ಮೊದಲ ಹಂತದಲ್ಲಿ ಕೊರೋನಾ ವೈರಸ್ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದ ಕೇರಳ, ಇದೀಗ ಲಾಕ್‌ಡೌನ್ ಸಡಿಲಿಕೆ ಕಾರಣ ಮತ್ತೆ ಹಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಸಮುದಾಯ ಮಟ್ಟದಲ್ಲಿ ಕೊರೋನಾ ಹರಡುವಿಕೆ ಭೀತಿ ಎದುರಾದ ಕಾರಣ ಕೇರಳ ಇದೀಗ ಪ್ರೈಮರಿ ಲೆವಲ್ ಟೆಸ್ಟಿಂಗ್ ಆರಂಭಿಸಿದೆ.
ತಿರುವನಂತಪುರಂ(ಮೇ.30): ಲಾಕ್‌ಡೌನ್ ಸಡಿಲಿಕೆ ಮಾಡಿದ ಬೆನ್ನಲ್ಲೇ ದೇಶದಲ್ಲಿ ಕೊರೋನಾ ವೈರಸ್ ಸಂಖ್ಯೆ ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಿದೆ. ಕೊರೋನಾ ವಿರುದ್ಧ ನಿಯಂತ್ರಣ ಸಾಧಿಸಿದ್ದ ಕೇರಳ ಕೂಡ ಇದೀಗ ಕೊರೋನಾ ವೈರಸ್ ಹರಡದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಕೇರಳದಲ್ಲಿ ಸಮುದಾಯ ಮಟ್ಟದಲ್ಲಿ ಕೊರೋನಾ ಹರಡುವ ಭೀತಿ ಎದುರಾದ ಕಾರಣ ಇದೀಗ ಸರ್ಕಾರ, ಪ್ರೈಮರಿ ಲೆವೆಲ್ ಟೆಸ್ಟಿಂಗ್ ಆರಂಭಿಸಿದೆ.
ದೇಶದಲ್ಲಿ ಒಂದೇ ದಿನ ದಾಖಲೆಯ 7720 ಜನಕ್ಕೆ ವೈರಸ್!
ಇದೇ ಮೊದಲ ಬಾರಿಗೆ ಕೇರಳ ಪ್ರೈಮರಿ ಲೆವಲ್ ಟೆಸ್ಟಿಂಗ್ ಆರಂಭಿಸಿದೆ. ಕೇರಳ ತಜ್ಞರ ಸಮಿತಿ ಮುಖ್ಯಸ್ಥ ಡಾ.ಇಕ್ಬಾಲ್ ನೀಡಿದ ಸೂಚನೆ ಮೇರೆಗೆ ಕೇರಳ ಪ್ರೈಮರಿ ಲವೆಲ್ ಟೆಸ್ಟಿಂಗ್ ಆರಂಭಿಸಿದೆ. ಇತ್ತೀಚೆಗಷ್ಟೇ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ICMR) ಸಮದಾಯ ಮಟ್ಟದಲ್ಲಿ ಕೊರೋನಾ ಹರಡುವ ಕುರಿತು ಎಚ್ಚರಿಸಿತ್ತು. ಇಷ್ಟೇ ಅಲ್ಲ ಇದನ್ನು ತಡೆಯಲು ಮಾಡಬೇಕಾದ ಕ್ರಮಗಳನ್ನೂ ಸೂಚಿಸಿತ್ತು.
ಕೊರೋನಾಗೆ ಭಾರತದಲ್ಲೇ ಔಷಧ, ಲಸಿಕೆ!
ಕೇರಳದಲ್ಲಿ ಇದುವರೆಗೆ ಕಮ್ಯೂನಿಟಿ ಲೆವೆಲ್‌ಗೆ ಕೊರೋನಾ ಹರಡಿಲ್ಲ. ಆದರೆ ನಾವು ಹಲವು ವಿಧಾನದ ಮೂಲಕ ಸಮುದಾಯ ಮಟ್ಟದಲ್ಲಿ ಕೊರೋನಾ ಹರಡಿರುವ ಕುರಿತು ಪರೀಕ್ಷೆ ನಡೆಸುತ್ತಿದ್ದೇವೆ. ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜನರ ಸುರಕ್ಷತೆಗೆ ಆದ್ಯತೆ ನೀಡಿದ್ದೇವೆ ಎಂದು ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ಹೇಳಿದ್ದಾರೆ.
ಪ್ರೈಮರಿ ಲೆವೆಲ್ ಟೆಸ್ಟಿಂಗ್ ಕಣ್ಣೂರು ಹಾಗೂ ತಿರುವನಂತಪುರಂಗಳಲ್ಲಿ ಆರಂಭಿಸಲಾಗಿದೆ. ಇನ್ನುಳಿದ ಜಿಲ್ಲೆಗಳಿಗೂ ವಿಸ್ತರಿಸಲಾಗುತ್ತಿದೆ. ಪ್ರಾಥಮಿ ಆರೋಗ್ಯ ಕೇಂದ್ರ ಸೇರಿದಂತೆ ಹಲವೆಡೆ ಟೆಸ್ಟಿಂಗ್ ನಡೆಸಲಾಗುತ್ತಿದೆ. ಕೇರಳದಲ್ಲಿ ಕೊರೋನಾ ಹರಡದಂತೆ ತಡೆಯಲು ಜನರೂ ಕೂಡ ಸಹಕರಿಸಬೇಕು ಎಂದು ಶೈಲಜಾ ಹೇಳಿದ್ದಾರೆ.