ರೈತರಿಂದ ಒತ್ತಡಕ್ಕೆ ಸಿಲುಕಿದ ಶಾಸಕರು: ಸರ್ಕಾರ ಉಳಿಸುವ ಯತ್ನದಲ್ಲಿ ಮುಖ್ಯಮಂತ್ರಿ!

By Suvarna NewsFirst Published Jan 12, 2021, 12:50 PM IST
Highlights

ದಿನೇ ದಿನೇ ಹೆಚ್ಚಾಗುತ್ತಿfದೆ ರೈತರ ಪ್ರತಿಭಟನೆ| ರೈತ ಪ್ರತಿಭಟನೆಯಿಂದ ಇಕ್ಕಟ್ಟಿಗೆ ಸಿಲುಕಿದ ಶಾಸಕರು| ಸರ್ಕಾರ ಉಳಿಸುವ ಯತ್ನದಲ್ಲಿ ಸಿಎಂ ಖಟ್ಟರ್

ನವದೆಹಲಿ(ಜ.12): ದೆಹಲಿಯ ಗಡಿಯಲ್ಲಿ ಕೃಷಿ ಕಾನೂನಿನ ವಿರುದ್ಧ ಪ್ರತಿಭಟಿಸುತ್ತಿರುವ ರೈತರು ಹರ್ಯಾಣ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದಾರೆ. ರೈತ ಆಂದೋಲನದಿಂದ ರಾಜ್ಯದಲ್ಲಿರುವ ಮನೋಹರ ಲಾಲ್ ಖಟ್ಟರ್‌ಗೆ ಸಂಕಷ್ಟ ಬಂದೊದಗಿದೆ. ಹೀಗಿರುವಾಗ ಮುಖ್ಯಮಂತ್ರಿ ಖಟ್ಟರ್ ಹಾಗೂ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ಜಸೇರಿ ಪಕ್ಷದ ಹಿರಿಯ ನಾಯಕರು ಇಂದು ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಲಿದ್ದಾರೆ. ಹೀಗಿರುವಾಗ ಹರ್ಯಾಣದಲ್ಲಿ ಬಿಜೆಪಿ ಹಾಗೂ ಜನನಾಯಕ ಜನತಾ ಪಾರ್ಟಿಯ ಶಾಸಕರು ಒತ್ತಡದಲ್ಲಿದ್ದಾರಾ? ಎಂಬ ಪ್ರಶ್ನೆಗಳು ಉದ್ಭವಿಸಿವೆ.

ದುಷ್ಯಂತ್ ಚೌಟಾಲಾ, ಅಮಿತ್ ಶಾರನ್ನು ಭೇಟಿಯಾಗುವುದಕ್ಕೂ ಮುನ್ನ ದೆಹಲಿಯಲ್ಲಿ ತನ್ನ ಫಾರ್ಮ್ ಹೌಸ್‌ನಲ್ಲಿ ತನ್ನ ಪಕ್ಷ ಜೆಜೆಪಿಯ ಶಾಸಕರನ್ನು ಭೇಟಿಯಾಗಲಿದ್ದಾರೆ. ಹೀಗಿರುವಾಗ ಅವರು ತಮ್ಮ ಶಾಸಕರ ವಿಶ್ವಾಸ ಗಳಿಸಲು ಈ ಸಭೆ ನಡೆಸುತ್ತಾರೆನ್ನಲಾಗಿದೆ.

ಸೋಮವಾರವಷ್ಟೇ ಅಭಯ್ ಚೌಟಾಲಾ ಪತ್ರವೊಂದನ್ನು ಬರೆದು ಖಟ್ಟರ್‌ ಅವರನ್ನು ವಿರೋಧಿಸಿದ್ದಾರೆ. ಅಲ್ಲದೇ ಜನವರಿ 26ರೊಳಗೆ ರೈತರ ಬೆಡಿಕೆ ಒಪ್ಪಿಕೊಳ್ಳದಿದ್ದರೆ ತನ್ನ ಈ ಪತ್ರವನ್ನೇ ರಾಜೀನಾಮೆ ಎಂದು ಪರಿಗಣಿಸುವಂತೆ ತಿಳಿಸಿದ್ದಾರೆ. ಇಂತಹ ಸಂವೇದನಾಹೀನ ಸಭೆಯಲ್ಲಿ ಇರಲಿ ಇಚ್ಛಿಸುವುದಿಲ್ಲ ಎಂದೂ ಅವರು ತಿಳಿಸಿದ್ದರು. ಅವರ ಈ ಹೇಳಿಕೆ ಶಾಸಕರ ಮೇಲೆ ಭಾರೀ ಒತ್ತಡ ಹೇರಿದೆ.

ಇನ್ನು ಮೈತ್ರಿಯಲ್ಲಿರುವ ಎಲ್ಲರೂ ರೈತರ ವಿರೋಧ ಎದುರಿಸುತ್ತಿದ್ದಾರೆ. ಇನ್ನು ಹರ್ಯಾಣದಲ್ಲಿ ಅಧಿಕಾರದಲ್ಲಿರುವ ಸರ್ಕಾರಲ್ಲಿ ಬಿಜೆಪಿ ಬಳಿ 40, ಜೆಜೆಪಿ ಬಳಿ 10 ಸ್ವತಂತ್ರ ಅಭ್ಯರ್ಥಿಗಳು ಸೇರಿ ಸರ್ಕಾರ ನಿರ್ಮಿಸಿದ್ದಾರೆ.

click me!