ಉದ್ಯೋಗ ಅರಸಿ ಕೇರಳ ಯುವಕರು ಗಲ್ಫ್‌ಗೆ, ಮಲಯಾಳಿ ಹುಡುಗೀರ ಹೃದಯಕ್ಕೆ ಈಶಾನ್ಯ ವಲಸಿಗರ ಲಗ್ಗೆ!

Published : Feb 05, 2025, 03:29 PM IST
ಉದ್ಯೋಗ ಅರಸಿ ಕೇರಳ ಯುವಕರು ಗಲ್ಫ್‌ಗೆ, ಮಲಯಾಳಿ ಹುಡುಗೀರ ಹೃದಯಕ್ಕೆ ಈಶಾನ್ಯ ವಲಸಿಗರ ಲಗ್ಗೆ!

ಸಾರಾಂಶ

ಕೇರಳದಲ್ಲಿ ಈಶಾನ್ಯ ರಾಜ್ಯಗಳ ಯುವಕರು ಕೆಲಸದ ಜೊತೆಗೆ ಪ್ರೀತಿಯನ್ನೂ ಕಾಣುತ್ತಿದ್ದಾರೆ. ಉತ್ತಮ ಉದ್ಯೋಗ ಮತ್ತು ಆದಾಯದಿಂದಾಗಿ ಕೇರಳ ಈಶಾನ್ಯದ ಯುವಕರಿಗೆ ಹೊಸ ಲವ್ ಹಾಟ್‌ಸ್ಪಾಟ್ ಆಗಿ ಹೊರಹೊಮ್ಮಿದೆ. ವಲಸೆ ಕಾರ್ಮಿಕರು ಕೇರಳದ ಸಂಸ್ಕೃತಿಗೆ ಒಗ್ಗಿಕೊಂಡು ಇಲ್ಲಿನ ಯುವತಿಯರನ್ನು ವಿವಾಹವಾಗುತ್ತಿದ್ದಾರೆ.

ತಿರುವನಂತಪುರಂ (ಫೆ.5): ವಾರಕ್ಕೆ 60/70/90 ಗಂಟೆ ಕೆಲಸ, ಉದ್ಯೋಗ ಮತ್ತು ಕೌಟುಂಬಿಕ ಸಮತೋಲನದ ಕುರಿತು ದೇಶವ್ಯಾಪಿ ಉನ್ನತ ವೇತನ ವರ್ಗದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದ್ದರೆ, ಇತ್ತ ಕೇರಳದಲ್ಲಿ ಈಶಾನ್ಯ ರಾಜ್ಯಗಳ ಯುವಕರು ಕರ್ತವ್ಯದ ಸ್ಥಳದಲ್ಲೇ ಪ್ರೀತಿ ಪ್ರೇಮದ ಹಾದಿಯಲ್ಲಿ ಸಾಗಿ ವಿವಾಹ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಈಶಾನ್ಯ ರಾಜ್ಯಗಳ ವಲಸೆ ಕಾರ್ಮಿಕರಿಗೀಗ ಕೇರಳ ಹೊಸ ಲವ್‌ ಹಾಟ್‌ಸ್ಪಾಟ್‌ ಆಗಿ ಹೊರಹೊಮ್ಮಿದೆ!

ಹೌದು. ಕೇರಳದ ಯುವಕರು ಉತ್ತಮ ಉದ್ಯೋಗ ಅರಸಿ ಗಲ್ಫ್‌ ದೇಶಗಳತ್ತ ಮುಖ ಮಾಡುತ್ತಿದ್ದರೆ, ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂ, ಒಡಿಶಾದಂಹ ಈಶಾನ್ಯ ರಾಜ್ಯದಿಂದ ಕೆಲಸದ ನಿಮಿತ್ತ ಆಗಮಿಸುವ ಕಾರ್ಮಿಕರ ಪಾಲಿಗೆ ಕೇರಳ, ತಿಂಗಳಿಗೆ ಕಡಿಮೆಯೆಂದರೂ 25 ಸಾವಿರ ರು. ವರೆಗೆ ಆದಾಯ ನೀಡುವ ಗಲ್ಫ್‌ ಆಗಿದೆ. ಇವರು ರಾಜ್ಯದ ಉತ್ಪಾದಕತೆಗೂ ಕೊಡುಗೆ ನೀಡುತ್ತಿದ್ದಾರೆ. ಅಂತಹವರನ್ನು ಸರ್ಕಾರ ‘ಅತಿಥಿ ಕಾರ್ಮಿಕರು’ ಎಂದು ಪರಿಗಣಿಸಿದ್ದು, ಹಲವು ಯೋಜನೆಗಳ ಮೂಲಕ ರಾಜ್ಯದಲ್ಲೇ ನೆಲೆಸಿ, ವಿಮೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆಯಲು ಅನುಕೂಲ ಮಾಡಿಕೊಡುತ್ತಿದೆ.

ಹೀಗೆ ಹೊಟ್ಟೆಪಾಡಿಗಾಗಿ ಕೇರಳಕ್ಕೆ ಆಗಮಿಸಿ, ನೆಲೆಸಿ, ಭಾಷೆ, ಸಂಸ್ಕೃತಿ ಇತ್ಯಾದಿಗಳಿಗೆ ಒಗ್ಗಿಕೊಳ್ಳುತ್ತಿರುವ ವಲಸೆ ಕಾರ್ಮಿಕರು ತಮ್ಮ ಹಳೆ ವೃತ್ತಿಯನ್ನು ತ್ಯಜಿಸಿ, ವ್ಯಾಪಾರ ಸೇರಿದಂತೆ ಉತ್ತಮ ಕೆಲಸಗಳಲ್ಲಿ ತೊಡಗುತ್ತಿದ್ದಾರೆ. ಇಂಥವರನ್ನು ಇಲ್ಲಿನ ಯುವತಿಯರು ವಿವಾಹವಾಗುತ್ತಿರುವುದು ಸಾಮಾನ್ಯವಾಗುತ್ತಿದೆ. ಇದು ಗ್ರಾಮೀಣ ಭಾಗದಲ್ಲಿ ಅಧಿಕವಿದ್ದು, ಈ ಸಂಖ್ಯೆ 2017-18ರಲ್ಲಿ 31 ಲಕ್ಷ ಇದ್ದು, 2030ರ ವೇಳೆಗೆ 50 ಲಕ್ಷ ತಲುಪಲಿದೆ ಎಂದು ಅಂದಾಜಿಸಲಾಗಿದೆ.

ಇಂತಹ ಹಲವು ಜೋಡಿಗಳನ್ನು ರಾಜ್ಯಾದ್ಯಂತ ಕಾಣಬಹುದಾಗಿದೆ. ಈ ಕುರಿತು ಮಾತನಾಡಿರುವ ಸಂಯೋಜಿತ ರಾಷ್ಟ್ರೀಯ ವಲಸೆ ಕಾರ್ಮಿಕರ ಒಕ್ಕೂಟ(ಎಈಟಿಯುಸಿ) ಉಪಾಧ್ಯಕ್ಷ ರಾಜೇಂದ್ರ ನಾಯಕ್‌, ‘ಈಶಾನ್ಯದ ಯುವಕರು ಶ್ರಮಜೀವಿಗಳಾಗಿದ್ದು, ಕೇರಳದಲ್ಲೇ ನೆಲೆಸಿ ಇಲ್ಲಿನ ಸಂಸ್ಕೃತಿಗೆ ಒಗ್ಗಿಕೊಳ್ಳಲು ಸಿದ್ಧರಿದ್ದಾರೆ. ಜೊತೆಗೆ, ಮದುವೆ ವೇಳೆ ವರದಕ್ಷಿಣೆಯನ್ನೂ ಬಯಸುವುದಿಲ್ಲ’ ಎಂದಿದ್ದಾರೆ. ಇವರೂ ಕೂಡ ಒಡಿಶಾ ಮೂಲದವರಾಗಿದ್ದು, ಕೇರಳದ ರಜನಿ ಎಂಬುವರನ್ನು ವಿವಾಹವಾಗಿರುವುದು ಗಮನಾರ್ಹ.

ಸೀರಿಯಲ್‌ನಲ್ಲಿ ಅತ್ತೆ-ಅಳಿಯ, ನಿಜ ಜೀವನದಲ್ಲಿ ಗಂಡ-ಹೆಂಡ್ತಿ, ಮಕ್ಕಳಿಲ್ಲ ಅನ್ನೋದೇ ಕೊರಗು!

ಇನ್ನು ವಲಸೆ ಕಾರ್ಮಿಕರ ಈ ವಿಚಾರ ಮುಂದೆ ಕರ್ನಾಟಕಕ್ಕೂ ಬಾಧಿಸಬಹುದು. ಕರ್ನಾಟಕದಲ್ಲೂ ಈಗಾಗಲೇ ಉತ್ತರ ಭಾರತದ ವಲಸಿಗರ ಸಂಖ್ಯೆ ತೀವ್ರವಾಗಿದೆ. ಅದರಲ್ಲೂ ಬೆಂಗಳೂರಿನ ಹುಡುಗರು ಕೆಲಸ ಅರಸಿ ವಿದೇಶಗಳಲ್ಲಿ ಖಾಯಂ ಆಗಿ ನೆಲೆಸಲು ಮುಂದಾಗುತ್ತಿದ್ದಾರೆ. ಈಗ ಕೇರಳದಲ್ಲಿ ಆಗುತ್ತಿರುವ ಸ್ಥಿತಿ ಮುಂದೆ ಕರ್ನಾಟಕದಲ್ಲೂ ಆಗಬಹುದು ಎನ್ನುವ ಎಚ್ಚರಿಕೆಯ ಗಂಟೆ ಇದಾಗಿದೆ.

ರೇಪ್‌ & ಮರ್ಡರ್‌ ಮಾಡಿದವನಿಗೆ ಜೀವಾವಧಿ; ಗೆಳೆಯನಿಗೆ ವಿಷಹಾಕಿ ಕೊಂದವಳಿಗೆ ಗಲ್ಲು ಶಿಕ್ಷೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!