ಕೇರಳದಲ್ಲಿ ದೇಶದ ಮೊದಲ ಕೋವಿಡ್ JN.1 ವೈರಸ್ ಪ್ರಕರಣ ಪತ್ತೆ, ಅಲರ್ಟ್ ಘೋಷಣೆ!

By Suvarna News  |  First Published Dec 17, 2023, 12:22 PM IST

ಏಷ್ಯಾದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ಪ್ರಮುಖವಾಗಿ ಕೇರಳದಲ್ಲೂ ಡಿಸೆಂಬರ್ ತಿಂಗಳ ಆರಂಭಿಕ 2 ವಾರದಲ್ಲಿ 800ಕ್ಕೂ ಹೆಚ್ಚು ಕೋವಿಡ್ ಪ್ರಕರಣ ಪತ್ತೆಯಾಗಿದೆ. ಇದೀಗ ದೇಶದ ಮೊದಲ ಕೋವಿಡ್ ಸಬ್ ವೇರಿಯೆಂಟ್ JN.1  ವೈರಸ್ ಪ್ರಕರಣ ಪತ್ತೆಯಾಗಿದೆ. 79 ವರ್ಷದ ಮಹಿಳೆಯಲ್ಲಿ ಪ್ರಕರಣ ಕಾಣಿಸಿಕೊಂಡಿದೆ.
 


ನವದೆಹಲಿ(ಡಿ.17) ದೇಶದಲ್ಲಿ ಕೋವಿಡ್ ಪ್ರಕರಣ ದಿಢೀರ್ ಏರಿಕೆಯಾಗಿದೆ. ಕರ್ನಾಟಕದಲ್ಲೂ ಈಗಾಗಲೇ ಕೋವಿಡ್ ಸಭೆ ನಡೆಸಿ ಪರಿಸ್ಥಿತಿ ಅವಲೋಕನ ಮಾಡಲಾಗಿದೆ. ಕೇರಳದಲ್ಲಿ ಸತತ ಸಭೆಗಳು ನಡೆಯುತ್ತಿದೆ. ದೇಶದ ಶೇಕಡಾ 90 ರಷ್ಟು ಪ್ರಕರಣಗಳು ಕೇರಳದಲ್ಲಿ ದಾಖಲಾಗಿದೆ. ಇದೀಗ ಭಾರತದಲ್ಲಿ ಮೊದಲ ಕೋವಿಡ್ ಸಬ್ ವೇರಿಯೆಂಟ್ JN.1 ವೈರಸ್ ಪ್ರಕರಣ ಪತ್ತೆಯಾಗಿದೆ. ಕೇರಳದ ಕಾರಕುಳಂನ 79 ವರ್ಷದ ಮಹಿಳೆಯಲ್ಲಿ ಸಬ್ ವೇರಿಯೆಂಟ್ JN.1 ಪತ್ತೆಯಾಗಿದೆ.

ಈ ವೃದ್ಧ ಮಹಿಳೆಗೆ ನ.18ರಂದು ಆರ್‌ಟಿ-ಪಿಸಿಆರ್‌ ಪರೀಕ್ಷೆಯನ್ನು ನಡೆಸಲಾಗಿತ್ತು. ಪರೀಕ್ಷೆಯಲ್ಲಿ ಕೋವಿಡ್‌ ಇರುವುದು ಸಾಬೀತಾಗಿತ್ತು. ಜ್ವರ ರೀತಿಯ ಲಕ್ಷಣ ಕಂಡುಬಂದಿತ್ತು. ಆ ಮಹಿಳೆ ಗುಣಮುಖರಾಗಿದ್ದರು. ಆದರೆ ಈಗ ಆಕೆಯಲ್ಲಿ ಪತ್ತೆಯಾಗಿದ್ದು ಕೋವಿಡ್‌ನ ಹೊಸ ಮಾದರಿ ಎಂಬುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

 

ಕೇರಳದಲ್ಲಿ ಪತ್ತೆಯಾಗಿ ಆತಂಕ ಮೂಡಿಸಿರೋ ಕೋವಿಡ್ ರೂಪಾಂತರಿ, JN.1 ರೋಗ ಲಕ್ಷಣಗಳೇನು?

ಇದಕ್ಕೂ ಮೊದಲು ತಮಿಳುನಾಡಿನ ತಿರುಚಿರಾಪಳ್ಳಿಯಿಂದ ಸಿಂಗಾಪುರಕ್ಕೆ ಪ್ರಯಾಣ ಮಾಡಿದ ವ್ಯಕ್ತಿಯಲ್ಲಿ ಕೋವಿಡ್ JN ಪ್ರಕರಣ ಪತ್ತೆಯಾಗಿತ್ತು. ಸಿಂಗಾಪುರದಲ್ಲಿ ಈ ವ್ಯಕ್ತಿಯ ಪರೀಕ್ಷೆಯಲ್ಲಿ JN ಪ್ರಕರಣ ಪತ್ತೆಯಾಗಿತ್ತು. ಇದೀಗ ಭಾರತದ ಮೊದಲ ಪ್ರಕರಣ ಕೇರಳದಲ್ಲಿ ಪತ್ತೆಯಾಗಿದೆ. JN ಪ್ರಕರಣ ಕೋವಿಡ್‌ನಿಂದ ರೂಪಾಂತರಗೊಂಡ ಒಮಿಕ್ರಾನ್ BA.2.86 ವೇರಿಯೆಂಟ್ ಹೋಲುತ್ತದೆ. JN.1 ಹಾಗೂ BA.2.86 ವೇರಿಯೆಂಟ್‌ನಲ್ಲಿನ ಪ್ರಮುಖ ವ್ಯತ್ಯಾಸ ಎಂದರೆ ಸ್ಪೈಕ್ ಪ್ರೊಟೀನ್. JN.1 ವೇರಿಯೆಂಟ್ ಅಮೆರಿಕದಲ್ಲೂ ಹಲವು ಪ್ರಕರಣಗಳು ಪತ್ತೆಯಾಗಿದೆ. ಇನ್ನು ಸಿಂಗಾಪುರ, ಮಲೇಷ್ಯಾದಲ್ಲೂ ಈ ಪ್ರಕರಗಳು ಪತ್ತೆಯಾಗಿರುವ ವರದಿಯಾಗಿದೆ.

ಭಾರತದಲ್ಲಿ ಕೋವಿಡ್ ಪ್ರಕರಣ ದಿಢೀರ್ ಏರಿಕೆಯಾಗಿದೆ ನಿಜ. ಆದರೆ ಆತಂಕಪಡುವ ಅವಶ್ಯಕತೆ ಇಲ್ಲ. ಭಾರತದಲ್ಲಿ ಕಾಣಿಸಿಕೊಂಡಿರುವುದು ಮೈಲ್ಡ್ ಕೋವಿಡ್ ಪ್ರಕರಣಗಳು ಮಾತ್ರ. ಹೋಮ್ ಐಸೋಲೇಶನ್‌ನಲ್ಲಿ ಗುಣವಾಗಲಿದೆ. ಆಸ್ಪತ್ರೆ ದಾಖಲಾಗುವ ಪ್ರಮೇಯ ಇಲ್ಲ. ಹೀಗಾಗಿ ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ತಜ್ಞರ ಸಮಿತಿ ಹೇಳಿದೆ.

ದೇಶದ ಹೊಸ ಕೋವಿಡ್‌ ಕೇಸ್‌ಗಳಲ್ಲಿ ಕೇರಳದಲ್ಲೇ ಶೇ. 90ರಷ್ಟು ಪತ್ತೆ: ಇಲ್ಲಿ ಮಾಸ್ಕ್‌ ಕಡ್ಡಾಯ!

ಚಳಿಗಾಲ ತೀವ್ರಗೊಳ್ಳುತ್ತಿರುವುದರಿಂದ ವಿಶ್ವದ ಹಲವು ದೇಶಗಳಲ್ಲಿ ಮತ್ತೆ ಹೊಸ ಕೋವಿಡ್‌ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ. ಗುರುವಾರ ಜಗತ್ತಿನಲ್ಲಿ ಒಂದೇ ದಿನ 15000ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದು, 70ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಈ ಪೈಕಿ ಅಮೆರಿಕದಲ್ಲಿ 4641 ಹೊಸ ಕೇಸು, 9 ಸಾವು, ಆಸ್ಟ್ರೇಲಿಯಾದಲ್ಲಿ 2159, ಲಿಥುವೇನಿಯಾದಲ್ಲಿ 1172, ಪೋಲೆಂಡ್‌ನಲ್ಲಿ 2915, ಫಿಲಿಪ್ಪೀನ್ಸ್‌ನಲ್ಲಿ 408 ಪ್ರಕರಣ ದಾಖಲಾಗಿದೆ. ವಿಶ್ವದಲ್ಲಿ ಈವರೆಗೆ 70 ಲಕ್ಷಕ್ಕೂ ಹೆಚ್ಚು ಜನರು ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ.

click me!