2 ತಿಂಗಳ ಯಾತ್ರೆಗೆ ನ.15ರಿಂದ ಶಬರಿಮಲೆ ದೇಗುಲ ಓಪನ್‌

By Kannadaprabha NewsFirst Published Nov 4, 2021, 9:01 AM IST
Highlights
  • ಕೇರಳದ ಶಬರಿಮಲೆಯ ಅಯ್ಯಪ್ಪ ದೇವಾಲಯವು ನ. 15 ರಿಂದ ಎರಡು ತಿಂಗಳು ತೀರ್ಥಯಾತ್ರೆಗಾಗಿ ತೆರೆಯಲಿದೆ
  • ದೇವಾಲಯದ ದೈನಂದಿನ ಕಾರ್ಯಚಟುವಟಿಕೆಗಳನ್ನು ನೋಡಿಕೊಳ್ಳುವ ತಿರುವಾಂಕೂರು ದೇವಸ್ವಂ ಬೋರ್ಡ್‌

ಕೊಚ್ಚಿ (ನ.04): ಕೇರಳದ (Kerala) ಶಬರಿಮಲೆಯ ಅಯ್ಯಪ್ಪ ದೇವಾಲಯವು (Sabarimala ayyappa Temple) ನ. 15 ರಿಂದ ಎರಡು ತಿಂಗಳು ತೀರ್ಥಯಾತ್ರೆಗಾಗಿ ತೆರೆಯಲಿದೆ ಎಂದು ದೇವಾಲಯದ ದೈನಂದಿನ ಕಾರ್ಯಚಟುವಟಿಕೆಗಳನ್ನು ನೋಡಿಕೊಳ್ಳುವ ತಿರುವಾಂಕೂರು ದೇವಸ್ವಂ ಬೋರ್ಡ್‌ (TDB) ತಿಳಿಸಿದೆ.

ಈ ವೇಳೆ ಭಕ್ತಾದಿಗಳು ತಮ್ಮೊಂದಿಗೆ ಕೋವಿಡ್‌ ಲಸಿಕೆಯ (Covid vaccine) ಪ್ರಮಾಣಪತ್ರವನ್ನು, ಜತೆಗೆ 72 ಗಂಟೆಗಳೊಳಗಿನ ಕೋವಿಡ್‌ ನೆಗೆಟಿವ್‌ (Covid Negetive) ಆರ್‌ಟಿ-ಪಿಸಿಆರ್‌ (RTPCR) ವರದಿಯನ್ನು ಕಡ್ಡಾಯವಾಗಿ ಹಾಜರು ಪಡಿಸಬೇಕು ಎಂದು ಟಿಡಿಬಿ (TDB) ತಿಳಿಸಿದೆ.

ಕೇರಳದ ಪಟ್ಟನಂತಿಟ್ಟ ಜಿಲ್ಲೆಯ ದೇವಾಲಯವು ಬುಧವಾರ ಚಿತಿರಾ ಅಟ್ಟವಿಶೇಷ ಪೂಜೆಗಾಗಿ ಭಕ್ತಾದಿಗಳಿಗೋಸ್ಕರ (Devotees) ತೆರೆಯಲ್ಪಟ್ಟಿತ್ತು. ಪೂಜೆಯ ನಂತರ ರಾತ್ರಿ 9 ಘಂಟೆಗೆ ಮುಚ್ಚಲಾಯಿತು. ಭಕ್ತಾದಿಗಳನ್ನು ವರ್ಚುವಲ್‌ ಕ್ಯೂ ಬುಕಿಂಗ್‌ (Booking) ವ್ಯವಸ್ಥೆಯ ಮೂಲಕ ಅನುಮತಿಸಲಾಗಬಹುದು ಎಂದು ಬೋರ್ಡ್‌ (Board) ತಿಳಿಸಿದೆ.

ಕಳೆದ ತಿಂಗಳೂ ಭಾರೀ ಮಳೆಯಿಂದ ದೇಗುಲ ಬಂದ್

 

ನಿರಂತರವಾಗಿ ಭಾರಿ ಮಳೆ (Heavy Rain) ಸುರಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕೇರಳದ ಪತ್ತನಂತಿಟ್ಟಜಿಲ್ಲೆಯಲ್ಲಿರುವ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಅ.21ರವರೆಗೆ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿತ್ತು.

ಅ.19ರಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ (Ayyappa Swamy) ದೇವಸ್ಥಾನದಲ್ಲಿ ತುಲಾಮಾಸದ ವಿಶೇಷ ಪೂಜೆ ನಡೆದ ಹಿನ್ನೆಲೆಯಲ್ಲಿ ರಾಜ್ಯ, ನೆರೆರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇತ್ತು. ಆದರೆ ಕೇರಳದಲ್ಲಿ ಕೆಲವು ದಿನಗಳಿಂದ ಗುಡುಗು, ಗಾಳಿ ಸಹಿತ ಧಾರಾಕಾರ ಮಳೆ ಸುರಿಯುತ್ತಿದ್ದು, ಪಂಪಾ ನದಿ ನೀರಿನ ಮಟ್ಟಹೆಚ್ಚಾಗಿದೆ.

ಶಬರಿಮಲೆಗೆ ಭಕ್ತರು ಪತ್ತನಂತಿಟ್ಟಜಿಲ್ಲೆ ಮತ್ತು ಎರೆವೇಲಿ ಮೂಲಕ ಬರುವ ಎರಡು ಮಾರ್ಗಗಳು ಮಳೆ ನೀರು ನಿಂತು ನದಿಯಂತಾಗಿವೆ. ಕೆಲವು ದಿನಗಳಿಂದ ಸಂಚಾರ ಸಮಸ್ಯೆ ಎದುರಾಗಿದೆ. ಈ ಭಾಗದಲ್ಲಿ ಭೂಕುಸಿತವಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮೂರು ದಿನ ಭಕ್ತರ ಪ್ರವೇಶಕ್ಕೆ ನಿಷೇಧಿಸಿರುವುದಾಗಿ ತಿರುವಾಂಕೂರು ದೇವಸ್ವಂ ಮಂಡಳಿ ತಿಳಿಸಿತ್ತು.

ಮಳೆಯಿಂದಾಗಿ ಅನೇಕ ರಸ್ತೆಗಳು, ಸೇತುವೆಗಳು ಮುಳುಗಿ ಅವಘಡ ಸಂಭವಿಸಿರುವ ಕಾರಣ ಮತ್ತು ಮಳೆಗೆ ಮತ್ತಷ್ಟುಹಾನಿ ಸಂಭವಿಸದಂತೆ ಮುನ್ನೆಚ್ಚರಿಕೆಯಿಂದ ಭಕ್ತರ ಪ್ರವೇಶ ನಿಷೇಧಿಸಲಾಗಿದೆ.

ತುಲಾಮಾಸ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದಷ್ಟೇ ಅಯ್ಯಪ್ಪಸ್ವಾಮಿ ದೇವಸ್ಥಾನ ತೆರೆಯಲಾಗಿತ್ತು. ಅದರ ಬೆನ್ನಲ್ಲೆ ಮಳೆ, ಪ್ರವಾಹದಿಂದಾಗಿ ಭಕ್ತರ ಪ್ರವೇಶ ನಿರಾಕರಿಸಿದ್ದಕ್ಕೆ ಲಕ್ಷಾಂತರ ಭಕ್ತರಿಗೆ ನಿರಾಸೆ ಉಂಟಾಗಿದೆ. ಅಯ್ಯಪ್ಪನ ದರ್ಶನ ಪಡೆಯಲು ಹಾಗೂ ತುಲಾಮಾಸದ ವಿಶೇಷ ಪೂಜೆ ಅರ್ಪಿಸಲು ಬರುವ ಭಕ್ತರಿಗೆಲ್ಲ ವಾಪಸ್‌ ತೆರಳುವಂತೆ ಸೂಚಿಸಲಾಗಿದೆ ಎಂದು ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಪರ​ಮೇ​ಶ್ವ​ರನ್‌ ಮುಖ್ಯ ಅರ್ಚ​ಕ

ತಿರುವನಂತಪುರಂ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇಗುಲದ ಮುಖ್ಯ ಅರ್ಚಕರಾಗಿ ಎನ್‌.ಪರಮೇಶ್ವರನ್‌ ನಂಬೂದರಿ (N Parameshwaran Nambudiri) ಅವರು ನೇಮಕಗೊಂಡಿದ್ದಾರೆ. ಅ.16ರಂದು ನಡೆಯಲಿರುವ ಮಂಡಲ ಪೂಜೆಯಿಂದ (Mandala Pooja) ಒಂದು ವರ್ಷದ ಅವಧಿಗೆ ಮುಖ್ಯ ಅರ್ಚಕರಾಗಿ ಮುಂದುವರೆಯಲಿದ್ದಾರೆ.

ಮುಖ್ಯ ಅರ್ಚಕರಾಗಲು ಬಯಸಿದ ಆಕಾಂಕ್ಷಿಗಳನ್ನು ಸಂದರ್ಶನ ಮಾಡಿ, ಬಳಿಕ ಅಂತಿಮ ಪಟ್ಟಿತಯಾರಿಸಿ ಡ್ರಾ ಮೂಲಕ ಭಾನುವಾರ ದೇಗುಲದ ಸೋಪಾನಂನಲ್ಲಿ ಆಯ್ಕೆ ಮಾಡಲಾಯಿತು ಎಂದು ತಿರುವಾಂಕೂರು ದೇವಸ್ಥಾನ ಆಡಳಿತ ಮಂಡಳಿ (TDB) ತಿಳಿಸಿದೆ. ಈ ನಡುವೆ ಕೇರಳದಲ್ಲಿ ಪ್ರವಾಹ (Flood) ಪರಿಸ್ಥಿತಿ ಉಂಟಾಗಿರುವ ಕಾರಣದಿಂದ  ಶಬರಿಮಲೆಗೆ ಭಕ್ತರು ಬೇಟಿ ನೀಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.

  • ಕೇರಳದ ಶಬರಿಮಲೆಯ ಅಯ್ಯಪ್ಪ ದೇವಾಲಯವು ನ. 15 ರಿಂದ ಎರಡು ತಿಂಗಳು ತೀರ್ಥಯಾತ್ರೆಗಾಗಿ ತೆರೆಯಲಿದೆ
  • ದೇವಾಲಯದ ದೈನಂದಿನ ಕಾರ್ಯಚಟುವಟಿಕೆಗಳನ್ನು ನೋಡಿಕೊಳ್ಳುವ ತಿರುವಾಂಕೂರು ದೇವಸ್ವಂ ಬೋರ್ಡ್‌ (ಟಿಡಿಬಿ) ತಿಳಿಸಿದೆ.
click me!