ರೈತ ಪ್ರತಿಭಟನೆಗಳ ವೇಳೆ ಅತ್ಯಾಚಾರಗಳು ನಡೆದಿದ್ದವು’ ಎಂಬ ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಾಣಾವತ್ ಹೇಳಿಕೆಯನ್ನು ಖಂಡಿಸುವ ಭರದಲ್ಲಿ ಅಕಾಲಿ ದಳ (ಅಮೃತಸರ) ಮುಖಂಡ ಮಾಜಿ ಸಂಸದ ಸಿಮ್ರನ್‌ಜಿತ್ ಸಿಂಗ್ ಮಾನ್ ವಿವಾದಿತ ಹೇಳಿಕೆ ನೀಡಿದ್ದಾರೆ. ‘ಕಂಗನಾ ಅತ್ಯಾಚಾರ ವಿಷಯದಲ್ಲಿ ಅನುಭವಿ’ ಎಂಬುದೇ ಆ ವಿವಾದಿತ ಹೇಳಿಕೆ
ಚಂಡೀಗಢ: ‘ರೈತ ಪ್ರತಿಭಟನೆಗಳ ವೇಳೆ ಅತ್ಯಾಚಾರಗಳು ನಡೆದಿದ್ದವು’ ಎಂಬ ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಾಣಾವತ್ ಹೇಳಿಕೆಯನ್ನು ಖಂಡಿಸುವ ಭರದಲ್ಲಿ ಅಕಾಲಿ ದಳ (ಅಮೃತಸರ) ಮುಖಂಡ ಮಾಜಿ ಸಂಸದ ಸಿಮ್ರನ್‌ಜಿತ್ ಸಿಂಗ್ ಮಾನ್ ವಿವಾದಿತ ಹೇಳಿಕೆ ನೀಡಿದ್ದಾರೆ. ‘ಕಂಗನಾ ಅತ್ಯಾಚಾರ ವಿಷಯದಲ್ಲಿ ಅನುಭವಿ’ ಎಂಬುದೇ ಆ ವಿವಾದಿತ ಹೇಳಿಕೆ
‘3 ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುವ ವೇಳೆ ಹೆಣಗಳು ಬಿದ್ದಿದ್ದವು ಹಾಗೂ ಅತ್ಯಾಚಾರ ನಡೆದಿದ್ದವು’ ಎಂದು ಇತ್ತೀಚೆಗೆ ಟೀವಿ ಸಂದರ್ಶನದಲ್ಲಿ ಕಂಗನಾ ಹೇಳಿದ್ದರು. ಈ ಹೇಳಿಕೆ ಬಗ್ಗೆ ಕಂಗನಾಗೆ ಬಿಜೆಪಿ ಖುದ್ದು ಛೀಮಾರಿ ಹಾಕಿತ್ತು. ಈ ಬಗ್ಗೆ ಗುರುವಾರ ಪತ್ರಕರ್ತರು ಮಾನ್ ಅವರನ್ನು ಪ್ರಶ್ನಸಿದಾಗ ‘ಅತ್ಯಾಚಾರ ಹೇಗೆ ಸಂಭವಿಸುತ್ತದೆ ಎಂದು ಅವರನ್ನೇ (ಕಂಗನಾ ಅವರನ್ನೇ) ಕೇಳಿ. ಇದರಿಂದ ಜನರಿಗೂ ತಿಳಿವಳಿಕೆ ಬರುತ್ತದೆ. ಏಕೆಂದರೆ ಅತ್ಯಾಚಾರ ವಿಷಯದಲ್ಲಿ ಅವರು (ಕಂಗನಾ) ತುಂಬಾ ಅನುಭವಿ’ ಎಂದರು.
ಬಾಲಿವುಡ್ ಟು ರಾಜಕೀಯ: ಕಂಗನಾ ರಣಾವತ್ ನೀಡಿದ 10 ವಿವಾದಾತ್ಮಕ ಹೇಳಿಕೆಗಳು
ಕಂಗನಾ ತಿರುಗೇಟು
ಅಕಾಲಿ ನಾಯಕನ ಹೇಳಿಕೆಗೆ ಟ್ವಿಟರ್ ಎಕ್ಸ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಕಂಗಾನ, ಈ ದೇಶದಲ್ಲಿ ಅತ್ಯಾಚಾರವನ್ನು ಕ್ಷುಲ್ಲಕಗೊಳಿಸುವುದನ್ನ ಎಂದಿಗೂ ನಿಲ್ಲಿಸುವುದಿಲ್ಲ ಎಂದು ತೋರುತ್ತದೆ. . ಈ ಹಿರಿಯ ರಾಜಕಾರಣಿಯಾಗಿ ಅತ್ಯಾಚಾರವನ್ನು ಬೈಸಿಕಲ್ ಸವಾರಿಗೆ ಹೋಲಿಕೆ ಮಾಡಿದ್ದಾನೆಂದರೆ ಇಂತವರ ಮನಸ್ಥಿತಿ ಹೇಗಿರಬಹುದು, ಮಹಿಳೆಯರನ್ನ ಯಾವ ನೋಡುತ್ತಿರಬಹುದು. ಅತ್ಯಾಚಾರ ಮೋಜಿಗಾಗಿ ಮಹಿಳೆಯರ ಮೇಲಿನ ದೌರ್ಜನ್ಯವಾಗಿ ಬೇರೂರಿವೆ ಎಂದರೆ ಇಂತಹ ಮನಸ್ಥಿತಿ ಕಾರಣ ಎಂದು ತಿರುಗೇಟು ನೀಡಿದ್ದಾರೆ.
ನಡ್ಡಾ ಜತೆ ಕಂಗನಾ ಭೇಟಿ:
ಈ ನಡುವೆ ವಿವಾದಿತ ಹೇಳಿಕೆ ನೀಡಿ ಛೀಮಾರಿಗೆ ಒಳಗಾಗಿದ್ದ ಕಂಗನಾ ಗುರುವಾರ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದರು. ಈ ವೇಳೆ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದರು ಎನ್ನಲಾಗಿದೆ.