ಕೇರಳದ ವಯನಾಡ್ ಭೂಕುಸಿತ ದುರಂತದ ನಂತರ ಜನರ ರಕ್ಷಣಾ ಕಾರ್ಯದಲ್ಲಿ ಭಾಗಿಯಾದ ಭಾರತೀಯ ಸೇನೆಯ ಯೋಧರು ಹಾಗೂ ಶ್ವಾನದಳಕ್ಕೆ ವಯನಾಡ್ ಜನ ಆತ್ಮೀಯ ವಿದಾಯ ಹೇಳಿದರು.
ವಯನಾಡ್: ಕೇರಳದ ವಯನಾಡ್ ಭೂಕುಸಿತ ದುರಂತದ ನಂತರ ಜನರ ರಕ್ಷಣಾ ಕಾರ್ಯದಲ್ಲಿ ಭಾಗಿಯಾದ ಭಾರತೀಯ ಸೇನೆಯ ಯೋಧರು ಹಾಗೂ ಶ್ವಾನದಳಕ್ಕೆ ವಯನಾಡ್ ಜನ ಆತ್ಮೀಯ ವಿದಾಯ ಹೇಳಿದರು. 10 ದಿನಗಳ ಕಾಲ ಪ್ರವಾಹ ಪೀಡಿತ ಸ್ಥಳದಲ್ಲಿ ನಿಂತು ಜನರ ರಕ್ಷಣಾ ಕಾರ್ಯದಲ್ಲಿ ತೊಡಗಿದ ಯೋಧರನ್ನು ಕಳುಹಿಸಿಕೊಡುವ ವೇಳೆ ಜನ ಭಾವುಕರಾದರು. ಕೊಚ್ಚಿ ಡಿಫೆನ್ಸ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಯೋಧರ ಸ್ವಾರ್ಥರಹಿತವಾದ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ವೀಡಿಯೋ ಪೋಸ್ಟ್ ಮಾಡಿರುವ ಕೊಚ್ಚಿ ಡಿಫೆನ್ಸ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ, ನಾವು ತುಂಬಾ ನಮ್ಮ ಧೈರ್ಯಶಾಲಿ ಹೀರೋಗಳಿಗೆ ನಮ್ಮ ಹೃದಯದಾಳದಿಂದ ಕೃತಜ್ಞತೆ ಸಲ್ಲಿಸುತ್ತೇವೆ. ಭೂಕುಸಿತ ದುರಂತದ ವೇಳೆ ಜನರ ರಕ್ಷಣಾ ಕಾರ್ಯಾಚರನೆ ವೇಳೆ ಅವರು ತಮ್ಮನ್ನು ಅಪಾಯಕ್ಕೊಡಿ ಜನರನ್ನು ರಕ್ಷಿಸಿದ್ದಾರೆ. ನಿಮ್ಮ ಧೈರ್ಯ ಹಾಗೂ ತ್ಯಾಗವನ್ನು ನಾವು ಯಾವತ್ತೂ ಮರೆಯುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
ನಮ್ಮವರು ಇರಬಹುದು ಮೆಲ್ಲನೆ ಅಗೆಯಿರಿ: ಯುವಕನ ಮನಮಿಡಿಯುವ ಮನವಿಗೆ ಹಿಟಾಚಿ ಚಾಲಕ ಭಾವುಕ
ಇನ್ನು ರಕ್ಷಣೆಗೆ ಬಂದ ಯೋಧರ ಬೆಟಾಲಿಯನ್ ಸಾಗುತ್ತಿದ್ದಂತೆ ಸ್ಥಳೀಯ ಜನ ಭಾರತ್ ಮಾತಾ ಕೀ ಜೈ, ಇಂಡಿಯನ್ ಆರ್ಮಿ ಕೀ ಜೈ ಎಂದು ಘೋಷಣೆ ಕೂಗಿ ತಮ್ಮ ಕೃತಜ್ಞತೆ ಅರ್ಪಿಸಿದರು. ಈ ವೇಳೆ ಯೋಧರ ಜೊತೆ ಸೇನೆಯ ಶ್ವಾನಪಡೆಯೂ ಸಾಗಿ ಹೋಯ್ತು. ಜುಲೈ 30 ರಂದು ಕೇರಳದ ವಯನಾಡ್‌ನ ಛೂರ್‌ಮಲಾ ಹಾಗೂ ಮುಂಡಕೈನಲ್ಲಿ ಭಾರಿ ಭೂಕುಸಿತ ಸಂಭವಿಸಿತ್ತು. ಇದರಿಂದ ಅಲ್ಲಿದ ನದಿ ದಿಕ್ಕು ಬದಲಿಸಿ ಹರಿದ ಪರಿಣಾಮ ಅಲ್ಲಿದ್ದ 400ಕ್ಕೂ ಹೆಚ್ಚು ಮನೆಗಳು ಜಲಸಮಾಧಿಯಾಗಿದ್ದವು. ಈ ದುರಂತದಲ್ಲಿ 400ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಇದೇ ವೇಳೆ ಭಾರತೀಯ ಸೇನೆ ಹಾಗೂ ಭಾರತೀಯ ವಾಯುಸೇನೆಯ ಯೋಧರು ಸಾವಿರಾರು ಜನರನ್ನು ರಕ್ಷಣೆ ಮಾಡಿದ್ದರು. ಅಲ್ಲದೇ ಪ್ರವಾಹ ಪೀಡಿತ ಮುಂಡಕೈನಲ್ಲಿ ಕೇವಲ 24 ಗಂಟೆಯಲ್ಲಿ ಸೇನೆಯ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್‌ನ 250 ಯೋಧರು ಹಗಲು ರಾತ್ರಿಯೆನ್ನದೇ ಕೆಲಸ ಮಾಡಿ 190 ಮೀಟರ್ ಉದ್ದದ ಸೇತುವೆಯೊಂದನ್ನು ನಿರ್ಮಿಸಿದ್ದರು.
ಇನ್ನು ಈ ಪ್ರವಾಹ ಪೀಡಿತ ಪ್ರದೇಶದಲ್ಲಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವಂತಹ ಪುನರ್ವಸತಿ ಸ್ಥಾಪನೆ ಮಾಡುವುದಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಅನ್ನ ಹಾಕಿದ ಒಡತಿಯ ಮೃತದೇಹ ಪತ್ತೆ ಹಚ್ಚಿದ ನಾಯಿ, ತುಂಡಾದ ಶವ ಹೊರತೆಗೆದ ರಕ್ಷಣಾ ತಂಡ!
Watch | Emotional send-off to personnel from people of all walks of life at .
Grateful for our brave heroes who risked everything during the landslide .
Your courage & sacrifice won't be forgotten…🇮🇳 pic.twitter.com/u2csEIo5r7