ಕೊಚ್ಚಿ(ಸೆ.21): 60 ಸೆಕುಂಡುಗಳಲ್ಲಿ 426 ಪಂಚ್ ಮಾಡುವ ಮೂಲಕ ಕೇರಳದ 24 ವರ್ಷದ ಯುವಕ ರಫಾನ್ ಉಮರ್ ಗಿನ್ನಿಸ್ ದಾಖಲೆ ಮಾಡಿದ್ದಾರೆ. ಕೋಝಿಕ್ಕೋಡ್ ಮೂಲಕ ಯುವಕ 60 ಸೆಕುಂಡುಗಳಲ್ಲಿ 426 ಪಂಚ್ ಮಾಡಿದ್ದಾರೆ. ಈ ಮೂಲಕ ಕಿಕ್ ಬಾಕ್ಸರ್ ಹಾಗೂ ಮಾರ್ಷಲ್ ಆರ್ಟ್ಸ್ ಸ್ಲೊವಾಕಿಯಾದ ಪವೆಲ್ ಟ್ರುಡ್ಸೊ ಅವರು ಮಾಡಿದ್ದ ದಾಖಲೆ ಮುರಿದಿದ್ದಾರೆ.
ಅವರ ಅಧಿಕೃತ ಪಂಚ್ 60 ಸೆಕುಂಡುಗಳಿಗೆ 334 ಆಗಿತ್ತು. ಕುಂಗ್ ಫುನಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ, 4 ವರ್ಷ ಬಾಕ್ಸಿಂಗ್ ಅನುಭವ ಇರುವ ರಫಾನ್ ಅವರಿಗೆ ಈ ಹೊಸ ದಾಖಲೆ ಮಾಡುವ ಯತ್ನ ಮೊದಲಿಂದಲೇ ಇತ್ತು.
undefined
10 ಕೋಟಿ ರೂ ದಾಟಿದ ಚಿನ್ನದ ಹುಡುಗ ನೀರಜ್ ಜಾವೆಲಿನ್, ಲೊವ್ಲಿನಾ ಬಾಕ್ಸಿಂಗ್ ಗ್ಲೌಸ್ E ಹರಾಜು..!
ನಾನೆಷ್ಟು ಫಾಸ್ಟ್ ಪಂಚ್ ಮಾಡುತ್ತೇನೆಂದು ನನ್ನ ಸ್ನೇಹಿತ ನೋಡಿದ್ದ. ನಾನು ಪಂಚ್ ಮಾಡುವಾಗ ನನ್ನ ಸ್ಪೀಡ್ ನಾನು ಗಮನಿಸುವುದಿಲ್ಲ. ಹಾಗಾಗಿ ಅವರು ನನ್ನದೊಂದು ವಿಡಿಯೋ ತೆಗದು ತೋರಿಸಿದರು. ನಾನು ಅವರಿಂದ ಪೂರ್ಣ ವಿಸ್ತರಣೆಯ ಪಂಚಿಂಗ್ ಬಗ್ಗೆ ಕೇಳಿದೆ ಎಂದಿದ್ದಾರೆ. ರೆಕಾರ್ಡ್‌ಗೆ ಎಪ್ಲೈ ಮಾಡುವ ಮೊದಲು ರಫಾನ್ 15 ಸೆಕುಂಡುಗಳಲ್ಲಿ 100 ಪಂಚ್ ಮಾಡುವ ವಿಡಿಯೋ ಮಾಡಿದ್ದರು. ಈ ಮೂಲಕ ನಾನು ಈಗಾಗಲೇ ಇರುವ ಗಿನ್ನಿಸ್ ದಾಖಲೆ ಮುರಿಯಬಹುದು ಎಂದುಕೊಂಡೆವು ಎಂದಿದ್ದಾರೆ.
ಪೂರ್ಣ ವಿಸ್ತರಣೆಯಲ್ಲಿ ಪಂಚಿಂಗ್ ವ್ಯಾಯಾಮ ಮಾಡುವಾಗ ಉಸಿರಾಟದ ನಿಯಂತ್ರಣವು ಪರಿಗಣಿಸಬೇಕಾದ ಇನ್ನೊಂದು ಪ್ರಮುಖ ಅಂಶವಾಗಿದೆ. ನಾನು ಉಸಿರಾಟದ ವ್ಯಾಯಾಮ ಮತ್ತು ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದೇನೆ. ನಾನು ಶಾಲಾ ದಿನಗಳಿಂದ ವ್ಯಾಯಾಮ ಮಾಡುತ್ತಿರುವುದರಿಂದ ಉಸಿರಾಟದ ನಿಯಂತ್ರಣ ಸಾಧಿಸುವುದು ನನಗೆ ಕಷ್ಟವಾಗಲಿಲ್ಲ ಎಂದು ರಫಾನ್ ಹೇಳಿದ್ದಾರೆ.
ಸೆಪ್ಟೆಂಬರ್ 11 ರಂದು ಕೋಯಿಕ್ಕೋಡ್ ಒಳಾಂಗಣ ಕ್ರೀಡಾಂಗಣದಲ್ಲಿ ಸಚಿವ ಅಹ್ಮದ್ ದೇವರಕೋವಿಲ್ ಅವರ ಸಮ್ಮುಖದಲ್ಲಿ ರಫಾನ್ ವಿಶ್ವ ದಾಖಲೆ ಮಾಡಿದ್ದಾರೆ.