ಕೇರಳದಲ್ಲಿ ವೆಸ್ಟ್‌ ನೈಲ್‌ ಜ್ವರಕ್ಕೆ ವ್ಯಕ್ತಿ ಬಲಿ: 3 ವರ್ಷದ ಬಳಿಕ ಮತ್ತೆ ಕಾಣಿಸಿಕೊಂಡ ಕಾಯಿಲೆ!

Published : May 30, 2022, 03:00 AM IST
ಕೇರಳದಲ್ಲಿ ವೆಸ್ಟ್‌ ನೈಲ್‌ ಜ್ವರಕ್ಕೆ ವ್ಯಕ್ತಿ ಬಲಿ: 3 ವರ್ಷದ ಬಳಿಕ ಮತ್ತೆ ಕಾಣಿಸಿಕೊಂಡ ಕಾಯಿಲೆ!

ಸಾರಾಂಶ

ವೆಸ್ಟ್‌ ನೈಲ್‌ ಜ್ವರದಿಂದಾಗಿ ಕೇರಳದ ತ್ರಿಶ್ಯೂರು ಜಿಲ್ಲೆಯಲ್ಲಿ 47 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಈ ರೋಗಕ್ಕೆ ಸಂಬಂಧಿಸಿದಂತೆ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಇದು ಮೊದಲ ಸಾವಿನ ಪ್ರಕರಣವಾಗಿದೆ.

ತಿರುವನಂತಪುರ (ಮೇ.30): ವೆಸ್ಟ್‌ ನೈಲ್‌ ಜ್ವರದಿಂದಾಗಿ ಕೇರಳದ ತ್ರಿಶ್ಯೂರು ಜಿಲ್ಲೆಯಲ್ಲಿ 47 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಈ ರೋಗಕ್ಕೆ ಸಂಬಂಧಿಸಿದಂತೆ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಇದು ಮೊದಲ ಸಾವಿನ ಪ್ರಕರಣವಾಗಿದೆ. ತ್ರಿಶ್ಯೂರು ಜಿಲ್ಲೆಯಲ್ಲಿ ವೆಸ್ಟ್‌ ನೈಲ್‌ ಜ್ವರ ಕಾಣಿಸಿಕೊಂಡಿರುವುದರಿಂದ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ವಿಶೇಷ ವೈದ್ಯರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಯ ಹಲವು ಭಾಗಗಳಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಸೊಳ್ಳೆಗಳ ಸಂತಾನೋತ್ಪತ್ತಿ ಜಾಗಗಳನ್ನು ನಿರ್ಮೂಲನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.

1937ರಲ್ಲಿ ಮೊದಲ ಬಾರಿಗೆ ಉಗಾಂಡಾದಲ್ಲಿ ಕಾಣಿಸಿಕೊಂಡಿದ್ದ ಈ ರೋಗ, 2011ರಲ್ಲಿ ಕೇರಳದಲ್ಲೂ ಕಾಣಿಸಿಕೊಂಡಿತ್ತು. 2019ರಲ್ಲಿ 6 ವರ್ಷದ ಬಾಲಕನನ್ನು ಈ ರೋಗ ಬಲಿ ಪಡೆದಿತ್ತು. ಸಾವಿಗೀಡಾದ ವ್ಯಕ್ತಿಯಲ್ಲಿ ಮೇ 17ರಂದು ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದವು. ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ನಂತರ ಸರ್ಕಾರಿ ಆಸ್ಪತ್ರೆಗೆ ಆ ವ್ಯಕ್ತಿ ದಾಖಲಾಗಿದ್ದು, ಸೋಂಕು ಇರುವುದು ದೃಢಪಟ್ಟಿತ್ತು. ಹಕ್ಕಿಗಳ ಮೂಲಕ ಸೊಳ್ಳೆಗಳಿಗೆ ಈ ಸೋಂಕು ಹಬ್ಬಿ, ಸೊಳ್ಳೆ ಕಡಿತದ ಮೂಲಕ ಮಾನವರಿಗೂ ಸೋಂಕು ತಗುಲುತ್ತದೆ. ಹಲವು ಪ್ರಕರಣಗಳಲ್ಲಿ ಗಂಭೀರ ಸ್ವರೂಪದ ನರ ರೋಗಕ್ಕೂ ಈ ಜ್ವರ ಕಾರಣವಾಗುತ್ತದೆ.

ಜ್ವರ ಎಂದು ಆಸ್ಪತ್ರೆಗೆ ದಾಖಲಾದವಳು ವಾಪಸ್ ಶವವಾಗಿ ಬಂದಳು, ನವ ವಿವಾಹಿತೆಯ ದುರಂತ ಸಾವು

ದೇವರ ನಾಡಲ್ಲಿ ಮಕ್ಕಳನ್ನು ಕಾಡುತ್ತಿದೆ ಟೊಮೇಟೋ ಜ್ವರ: ಕೇರಳದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 80ಕ್ಕೂ ಹೆಚ್ಚು ಮಕ್ಕಳು ಟೊಮೆಟೋ ಜ್ವರದಿಂದ ಬಳಲಿದ್ದಾರೆ. ಮುನ್ನಚ್ಚರಿಕೆ ಕ್ರಮವಾಗಿ ರಾಜ್ಯದ ಗಡಿಯ ಮೂಲೆ-ಮೂಲೆಯಲ್ಲಿ ಕೇರಳ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಸದ್ಯ ಕೇರಳ ರಾಜ್ಯ ಟೊಮೇಟೋ ಜ್ವರ ಹರಡುವಿಕೆಯನ್ನು ಹೇಗೆ ನಿರ್ವಹಿಸುತ್ತಿದೆ ತಿಳಿಯೋಣ. 

ಮೇ 6ರಿಂದ ಕೇರಳದಲ್ಲಿ 82ಕ್ಕೂ ಹೆಚ್ಚು ಶಿಶುಗಳಿಗೆ ಹೊಸ ವೈರಲ್ ಕಾಯಿಲೆಯಾದ 'ಟೊಮೆಟೋ ಫ್ಲೂ' ಸೋಂಕು ತಗುಲಿದೆ. ಅತ್ಯಂತ ನೋವಿನ ಭಾಗವೆಂದರೆ ಅದರೊಂದಿಗೆ ಬರುವ ತೀವ್ರ ಜ್ವರವಲ್ಲ ಆದರೆ ಕೈ, ಕಾಲು ಮತ್ತು ಬಾಯಿಯ ಮೇಲೆ ಕಾಣಿಸಿಕೊಳ್ಳುವ ಭಯಾನಕ ಕೆಂಪು ದದ್ದುಗಳು. ಈ ಕೆಂಪುಗುಳ್ಳೆಗಳ ಕಾರಣದಿಂದಲೇ ಈ ಸೋಂಕಿಗೆ ಟೊಮೇಟೋ ಫ್ಲೋ ಎಂದು ಹೆಸರಿಸಲಾಗಿದೆ. ಇದು ತೀವ್ರವಾಗಿ ನೋವಿನಿಂದ ಕೂಡಿದೆ ಮತ್ತು ಸಾಂಕ್ರಾಮಿಕವಾಗಿದೆ.

ಟೊಮೇಟೋ ಜ್ವರದ ರೋಗ ಲಕ್ಷಣಗಳು: ಈ ಅಪರೂಪದ ವೈರಲ್ ಕಾಯಿಲೆಯ ಲಕ್ಷಣಗಳು, ಚಿಕಿತ್ಸೆಗಳು ಮತ್ತು ಜನರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಕೇರಳ ಆರೋಗ್ಯ ಇಲಾಖೆ ಜನರಿಗೆ ಮಾಹಿತಿ ನೀಡುತ್ತಿದೆ. ಜನರಿಗೆ ಸೋಂಕಿನ ಬಗ್ಗೆ ಸಂಪೂರ್ಣ ಅರಿವು ಮೂಡಿಸಲು ಕೇರಳ ಜಿಲ್ಲೆಯಾದ್ಯಂತ ಅಂಗನವಾಡಿ ಕಾರ್ಯಕರ್ತರನ್ನು ಮನೆ ಮನೆಗಳಿಗೆ ಕಳುಹಿಸಲಾಗುತ್ತಿದೆ.

ಟೊಮೇಟೊ ಜ್ವರ ಕೇರಳಕ್ಕೆ ಸ್ಥಳೀಯವಾಗಿದೆ ಮತ್ತು ಅದರ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ದದ್ದುಗಳನ್ನು ಹೊರತುಪಡಿಸಿ, ಇದು ಇನ್ನೂ ಕೆಲವು ರೋಗಲಕ್ಷಣಗಳನ್ನು ಒಳಗೊಂಡಿದೆ. ಹೆಚ್ಚಿನ ಜ್ವರ, ದೇಹನೋವು, ಕೀಲು ನೋವು, ವಾಕರಿಕೆ- ಬಹುತೇಕ ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಂತೆಯೇ ಇರುತ್ತವೆ. 'ಇದು ಮಾರಣಾಂತಿಕ ರೋಗವಲ್ಲ. ಆದರೆ ಸಾಂಕ್ರಾಮಿಕವಾಗಿದೆ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಹರಡಬಹುದು. ಆದರೂ ಸೋಂಕಿನ ನಿಜವಾದ ವಿಧಾನಗಳು ಇನ್ನೂ ತನಿಖೆಯಲ್ಲಿವೆ'' ಎಂದು ಕೊಚ್ಚಿಯ ಅಮೃತಾ ಆಸ್ಪತ್ರೆಯ ಆಂತರಿಕ ವೈದ್ಯಕೀಯ ಸಹಾಯಕ ಪ್ರಾಧ್ಯಾಪಕ ಡಾ ಸುಭಾಷ್ ಚಂದ್ರ ಹೇಳುತ್ತಾರೆ.

Covid 19 cases ಕೋವಿಡ್‌ ಸೋಂಕಿನ ಮೊದಲ ಮಾಹಿತಿ ಬೆನ್ನಲ್ಲೇ ಉ.ಕೊರಿಯಾದಲ್ಲಿ 6 ಸಾವು!

ಸದ್ಯಕ್ಕೆ ಟೊಮೆಟೋ ಜ್ವರಕ್ಕೆ ಯಾವುದೇ ಚಿಕಿತ್ಸೆಯಿಲ್ಲ. ಹೆಚ್ಚಿನ ವೈದ್ಯರು ರೋಗವನ್ನು ಸಾಮಾನ್ಯವಾಗಿ ನಿರ್ವಹಿಸುತ್ತಿದ್ದಾರೆ. ಟೊಮೊಟೊ ಜ್ವರವನ್ನು ಅಭಿವೃದ್ಧಿಪಡಿಸುವ ರೋಗಿಗಳು ಸಾಕಷ್ಟು ದ್ರವಗಳನ್ನು ತೆಗೆದುಕೊಳ್ಳಬೇಕು ಮತ್ತು ಇತರ ವೈರಲ್ ಜ್ವರಗಳಿಗೆ ಸಲಹೆ ನೀಡುವಂತೆ ಬೆಡ್ ರೆಸ್ಟ್ ಅನ್ನು ದೇಹವನ್ನು ಹೈಡ್ರೀಕರಿಸಿದಂತೆ ಮತ್ತು ಚೆನ್ನಾಗಿ ವಿಶ್ರಾಂತಿ ಪಡೆಯಬೇಕು ಎಂದು ಡಾ ಚಂದ್ರ ಹೇಳುತ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಂಪು, ನೀಲಿ, ಹಸಿರು, ಭಾರತೀಯ ರೈಲುಗಳ ಕಲರ್ ಕೋಡ್ ಬಗ್ಗೆ ನಿಮಗೆಷ್ಟು ಗೊತ್ತು?
ಅಜ್ಜ ಅಜ್ಜಿಯ ಮೊದಲ ಬಾರಿ ವಿಮಾನದಲ್ಲಿ ಕರೆದೊಯ್ದ ಮೊಮ್ಮಗ : ವೀಡಿಯೋ ಭಾರಿ ವೈರಲ್