2020ರಲ್ಲಿ ನಾಪತ್ತೆಯಾದ ಸಿಂಧೂ ಕೇಸ್‌ಗೆ ಮರುಜೀವ, ಕಣ್ಣೀರಿಟ್ಟು ಮನವಿ ಮಾಡಿದ ತಾಯಿ

Published : Aug 03, 2025, 07:50 PM IST
Sindhu missing case

ಸಾರಾಂಶ

ಐದು ವರ್ಷಗಳಿಂದ ಮಗಳು ಸಿಂಧು ಮನೆಗೆ ಹಿಂದಿರುತ್ತಾಳೆ ಎಂದು ದಾರಿ ಕಾಯುತ್ತಿರುವ ತಾಯಿ ಇದೀಗ ಪೊಲೀಸರ ಬಳಿಕ ಕಣ್ಣೀರಿಟ್ಟು ಮನವಿ ಮಾಡಿದ್ದಾರೆ. ನನ್ನ ಮಗಳಿಗೆ ಏನಾಯ್ತು ಅನ್ನೋದಾದರು ಹೇಳಿ ಎಂದು ಕೈಮುಗಿದು ಬೇಡಿಕೊಂಡಿದ್ದಾರೆ. ಏನಿದು ಸಿಂಧೂ ಪ್ರಕರಣ? 

ತಿರುವಂತನಪುರಂ (ಆ.03): ಕೇರಳದ ಚೇರ್ತಲದ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಳ್ಳತ್ತಿದೆ. ದೇವಸ್ಥಾನಕ್ಕೆಂದು ಹೋದ ಮಗಳು ಮನೆಗೆ ವಾಪಾಸ್ ಬರಲಿಲ್ಲ. ತಾಯಿ ಎಲ್ಲಾ ಕಡೆ ಹುಡುಕಾಡಿ ಪೊಲೀಸರಿಗೆ ದೂರು ನೀಡಿದ್ದರು. ಇತ್ತ ಪೊಲೀಸರು ಒಂದಷ್ಟು ಹುಡುಕಾಟಿ ಕೊನೆಗೆ ಕೇಸ್ ಕ್ಲೋಸ್ ಮಾಡಿದ್ದರು. ಆದರೆ ಸಿಂಧೂ ಎಲ್ಲಿದ್ದಾಳೆ, ಆಕೆಗೆ ಏನಾಗಿದೆ ಅನ್ನೋದು ನಿಗೂಢವಾಗಿಯೋ ಉಳಿದುಕೊಂಡಿತ್ತು. ಐದು ವರ್ಷಗಳ ಹಿಂದೆ ನಾಪತ್ತೆಯಾದ ಸಿಂಧೂ ಕೇಸ್‌ಗೆ ಇದೀಗ ಮರು ಜೀವ ಸಿಕ್ಕಿದೆ. ಪೊಲೀಸರು ಸಿಂಧೂ ತಾಯಿ ಲೀಲಾ ಬಳಿ ಮಾಹಿತಿ ಪಡೆದುಕೊಂಡು ತನಿಖೆ ತೀವ್ರಗೊಳಿಸಿದ್ದಾರೆ.

ಸೆಬಾಸ್ಟಿಯನ್ ಮನೆಯಲ್ಲಿ ಅಸ್ಥಿಪಂಜರ ಸಿಕ್ಕ ಬಳಿಕ ಮಿಸ್ಸಿಂಗ್ ಪ್ರಕರಣದ ತನಿಖೆ

ಕೊಟ್ಟಾಯಂ ಏಟ್ಟುಮನೂರು ನಿವಾಸಿ ಜೈನಮ್ಮ ನಾಪತ್ತೆ ಪ್ರಕರಣ ಸಂಬಂಧ ಚೇರ್ತಲ ನಿವಾಸಿ ಸೆಬಾಸ್ಟಿಯನ್‌ನ ಕೇರಳ ಪೊಲೀಸರು ಬಂಧಿಸಿದ್ದಾರೆ. ಚೇರ್ತಲದಲ್ಲಿ ಚಿನ್ನದ ಅಂಗಡಿ ಇಟ್ಟುಕೊಂಡಿರುವ ಸೆಬಾಸ್ಟಿಯನ್ ಬಂಧಿಸಿದ ಪೊಲೀಸರು ತನಿಖೆ ತೀವ್ರಗೊಳಿಸುತ್ತಿದ್ದಂತೆ ಒಂದೊಂದೆ ಸ್ಫೋಟಕ ಮಾಹಿತಿಗಳು ಹೊರಬರುತ್ತಿದೆ. ಸೆಬಾಸ್ಟಿಯನ್ ಮನೆ ಪಕ್ಕದಲ್ಲಿ ಅಸ್ಥಿಪಂಜರಗಳು ಪತ್ತೆಯಾಗಿದೆ. ಇದು ಪೊಲೀಸರ ಅನುಮಾನ ಹೆಚ್ಚಿಸಿದೆ. ಈ ಭಾಗದಲ್ಲಿ ನಡೆದ ಹಲವು ನಾಪತ್ತೆ ಪ್ರಕರಣದ ಹಿಂದೆ ಇದೇ ಸೆಬಾಸ್ಟಿಯನ್ ಕೈವಾಡ ಶಂಕೆ ಬಲವಾಗುತ್ತಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಇದೀಗ 2020ರಲ್ಲಿ ನಾಪತ್ತೆಯಾದ ಸಿಂಧೂ ಪ್ರಕರಣವನ್ನು ತನಿಖೆಗೆ ಮುಂದಾಗಿದ್ದಾರೆ.

ಪೊಲೀಸರ ಬಳಿ ಸಿಂಧೂ ತಾಯಿ ಮನವಿ

ಚೇರ್ತಲದಲ್ಲಿ ನಾಪತ್ತೆಯಾದ ಸಿಂಧು ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ಸಿಂಧುಗೆ ಏನಾಯ್ತು ಅಂತ ತಿಳ್ಕೊಬೇಕು ಎಂದು ತಾಯಿ ಲೀಲಾ ಏಷ್ಯಾನೆಟ್ ನ್ಯೂಸ್‌ಗೆ ಹೇಳಿದ್ದಾರೆ. ಐದು ವರ್ಷದ ಹಿಂದೆ ಸಿಂಧೂ ನಾಪತ್ತೆಯಾಗಿದ್ದರು. ದೇವಸ್ಥಾನಕ್ಕೆ ಹೋದ್ದ ಸಿಂಧೂ ವಾಪಸ್ ಬರಲಿಲ್ಲ. ಏನಾಯ್ತು ಅಂತ ಗೊತ್ತಿಲ್ಲ. ಪೊಲೀಸರು ಏನೂ ಕಂಡುಹಿಡಿಯಲಿಲ್ಲ. ಈಗಿನ ತನಿಖೆಯಲ್ಲಿ ಭರವಸೆ ಇದೆ, ನನ್ನ ಮಗಳಿಗೆ ಏನಾಯ್ತು ಅಂತ ತಿಳ್ಕೊಬೇಕು ಎಂದು ಲೀಲಾ ಮನವಿ ಮಾಡಿದ್ದಾರೆ.

ಮಗಳು ಫೋನ್ ತೆಗೆದುಕೊಂಡು ಹೋಗಿರಲಿಲ್ಲ. 100 ರೂಪಾಯಿ ಮಾತ್ರ ಕೈಯಲ್ಲಿತ್ತು. ಪೂಜೆ ಮುಗಿಸಿ ಬೇಗ ವಾಪಸ್ ಬರುತ್ತೇನೆ ಎಂದು ದೇವಸ್ಥಾನಕ್ಕೆ ತೆರಳಿದ್ದರು. ತಡವಾದ್ರೂ ವಾಪಸ್ ಬರದಿದ್ದಾಗ ಹುಡುಕಾಟ ಶುರುವಾಗಿತ್ತು.ಎಷ್ಟು ಹುಡುಕಿದರೂ ಸುಳಿವು ಪತ್ತೆಯಾಗಲಿಲ್ಲ. ಸರಿಯಾದ ತನಿಖೆ ಏನೂ ಆಗಿಲ್ಲ ಎಂದು ಲೀಲಾ ಹೇಳಿದ್ದಾರೆ.

ಸೆಬಾಸ್ಟಿಯನ್ ಪರಿಚಯ ಇಲ್ಲ

ಸೆಬಾಸ್ಟಿಯನ್ ಬಂಧನ ಬಳಿಕ ಹಲವು ನಾಪತ್ತೆ ಪ್ರಕರಣಗಳು ಮುನ್ನಲೆಗೆ ಬಂದಿದೆ. ಈ ಪೈಕಿ ಸಿಂಧೂ ಪ್ರಕರಣಕೂಡ ಒಂದಾಗಿದೆ. ತಮಗೆ ಸೆಬಾಸ್ಟಿಯನ್ ಪರಿಚಯ ಇಲ್ಲ ಎಂದು ಸಿಂಧೂ ತಾಯಿ ಹೇಳಿದ್ದಾರೆ. ಪೊಲೀಸರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಸಿಂಧೂ ಜೀವಂತ ಇದ್ದಾಳೋ ಇಲ್ಲವೋ ಅನ್ನೋದು ಗೊತ್ತಿಲ್ಲ. ನನ್ನ ಮಗಳಿಗೆ ಏನಾಗಿದೆ ಎಂದು ತಿಳಿದಿಲ್ಲ. ಈಗಿನ ತನಿಖೆ ಮೇಲೆ ವಿಶ್ವಾಸವಿದೆ ಎಂದು ಲೀಲಾ ಹೇಳಿದ್ದಾರೆ.

ಸಿಂಧೂ ಸೇರಿದಂತೆ ಹಲವು ನಾಪತ್ತೆ ಕೇಸ್‌ಗೆ ಮರು ಜೀವ ಸಿಕ್ಕಿದ್ದು ಹೇಗೆ?

ಜೈನಮ್ಮ ನಾಪತ್ತೆ ಕೇಸ್‌ನಲ್ಲಿ ಸೆಬಾಸ್ಟಿಯನ್‌ ಅರೆಸ್ಟ್ ಆಗಿದ್ದಾರೆ. ಸೆಬಾಸ್ಟಿಯನ್‌ನ ಚೇರ್ತಲದ ಜುವೆಲ್ಲರಿ ಶಾಪ್‌ನಲ್ಲಿ ಪೊಲೀಸರು ಶೋಧ ಕಾರ್ಯ ಆರಂಭಿಸಿದಾಗ ಕೆಲ ಮಹತ್ವದ ದಾಖಲೆ ಲಭ್ಯವಾಗಿದೆ. ನಾಪತ್ತೆಯಾದ ಜೈನಮ್ಮದು ಎಂದು ಹೇಳಲಾಗಿರುವ ಚಿನ್ನ ಸಿಕ್ಕಿದೆ. ಚೇರ್ತಲ ಡಿವೈಎಸ್ಪಿ ಆಫೀಸ್ ಮುಂದೆ ಇರೋ ಜುವೆಲ್ಲರಿ ಅಂಗಡಿಯಲ್ಲಿ ಚಿನ್ನ ಸಿಕ್ಕಿದೆ. ಜೈನಮ್ಮಳನ್ನ ಕೊಂದು ಚಿನ್ನ ಕದ್ದಿರುವ ಸಾಧ್ಯತೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಜೈನಮ್ಮ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಇದೇ ಸೆಬಾಸ್ಟಿಯನ್ ಹಲವು ಮಹಿಳೆಯರ ಅಪಹರಿಸಿ ಹತ್ಯೆ ಮಾಡಿರುವ ಸಾಧ್ಯೆತೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಇದಕ್ಕೂ ಪೂರಕವಾಗಿ ಪಳ್ಳಿಪುರದ ಸೆಬಾಸ್ಟಿಯನ್ ಮನೆ ಹತ್ರ ಸಿಕ್ಕ ಅಸ್ಥಿಪಂಜರ ಜೈನಮ್ಮದು ಅಂತ ಪೊಲೀಸ್ರ ಅನುಮಾನ ವ್ಯಕ್ತಪಡಿಸಿದ್ದಾರೆ. ಖಚಿತಪಡಿಸಿಕೊಳ್ಳೋಕೆ ಡಿಎನ್‌ಎ ರಿಪೋರ್ಟ್ ಬರಬೇಕು. ಬಿಂದು ಪದ್ಮನಾಭನ್, ಐಷಾ ನಾಪತ್ತೆ ಕೇಸ್‌ಗಳಲ್ಲೂ ಸೆಬಾಸ್ಟಿಯನ್ ಮೇಲೆ ಅನುಮಾನ ಇದೆ.

ಐಷಾ ನಾಪತ್ತೆ ಕೇಸ್‌ನಲ್ಲೂ ಪೊಲೀಸರು ಮಾಹಿತಿ ಕಲೆಕ್ಟ್ ಮಾಡ್ತಿದ್ದಾರೆ. ಪಳ್ಳಿಪುರದ ಮನೆ ಹತ್ರ ಏನಾದ್ರೂ ಸಾಕ್ಷಿ ಸಿಗುತ್ತಾ ಅಂತ ತನಿಖೆ ತೀವ್ರಗೊಳಿಸಿದ್ದಾರೆ ಆಲಪ್ಪುರಂ ಕ್ರೈಂ ಬ್ರಾಂಚ್ ಪೊಲೀಸರು ಪಳ್ಳಿಪುರದ ಮನೆಗೆ, ಮನೆ ಪಕ್ಕದಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..