ಪಡಿತರ ಚೀಟಿದಾರರಿಗೆ ಭರ್ಜರಿ ಸಿಹಿ ಸುದ್ದಿ: 3 ಕೋಟಿ ಹೊಸ ರೇಷನ್ ಕಾರ್ಡ್ ನೀಡಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್!

Published : Jun 19, 2026, 10:04 AM IST
New Ration Card For Magalir Urimai Thogai

ಸಾರಾಂಶ

ರಾಜ್ಯ ಸರ್ಕಾರಗಳು 2.21 ಕೋಟಿ ಅನರ್ಹ ಪಡಿತರ ಚೀಟಿಗಳನ್ನು ತೆಗೆದುಹಾಕುತ್ತಿದ್ದು, ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಅರ್ಹ ಫಲಾನುಭವಿಗಳಿಗೆ ಸುಮಾರು 3 ಕೋಟಿ ಹೊಸ ಪಡಿತರ ಚೀಟಿಗಳನ್ನು ವಿತರಿಸಲು ಅನುಮತಿ ನೀಡಿದೆ. ಪಿಡಿಎಸ್ ವ್ಯವಸ್ಥೆಯ ಡಿಜಿಟಲೀಕರಣದಿಂದಾಗಿ ಈ ಕ್ರಮ ಸಾಧ್ಯವಾಗಿದೆ.

ನವದೆಹಲಿ (ಜೂ.19): ‘ಕೆಲವು ರಾಜ್ಯ ಸರ್ಕಾರಗಳು 2.21 ಕೋಟಿ ಅನರ್ಹ ಪಡಿತರ ಚೀಟಿಗಳನ್ನು ಪಿಡಿಎಸ್ ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆ ನಡೆಸುತ್ತಿದ್ದು, ಇದಾದ ನಂತರ ಅರ್ಹ ಫಲಾನುಭವಿಗಳಿಗೆ ಸುಮಾರು 3 ಕೋಟಿ ಹೆಚ್ಚುವರಿ ಪಡಿತರ ಚೀಟಿಗಳನ್ನು ವಿತರಿಸಲು ಕೇಂದ್ರ ಸರ್ಕಾರ ಅನುಮತಿಸಿದೆ’ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ ಗುರುವಾರ ಹೇಳಿದ್ದಾರೆ. ಸ್ಮಾರ್ಟ್ ವೇರ್‌ಹೌಸಿಂಗ್ ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಜೋಶಿ, ‘ಅನರ್ಹರ ಅಳಿಸುವಿಕೆಯನ್ನು ಕೇಂದ್ರ ಸರ್ಕಾರ ಮಾಡಿಲ್ಲ. ರಾಜ್ಯ ಸರ್ಕಾರಗಳು ತಮ್ಮದೇ ಆದ ಮಾನದಂಡಗಳನ್ನು ಅನುಸರಿಸಿ ಮಾಡಿವೆ’ ಎಂದು ಸ್ಪಷ್ಟಪಡಿಸಿದರು.

‘ಆಹಾರ ಸಚಿವಾಲಯವು ಮೃತ ವ್ಯಕ್ತಿಗಳು, ಆದಾಯ ತೆರಿಗೆ ಪಾವತಿದಾರರು ಮತ್ತು ನಾಲ್ಕು ಚಕ್ರಗಳ ವಾಹನ ಮಾಲೀಕರು ಸೇರಿದಂತೆ 8.51 ಕೋಟಿ ಅನರ್ಹ ಫಲಾನುಭವಿಗಳನ್ನು ಗುರುತಿಸಿ, ಪಟ್ಟಿಯನ್ನು ರಾಜ್ಯಗಳಿಗೆ ಕಳುಹಿಸಿತ್ತು. ಈ 8.51 ಕೋಟಿ ಪಡಿತರ ಚೀಟಿಗಳಲ್ಲಿ, ರಾಜ್ಯಗಳು 2.21 ಕೋಟಿ ಪಡಿತರ ಚೀಟಿಗಳನ್ನು ಹಿಂತೆಗೆದುಕೊಂಡಿವೆ. ನಾವು ಹಿಂತೆಗೆದುಕೊಂಡಿಲ್ಲ. ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಡಿಜಿಟಲೀಕರಣದಿಂದ ಈ ಕ್ರಮ ಸಾಧ್ಯವಾಗಿದೆ’ ಎಂದರು.

ಅರ್ಹ ಫಲಾನುಭವಿಗಳನ್ನು ಸೇರಿಸಲು ಅನುಮತಿ

‘ಅರ್ಹ ಫಲಾನುಭವಿಗಳನ್ನು ಸೇರಿಸಲು ರಾಜ್ಯಗಳಿಗೆ ಅನುಮತಿ ನೀಡಲಾಗಿದೆ ಮತ್ತು ವಿವಿಧ ರಾಜ್ಯ ಸರ್ಕಾರಗಳು ಅರ್ಹ ಜನರಿಗೆ ಸುಮಾರು 3 ಕೋಟಿ ಹೆಚ್ಚಿನ ಪಡಿತರ ಚೀಟಿಗಳನ್ನು ನೀಡಬಹುದು’ ಎಂದೂ ಜೋಶಿ ಹೇಳಿದರು. ದೇಶಾದ್ಯಂತ ಪಟ್ಟಿ ಅಳಿಸುವಿಕೆ ಏಕರೂಪವಾಗಿಲ್ಲ. ಕೆಲವು ರಾಜ್ಯಗಳು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿವೆ, ಇನ್ನು ಕೆಲವು ರಾಜ್ಯಗಳು ಅನರ್ಹ ಫಲಾನುಭವಿಗಳನ್ನು ಇನ್ನೂ ಗುರುತಿಸಿಲ್ಲ. ಕೇಂದ್ರದ ಉದ್ದೇಶ ಉಳಿತಾಯವಲ್ಲ, ಬದಲಿಗೆ ಆಹಾರ ಧಾನ್ಯಗಳು ಅಗತ್ಯವಿರುವವರಿಗೆ ತಲುಪುವಂತೆ ನೋಡಿಕೊಳ್ಳುವುದಾಗಿದೆ’ ಎಂದು ಸ್ಪಷ್ಟಪಡಿಸಿದರು ಎಂದರು.

‘ಎಲ್ಲವನ್ನೂ ಒಟ್ಟುಗೂಡಿಸಿ, ಈಗ ದೇಶದಲ್ಲಿ 79 ಕೋಟಿ ಪಡಿತರ ಚೀಟಿಗಳಿವೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಉಚಿತ ಆಹಾರ ಧಾನ್ಯಗಳನ್ನು ವಿತರಿಸುವ ಗುರಿ 80 ಕೋಟಿ ಆಗಿದೆ’ ಎಂದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಠಾಕ್ರೆ ಪಕ್ಷ ಮತ್ತೊಮ್ಮೆ ಚಿಂದಿ ಚಿತ್ರಾನ್ನ, ದೀದಿ ಬಳಿಕ ಉದ್ಧವ್‌ಗೆ ಶಾಕ್‌
‘ವಾಡಿಕೆ ಮಳೆಯ ಆಸೆನೇ ಬಿಟ್ಟುಬಿಡಿ!’: ದೇಶಾದ್ಯಂತ ಶೇ. 42 ರಷ್ಟು ಮುಂಗಾರು ಕೊರತೆ, ಹವಾಮಾನ ಇಲಾಖೆಯಿಂದ ಶಾಕಿಂಗ್ ನ್ಯೂಸ್!