ರಾತ್ರಿ ಕಳ್ಳಿಯಂತೆ ಬಂದು ರಸ್ತೆ ಬದಿಯ ಕೃಷಿ ಜಮೀನಿನಲ್ಲಿ ಆರು ಮೂಟೆ ಕಸೆ ಎಸೆದಿದ್ದ ಯುವತಿಗೆ ಪಂಚಾಯ್ತಿ 50 ಸಾವಿರ ರೂಪಾಯಿ ದಂಡ ವಿಧಿಸಿದೆ.
ಕೋಝಿಕ್ಕೋಡ್: ಕಸದ ಸಮಸ್ಯೆ ನಿವಾರಣೆಗಾಗಿ ಪಾಲಿಕೆ, ಪಂಚಾಯ್ತಿಗಳಲ್ಲಿ ವಿಶೇಷ ಅನುದಾನ ಮೀಸಲಿಡಲಾಗುತ್ತದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತಾ ಅಂತಹ ಮಹಾನಗರಗಳಲ್ಲಿ ಕಸ ವಿಲೇವಾರಿಗಾಗಿಯೇ ನೂರಾರು ಕೋಟಿ ಅನುದಾನ ತೆಗೆದಿರಸಲಾಗುತ್ತದೆ. ಸ್ವಚ್ಛ ಭಾರತ್ ಅಭಿಯಾನ ಆರಂಭವಾದ ಬಳಿಕ ಗ್ರಾಮೀಣ ಭಾಗಗಳಲ್ಲಿಯೂ ಸ್ವಚ್ಛತೆಯ ಅರಿವು ಮೂಡಿಸಲಾಗುತ್ತಿದೆ. ಹಳ್ಳಿಗಳು ಹಂತ ಹಂತವಾಗಿ ಬಹಿರ್ದೆಸೆ ಮುಕ್ತ ಗ್ರಾಮಗಳಾಗಿ ಬದಲಾಗುತ್ತಿವೆ. ಗ್ರಾಮೀಣ ಭಾಗದಲ್ಲಿಯೂ ವೈಜ್ಞಾನಿಕ ರೂಪದಲ್ಲಿಯೇ ಕಸ ವಿಲೇವಾರಿ ಮಾಡುತ್ತಿರೋದು ಗಮನಾರ್ಹ. ಹಾಗೆಯೆ ಎಲ್ಲೆಂದರಲ್ಲಿ ಕಸ ಎಸೆಯುವ ಜನರಿಗೆ ದಂಡ ಸಹ ವಿಧಿಸಲಾಗುತ್ತದೆ. ಯುವತಿಯೊಬ್ಬಳು ಕೃಷಿ ಜಮೀನಿನ ಬಳಿ ಕಸ ಎಸೆದಿದ್ದಕ್ಕೆ 50 ಸಾವಿರ ರೂಪಾಯಿ ದಂಡ ವಿಧಿಸಿದೆ.
ಯುವತಿಗೆ 50 ಸಾವಿರ ರೂಪಾಯಿ ದಂಡ ವಿಧಿಸಿರುವ ಘಟನೆ ಕೇರಳದ ಕೋಝಿಕ್ಕೋಡ್ ಜಿಲ್ಲೆಯ ತಿಕೋಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ಯುವತಿಯೊಬ್ಬಳು ರಾತ್ರಿ ಪುರಕ್ಕಾಡ್ ಹಾಗೂ ಪಾರೋಲಿನಾಟ ಗ್ರಾಮದ ಮಧ್ಯದಲ್ಲಿ ಆರು ಗೋಣಿಚೀಲ ಕಸ ಎಸೆದಿದ್ದಳು. ಈ ಚೀಲದಲ್ಲಿ ಭತ್ತದ ತ್ಯಾಜ್ಯ, ರಾಸಾಯನಿಕ ಸೇರಿದಂತೆ ತ್ಯಾಜ್ಯ ಸೇರಿತ್ತು. ಈ ಎಲ್ಲ ತ್ಯಾಜ್ಯವನ್ನು ಚೀಲದಲ್ಲಿ ತುಂಬಿಕೊಂಡು ರಾತ್ರಿ ಪುರಕ್ಕಾಡ್ ಹಾಗೂ ಪಾರೋಲಿನಾಟ ಗ್ರಾಮದ ಮಾರ್ಗದ ರಸ್ತೆ ಬದಿಯಲ್ಲಿರೋ ಖಾಸಗಿ ವ್ಯಕ್ತಿಯೊಬ್ಬರ ಕೃಷಿ ಜಮೀನಿನಲ್ಲಿ ಎಸೆಯಲಾಗಿತ್ತು.
ಸ್ವಚ್ಛ ಭಾರತ 21ನೇ ಶತಮಾನದ ದೊಡ್ಡ ಯಶಸ್ವಿ ಆಂದೋಲನ:ಮೋದಿ
ಬೆಳಗ್ಗೆ ಕೃಷಿ ಜಮೀನಿನಲ್ಲಿ ಕಸದ ಮೂಟೆಗಳನ್ನು ಕಂಡ ಗ್ರಾಮಸ್ಥರು, ಪಂಚಾಯ್ತಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ದೂರು ಸಲ್ಲಿಸಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸುರೇಶ್ ಚಂಗಡತ್, ಪಂಚಾಯತ್ ಅಧ್ಯಕ್ಷೆ ಜಮೀಲಾ ಸಮದ್, ಪಂಚಾಯತ್ ಅಧಿಕಾರಿಗಳು ಪರಿಶೀಲನೆ ನಡಸಿದ್ದರು.
ಗೋಣಿಚೀಲಗಳನ್ನ ಪರಿಶೀಲಿಸಿದಾಗ ಪಳ್ಳಿಕಾರದ ‘ಪ್ರಾರ್ಥನಾ’ ಎಂಬ ನಿವಾಸದವರದ್ದು ಎಂದು ತಿಳಿದು ಬಂದಿದೆ. ಪ್ರಾರ್ಥನಾ ನಿವಾಸದಲ್ಲಿ ವಾಸವಾಗಿರುವ ರೇಣುಕಾ ಎಂಬ ಯುವತಿಯೇ ರಾತ್ರಿ ಕಸೆ ಎಸೆದಿರೋದು ತನಿಖೆಯಲ್ಲಿ ದೃಢಪಟ್ಟಿದೆ. ಕೂಡಲೇ ಪಂಚಾಯಿತಿ ಅಧ್ಯಕ್ಷೆ, ಪಂಚಾಯಿತಿ ಸದಸ್ಯೆ ವಿಬಿತಾ ಬೈಜು ಹಾಗೂ ಕಾರ್ಯದರ್ಶಿ ಅವರಿದ್ದ ತಂಡ ನೇರವಾಗಿ ರೇಣುಕಾ ಮನೆಗೆ ತೆರಳಿ 50 ಸಾವಿರ ದಂಡ ವಿಧಿಸಿದ್ದಾರೆ. ನಂತರ ಯುವತಿಯಿಂದಲೇ ಕಸ ತೆಗೆಸಿ ಶಿಕ್ಷೆ ನೀಡಿದ್ದಾರೆ.
20 ವರ್ಷದ ನಂತ್ರ ಕನಸಲ್ಲಿ ಬಂದು ಸಮಾಧಿ ಸರಿ ಮಾಡು ಮಗನೇ ಎಂದ ತಂದೆ; ಗೋರಿ ತೋಡಿದ್ರೆ ಊರಿಗೆ ಊರೇ ಶಾಕ್!