Latest Videos

ಕೇರಳ ಹೆಸರು ಇನ್ಮುಂದೆ ಕೇರಳಂ, ವಿಧಾನಸಭೆಯಲ್ಲಿ 2ನೇ ಬಾರಿಗೆ ನಿರ್ಣಯ ಅಂಗೀಕಾರ!

By Chethan KumarFirst Published Jun 24, 2024, 3:45 PM IST
Highlights

ಕೇರಳ ರಾಜ್ಯದ ಹೆಸರನ್ನು ಕೇರಳಂ ಎಂದು ಬದಲಿಸುವ ಪ್ರಯತ್ನ ಸಫಲವಾಗಿದೆ. ಇದೀಗ ಕೇರಳ ವಿಧಾನಸಭೆಯಲ್ಲಿ ಹೊಸ ನಿರ್ಣಯ ಅಂಗೀಕಾರಕೊಂಡಿದೆ.

ತಿರುವನಂತಪುರಂ(ಜೂ.24)  ಕೇರಳ ರಾಜ್ಯದ ಹೆಸರನ್ನು ಅಧಿಕೃತವಾಗಿ ಕೇರಳಂ ಎಂದು ಬದಲಾಸುವ ಪ್ರಸ್ತಾವನೆಗೆ ಕೇರಳ ವಿಧಾನಸಭೆ 2ನೇ ಬಾರಿ ಅಂಗೀಕಾರ ನೀಡಿದೆ. ಕಳೆದ ವರ್ಷ ಇದೇ ನಿರ್ಣಯವನ್ನು ಕೇರಳ ವಿಧಾನಸಭೆಯಲ್ಲಿ ಇಡಲಾಗಿತ್ತು. ಸರ್ವಾನುಮತದಿಂದ ಈ ಪ್ರಸ್ತಾವನಗೆ ಅಂಗೀಕಾರ ದೊರಕಿತ್ತು. ಬಳಿಕ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ಕೆಲ ಅಂಶಗಳಲ್ಲಿ ತಿದ್ದುಪಡಿಗೆ ಸೂಚಿಸಿ ಪ್ರಸ್ತಾವನೆಯನ್ನು ಕೇರಳ ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸಿತ್ತು. ಹೀಗಾಗಿ ತಿದ್ದುಪಡಿ ಮೂಲಕ ಕೇರಳ ವಿಧಾನಸಭೆಯಲ್ಲಿ 2ನೇ ಬಾರಿಗೆ ಪ್ರಸ್ತಾವನೆಗೆ ಅಂಗೀಕಾರ ಸಿಕ್ಕಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇರಳಂ ಹೆಸರು ಅಧಿಕೃತಗೊಳಿಸುವ ಪ್ರಸ್ತಾವನೆಯನ್ನು ವಿಧಾನಸಭೆಯಲ್ಲಿ ಮಂಡಿಸಿದರು. ಸಂವಿಧಾನದ ಮೊದಲ ಪರಿಚ್ಚೇದಧ ಆರ್ಟಿಕಲ್ 3ರ ಅಡಿಯಲ್ಲಿ ರಾಜ್ಯದ ಹೆಸರು ಬದಲಿಸುವ ಪ್ರಸ್ತಾವನೆ ಮಂಡಿಸಲಾಗಿತ್ತು. IUML ಶಾಸತ ಎಂ ಸಂಶುದ್ದೀನ್ ತಿದ್ದುಪಡಿ ಪ್ರಸ್ತಾವನೆಯನ್ನು ಅಂಗೀಕಾರಕ್ಕೆ ಹಾಕಿದರು. ಸರ್ವಾನುಮತದಿಂದ ಕೇರಳ ವಿಧಾನಸಭೆ ಕೇರಳಂ ಹೆಸರು ಬದಲಿಸುವ ನಿರ್ಣಯಕ್ಕೆ ಅಂಗೀಕಾರ ದೊರಕಿದೆ.

ದೇವರ ನಾಡಿನಲ್ಲಿ ಕಮಲ ಅರಳಿಸಿದ ಸುರೇಶ್ ಗೋಪಿಗೆ ಸಂಪುಟದಲ್ಲಿ ಸಿಕ್ತು ಸ್ಥಾನ

2023ರ ಆಗಸ್ಟ್ 9 ರಂದು ಇದೇ ನಿರ್ಣಯವನ್ನು ಕೇರಳ ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕಾರ ದೊರಕಿತ್ತು. ಅಂದು ಭಾರತದ ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿರುವ ಎಲ್ಲ ಭಾಷೆಗಳಲ್ಲಿ ರಾಜ್ಯದ ಹೆಸರನ್ನು ಕೇರಳಂ ಎಂದು ಬದಲಾಯಿಸಲು ಒತ್ತಾಯಿಸಲಾಗಿತ್ತು.   ‘ರಾಜ್ಯವನ್ನು ಮಲಯಾಳಂನಲ್ಲಿ ಕೇರಳಂ ಎಂದು ಕರೆಯಲಾಗುತ್ತದೆ. ಆದರೆ ಇತರ ಭಾಷೆಗಳಲ್ಲಿ ಅದು ಇನ್ನೂ ಕೇರಳ ಎಂದೇ ಇದೆ. ಸಂವಿಧಾನದ ಮೊದಲ ಶೆಡ್ಯೂಲ್‌ನಲ್ಲಿ ಕೂಡ ನಮ್ಮ ರಾಜ್ಯದ ಹೆಸರನ್ನು ಕೇರಳ ಎಂದು ಬರೆಯಲಾಗಿದೆ. ಹೀಗಾಗಿ ಇದಕ್ಕೆ ತಿದ್ದುಪಡಿ ತಂದು ಎಲ್ಲೆಡೆ ಕೇರಳಂ ಎಂದು ಕರೆಯುವಂತೆ ಮಾಡಬೇಕು’ ಎಂದು ಅಂದು ಮುಖ್ಯಂತ್ರಿ ಪಿಣರಾಯಿ ವಿಜಯನ್ ಹೇಳಿದ್ದರು.

ಬಳಿಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಎಂಟನೇ ಶೆಡ್ಯೂಲ್‌ನಲ್ಲಿ ಹೆಸರು ಬದಲಿಸುವ ಪ್ರಸ್ತಾವನ ಸಲ್ಲಿಸಲಾಗಿತ್ತು. ಈ ರೀತಿ ಹೆಸರು ಬದಲಾವಣೆ ಪ್ರಕ್ರಿಯೆ ಕೇವಲ ಮೊದಲ ಶೆಡ್ಯೂಲ್‌ನಲ್ಲಿ ಮಾತ್ರ ಅವಕಾಶವಿದೆ ಎಂದು ಕೇಂದ್ರ ಸರ್ಕಾರ ನಿರ್ಣಯದ ಪ್ರಸ್ತಾವನೆಯನ್ನು ಹಿಂತಿರುಗಿಸಿತ್ತು. ಹೀಗಾಗಿ ಇದೀಗ 2ನೇ ಬಾರಿಗೆ ಮೊದಲ ಶೆಡ್ಯೂಲ್ ಅಡಿಯಲ್ಲಿ ಈ ನಿರ್ಣಯಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ಪಡೆದು ಕೇಂದ್ರಕ್ಕೆ ಕಳುಹಿಸಲಾಗಿದೆ.

ಪತಿ ನೀಡಿದ ಗಿಫ್ಟ್‌ನಿಂದ 8 ಕೋಟಿ ಲಾಟರಿ ಹೊಡೆದ ಮಹಿಳೆ
 

click me!