
ವರ್ಕಲಾ: ಕೇರಳದ ವರ್ಕಲಾದಲ್ಲಿ ಸಮುದ್ರದಲ್ಲಿ ನಿರ್ಮಿಸಲಾಗಿದ್ದ ತೇಲುವ ಸೇತುವೆ ಮುರಿದ ಪರಿಣಾಮ ಸೇತುವೆ ಮೇಲೆ ಇದ್ದ ಎಲ್ಲರೂ ಸಮುದ್ರಕ್ಕೆ ಬಿದ್ದ ಘಟನೆ ನಡೆದಿದೆ. ಬೀಚ್‌ಗಳಿಗೆ ಬರುವ ಪ್ರವಾಸಿಗರಿಗೆ ಸಮುದ್ರವನ್ನು ಹತ್ತಿರದಿಂದ ನೋಡಲು ಅವಕಾಶ ನೀಡುವ ಉದ್ದೇಶದಿಂದ ಈ ತೇಲುವ ಸೇತುವೆಯನ್ನು ನಿರ್ಮಿಸಲಾಗಿತ್ತು. ಪ್ಲಾಸ್ಟಿಕ್ ಬ್ಲಾಕ್‌ಗಳಿಂದ ನಿರ್ಮಿಸಿದ ಈ ತೇಲುವ ಸೇತುವೆಯಲ್ಲಿ ಜನ ಸಮುದ್ರದ ಮಧ್ಯಕ್ಕೆ ಹೋಗಿ ಸಮುದ್ರದ ಮನೋಹರವಾದ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದಿತ್ತು.
ಈ ಸೇತುವೆ ಮೇಲೆ ನಿನ್ನೆ 15 ಜನರು ಹೋಗುತ್ತಿದ್ದಾಗ ಸೇತುವೆ ಕಳಚಿಕೊಂಡಿದ್ದು ಎಲ್ಲರೂ ನೀರಿಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಎಲ್ಲರೂ ಲೈಫ್ ಜಾಕೆಟ್ ಧರಿಸಿದ್ದರಿಂದ ಪ್ರಾಣ ಹಾನಿ ಸಂಭವಿಸಿಲ್ಲ, ಆದರೆ ಕೆಲವರು ಗಾಯಗೊಂಡಿದ್ದು, ಅದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಬಲವಾದ ಅಲೆಗಳು ಅಪ್ಪಳಿಸಿದ್ದರಿಂದ ಈ ಘಟನೆ ನಡೆದಿದ್ದು, ಅಲೆಗಳಿಂದಾಗಿ ಸಮುದ್ರಕ್ಕೆ ಬಿದ್ದವರಿಗೆ ಈಜಿ ದಡ ಸೇರಲು ಸಾಧ್ಯವಾಗಿರಲಿಲ್ಲ, ಕೂಡಲೇ ಪ್ರವಾಸಿಗರ ನೆರವಿಗೆ ಜೀವರಕ್ಷಕರು ಹಾಗೂ ಕರಾವಳಿ ಕಾವಲು ಪಡೆ ಸಿಬ್ಬಂದಿ ಆಗಮಿಸಿ ಸಮುದ್ರಕ್ಕೆ ಬಿದ್ದವರ ರಕ್ಷಣೆ ಮಾಡಿದ್ದಾರೆ. ಅಲ್ಲದೇ ಕೂಡಲೇ ಎಲ್ಲರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ನಿನ್ನೆ ಸಂಜೆ ಈ ಘಟನೆ ನಡೆದಿದೆ. 100 ಮೀಟತ್ ಉದ್ದ ಮೂರು ಮೀಟರ್ ಅಗಲದಲ್ಲಿ ಈ ತೇಲುವ ಪ್ಲಾಸ್ಟಿಕ್ ಸೇತುವೆಯನ್ನು ನಿರ್ಮಿಸಲಾಗಿತ್ತು. ಇದು ಸಮುದ್ರ ತೀರದಿಂದ ಸಮುದ್ರದ ಮೇಲೆ ನಡೆದಾಡುವುದಕ್ಕೆ ಅವಕಾಶ ನೀಡುತ್ತಿತ್ತು. 700 ಕೇಜಿ ತೂಕದ ಆಂಕರ್‌ನ ಬಲದ ಮೇಲೆ 1400 ಪ್ಲಾಸ್ಟಿಕ್ ಬ್ಲಾಕ್ ಬಳಸಿ ಈ ಸೇತುವೆ ತಯಾರಿಸಲಾಗಿತ್ತು. ಜಿಲ್ಲಾ ಪ್ರವಾಸೋದ್ಯಮ ಪ್ರಮೋಷನ್ ಕೌನ್ಸಿಲ್, ಕೇರಳ ಅಡ್ವೆಂಚರ್ ಟೂರಿಸಂ ಪ್ರಮೋಷನ್ ಸೊಸೈಟಿ ಮತ್ತು ವರಕಲಾ ಪುರಸಭೆಯ ಸಹಯೋಗದಲ್ಲಿ ಈ ಸೇತುವೆಯನ್ನು ಸ್ಥಾಪಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ