದೆ ಎಂದಿದೆ . ಆದರೆ ಉತ್ಪನ್ನದಲ್ಲಿ ಹಾಲಿನ ಅಂಶ ಹೇಳಿದಷ್ಟು ಪ್ರಮಾಣದಲ್ಲಿ ಇಲ್ಲ. ಪೋಷಕರನ್ನು ದಾರಿ ತಪ್ಪಿಸುವ ತಂತ್ರ ಬಳಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹೀಗಾಗಿ ನೋಟಿಸ್ ನೀಡಲಾಗಿದೆ.

ಹೃದಯಕ್ಕೆ ಒಳ್ಳೆಯದು ಎನ್ನುತ್ತಿದೆ ಸಫೋಲಾ

ಸಫೋಲಾ ಕುಕಿಂಗ್ ಆಯಿಲ್ ಹೃದಯಕ್ಕೆ ಒಳ್ಳೆಯದು ಎಂದು ಹೇಳಿದ್ದಾರೆ. ಹೃದಯದ ಚಿತ್ರ ಬಳಸಲಾಗಿದೆ. ಗುಡ್ ಫ್ಯಾಟ್ ಬ್ಯಾಲೆನ್ಸ್, ಕಡಿಮೆ ಎಣ್ಣೆ ಹೀರಿಕೊಳ್ಳುವಿಕೆ ಸೇರಿದಂತೆ ಹಲವು ರೀತಿಯಲ್ಲಿ ಗ್ರಾಹಕರನ್ನು ದಾರಿ ತಪ್ಪಿಸುತ್ತಿದೆ. ಸಫೋಲಾ ಎಣ್ಣೆ ಬಳಕೆ ಮಾಡಿದರೆ ಹೃದಯಕ್ಕೆ ಒಳ್ಳೆಯದು, ಫ್ಯಾಟ್ ಬ್ಯಾಲೆನ್ಸ್‌ಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಹೀಗಾಗಿ ನೋಟಿಸ್ ನೀಡಲಾಗಿದೆ.

ಪ್ಲಕ್ ಮಾವಿನ ಜ್ಯೂಸ್ ಪ್ಯಾಕ್ ಮೇಲೆ ಹೆಚ್ಚುವರಿ ಸಕ್ಕರೆ ಸೇರಿಸಿಲ್ಲ ಎಂದು ಬರೆಯಲಾಗಿದೆ. ಆದರೆ ಜ್ಯೂಸ್‌ನಲ್ಲಿ ಸಕ್ಕರೆ ಇದೆ. ರಾ ಪ್ರೆಸ್ಸರಿ ಜ್ಯೂಸ್‌ನಲ್ಲಿ ನೈಸರ್ಗಿಕ ಸಕ್ಕರೆ ಬಳಸಲಾಗಿದೆ ಎಂದಿದೆ. ಆದರೆ ಈ ಜ್ಯೂಸ್‌ನಲ್ಲಿ ಪ್ರಕ್ಟೋಸ್ ಸಕ್ಕರೆ ಬಳಸಲಾಗಿದೆ. ಹೀಗೆ ಗ್ರಾಹಕರನ್ನು ತಪ್ಪು ದಾರಿಗೆ ಎಳೆದು ಗ್ರಾಹಕರಿಗೆ ಮೋಸ ಮಾಡಲಾಗುತ್ತದೆ ಎಂದು ನೋಟಿಸ್ ನೀಡಲಾಗಿದೆ. ತಪ್ಪು ಒಪ್ಪಿಕೊಂಡು ತಕ್ಷಣವೇ ಲೇಬಲ್ , ಜಾಹಿರಾತುಗಳಲ್ಲಿ ಸರಿಪಡಿಸಬೇಕು. ಇಲ್ಲದಿದ್ದರೆ ತಕ್ಷಣವೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಹಾರ ಗುಣಮಟ್ಟ ಹಾಗೂ ಸುರಕ್ಷತಾ ಪ್ರಾಧಿಕಾರ ನೋಟಿಸ್‌ನಲ್ಲಿ ಹೇಳಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ಲೋವಾಕಿಯಾ ಸ್ಪೀಕರ್‌ಗೆ ಪ್ರಧಾನಿ ಮೋದಿ ನೀಡಿದ ತೆಕುವಾ ಗಿಫ್ಟ್ ವಿಶೇಷತೆ ಏನು? ಈ ಸ್ವೀಟ್ ಮೂಲ ಎಲ್ಲಿ?
Farogh Siddique: ಅಜಯ್ ದೇವಗನ್‌ರನ್ನು 'ಆಕ್ಷನ್ ಸ್ಟಾರ್' ಮಾಡಿದ ಖ್ಯಾತ ನಿರ್ದೇಶಕ ಫರೋಗ್ ಸಿದ್ದಿಕಿ ಇನ್ನಿಲ್ಲ!