ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯದ ವಿವಾದ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ನಟಿ, ರಾಜಕಾರಣಿ ಖುಷ್ಬು ಸುಂದರ್ ಪ್ರತಿಕ್ರಿಯಿಸಿದ್ದು, ತಾವು ತಮ್ಮ ತಂದೆಯಿಂದ ದೌರ್ಜನ್ಯಕ್ಕೆ ಒಳಗಾಗಿದ್ದನ್ನು ಮೊದಲೇ ತಿಳಿಸಬೇಕಿತ್ತು ಎಂದಿದ್ದಾರೆ.
ಚೆನ್ನೈ (ಆ.30): ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯದ ವಿವಾದ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ನಟಿ, ರಾಜಕಾರಣಿ ಖುಷ್ಬು ಸುಂದರ್ ಪ್ರತಿಕ್ರಿಯಿಸಿದ್ದು, ತಾವು ತಮ್ಮ ತಂದೆಯಿಂದ ದೌರ್ಜನ್ಯಕ್ಕೆ ಒಳಗಾಗಿದ್ದನ್ನು ಮೊದಲೇ ತಿಳಿಸಬೇಕಿತ್ತು ಎಂದಿದ್ದಾರೆ.
ಬಾಲ್ಯದಲ್ಲಿ ತಂದೆಯಿಂದಲೇ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ ಎಂದು ಖುಷ್ಬು ಹಿಂದೆಯೇ ಹೇಳಿಕೊಂಡಿದ್ದರು. ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾತನಾಡಿದ್ದಾರೆ.
‘ಇಂದು ಮಾತನಾಡುತ್ತಿರೋ, ನಾಳೆ ಮಾತನಾಡುತ್ತಿರೋ ಎನ್ನುವುದು ವಿಚಾರವಲ್ಲ. ಆದರೆ ಮಾತನಾಡಿ. ತಕ್ಷಣವೇ ಮಾತನಾಡಿದರೆ ಪರಿಣಾಮಕಾರಿ ತನಿಖೆಗೆ ಸಹಾಯವಾಗುತ್ತದೆ. ಆರೋಪಿ ಅಪರಿಚಿತನಾಗಿರಲಿ, ಪರಿಚಿತನಾಗಿರಲಿ. ಆಕೆಗೆ ಸಹಾಯ ಬೇಕು. ಕೆಲವರು ನಾನು ತಂದೆಯಿಂದ ಶೋಷಣೆಗೊಳಗಾದ ಬಗ್ಗೆ ಹೇಳಿದಾಗ ಯಾಕೆ ಇಷ್ಟು ಸಮಯ ತೆಗೆದುಕೊಂಡೆ ಎಂದಿದ್ದರು. ನಾನು ಮುಂಚೆಯೇ ಮಾತನಾಡಬೇಕಿತ್ತು. ಒಪ್ಪುತ್ತೇನೆ. ಆದರೆ ನನಗೆ ಏನಾಯಿತು? ವೃತ್ತಿ ಜೀವನ ಕಟ್ಟಿಕೊಳ್ಳುವುದರಲ್ಲಿ ರಾಜಿಯಾಗಲಿಲ್ಲ. ಬಿದ್ದಾಗ ಮೇಲೆತ್ತಬೇಕಾದವರಿಂದಲೇ ದೌರ್ಜನ್ಯಕ್ಕೆ ಒಳಗಾಗದೆ’ ಎಂದು ಬರೆದುಕೊಂಡಿದ್ದಾರೆ.
ನಟಿಯರಿಗೆ ಲೈಂಗಿಕ ಕಿರುಕುಳ.. ಇಂದು, ನಿನ್ನೆಯದಲ್ಲ: ಕಾಸ್ಟಿಂಗ್ ಕೌಚ್ ಬಗ್ಗೆ ನಟಿ ಊರ್ವಶಿ ಸ್ಫೋಟಕ ಹೇಳಿಕೆ