
ಕೊಚ್ಚಿ(ಸೆ.16): ಮೇ ತಿಂಗಳಿನಲ್ಲಿ ಅಮೆರಿಕ ಹೊತ್ತಿ ಉರಿಯುವಂತೆ ಮಾಡಿದ್ದ ಕಪ್ಪು ವರ್ಣೀಯ ವ್ಯಕ್ತಿ ಜಾರ್ಜ್ ಫ್ಲೋಯ್ಡ್ ಪ್ರಕರಣದ ರೀತಿಯಲ್ಲೇ ವ್ಯಕ್ತಿಯೊಬ್ಬನನ್ನು ಹಿಂಸಿಸುವ ಮೂಲಕ ಕೇರಳ ಪೊಲೀಸರು ವಿವಾದಕ್ಕೆ ಗುರಿಯಾಗಿದ್ದಾರೆ.
ವ್ಯಕ್ತಿ ಕುತ್ತಿಗೆಯನ್ನು ಮಂಡಿಯಿಂದ ಅದುಮಿದ ಪೊಲೀಸ್ ಪೇದೆ!
ಜಾರಿ ನಿರ್ದೇಶನಾಲಯದ ತನಿಖೆ ಎದುರಿಸುತ್ತಿರುವ ಉನ್ನತ ಶಿಕ್ಷಣ ಸಚಿವ ಕೆ.ಟಿ. ಜಲೀಲ್ ರಾಜೀನಾಮೆಗೆ ಆಗ್ರಹಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ಸಂಜೆ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಸಚಿವ ಜಲೀಲ್ ಅವರ ಬೆಂಗಾವಲು ವಾಹನ ಬರುವುದಿತ್ತು. ಪ್ರತಿಭಟನಾಕಾರರನ್ನು ಓಡಿಸಲು ಪೊಲೀಸರು ಮುಂದಾದರು. ಆಗ ಆ್ಯಂಟನಿ ಎಂಬ ಕಾರ್ಯಕರ್ತ ಕೆಳಕ್ಕೆ ಬಿದ್ದ. ಆತನ ಮೇಲೆ ಪೊಲೀಸ್ ಅಧಿಕಾರಿಯೊಬ್ಬ ಕುಳಿತುಬಿಟ್ಟ. ಜಲೀಲ್ ಅವರ ಬೆಂಗಾವಲು ವಾಹನ ಹಾದು ಹೋಗುವವರೆಗೂ ಕುಳಿತೇ ಇದ್ದ. ಬಳಿಕ ಯುವ ಕಾಂಗ್ರೆಸ್ ಕಾರ್ಯಕರ್ತರು ಬಂದು ಆ್ಯಂಟನಿ ಅವರನ್ನು ರಕ್ಷಣೆ ಮಾಡಿದರು.
ಇದೀಗ ಈ ಘಟನೆಯನ್ನು ಫೆä್ಲೕಯ್ಡ್ ಪ್ರಕರಣಕ್ಕೆ ಹೋಲಿಸಿ, ಕೇರಳ ಪೊಲೀಸರ ವಿರುದ್ಧ ಆಕ್ರೋಶ ಹೊರಹೊಕಲಾಗುತ್ತಿದೆ. ಮೇ ತಿಂಗಳಿನಲ್ಲಿ ಜಾಜ್‌ರ್ ಫೆä್ಲೕಯ್ಡ್ ಕುತ್ತಿಗೆ ಮೇಲೆ ಪೊಲೀಸ್ ಅಧಿಕಾರಿಯೊಬ್ಬ ಮಂಡಿ ಅದುಮಿದ್ದ. ಉಸಿರಾಡಲು ಆಗುತ್ತಿಲ್ಲ ಎಂದರೂ ಬಿಟ್ಟಿರಲಿಲ್ಲ. ಕೊನೆಗೆ ಫೆä್ಲೕಯ್ಡ್ ಉಸಿರಾಡಲು ಆಗದೇ ಮೃತಪಟ್ಟಿದ್ದರು. ಆನಂತರ ಕಪ್ಪು ವರ್ಣೀಯರು ಅಮೆರಿಕದಾದ್ಯಂತ ವ್ಯಾಪಕ ಹಿಂಸಾಚಾರ ನಡೆಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ