105ನೇ ವಯಸ್ಸಿಗೆ 4ನೇ ಕ್ಲಾಸ್‌ ಪಾಸಾಗಿದ್ದ ಕೇರಳದ ಭಾಗೀರಥಿ ಅಮ್ಮ ನಿಧನ!

By Suvarna News  |  First Published Jul 24, 2021, 9:03 AM IST

* ಪ್ರಪಂಚದ ಅತಿ ಹಿರಿಯ ವಿದ್ಯಾರ್ಥಿ ಭಾಗೀರಥಿ ಅಮ್ಮ

* 105ನೇ ವಯಸ್ಸಿಗೆ 4ನೇ ಕ್ಲಾಸ್‌ ಪಾಸಾಗಿದ್ದ ಕೇರಳದ ಭಾಗೀರಥಿ ಅಮ್ಮ ನಿಧನ

* ಭಾರತನಾರಿಶಕ್ತಿ ಪ್ರಶಸ್ತಿ ಪಡೆದಿದ್ದ ಅಜ್ಜಿ


ತಿರುವನಂತಪುರ: ಓದಬೇಕೆನ್ನುವ ಅದಮ್ಯ ಆಸೆಯಿಂದ ತನ್ನ 105ನೇ ವಯಸ್ಸಿನಲ್ಲಿ ಕೇರಳ ಸರ್ಕಾರ ನಡೆಸುವ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಹಿರಿಯ ವಿದಸ್ಯಾರ್ಥಿ ಭಾಗೀರಥಿ ಅಮ್ಮ(107) ವಯೋಸಹಜ ಕಾರಣಗಳಿಂದ ಗುರುವಾರ ಕೊನೆಯುಸಿರೆಳೆದಿದ್ದಾರೆ. 

ಕೊಲ್ಲಂನ ಪ್ರಕುಲಂ ಮೂಲದ ಭಾಗೀರಥಿ ಅಮ್ಮ ರಾಜ್ಯ ಸಾಕ್ಷರತಾ ಮಿಷನ್‌ನ ಸಾಕ್ಷರತೆ ಮತ್ತು ಮುಂದುವರಿದ ಶಿಕ್ಷಣ ಚಟುವಟಿಕೆಗಳಿಗೆ ಪೋಸ್ಟರ್ ಗರ್ಲ್ ಆಗಿದ್ದರು, ತನ್ನ ಇಳಿವಯಸ್ಸಿನಲ್ಲಿ ಇನ್ನಷ್ಟು ಕಲಿಯಬೇಕೆಂಬ ಉತ್ಸಾಹದಿಂದ ಇದ್ದ ಭಗೀರಥಿ ಅಮ್ಮ ಎರಡು ಸಫಲವಾಗದ ಕನಸುಗಳೊಂದಿಗೆ ಇಹಲೋಕ ತ್ಯಜಿಸಿದ್ದಾರೆ.

Tap to resize

Latest Videos

ಮೂರನೇ ತರಗತಿಗೆ ಶಾಲೆಯನ್ನು ಬಿಟ್ಟಿದ್ದ ಅವರು ಓದಬೇಕು ಎಂಬ ಆಸೆಯನ್ನು ಬಿಡದೇ 105ನೇ ವಯಸ್ಸಿನಲ್ಲಿ ಸರ್ಕಾರ ನಡೆಸುವ ಸಾಕ್ಷರತಾ ಪರೀಕ್ಷೆಡಯಲ್ಲಿ 275ಕ್ಕೆ 205 ಅಂಕ ಪಡೆದು ಪಾಸ್ ಆಗಿದ್ರು. ಮೂರು ಪ್ರಶ್ನೆಪತ್ರಿಕೆಗಳ ಪರೀಕ್ಷೆ ಬರೆಯಲು ಅವರಿಗೆ ಮೂರು ದಿನಗಳ ಸಮಯ ಬೇಕಾಗಿತ್ತು. ಭಾಗೀರತಿ ಅಮ್ಮ 7 ನೇ ತರಗತಿಯ ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 10 ನೇ ತರಗತಿ ಪರೀಕ್ಷೆಗೆ ಹಾಜರಾಗಲು ಬಯಸಿದ್ದರು. ನಟ ಸುರೇಶ್ ಗೋಪಿಯೊಂದಿಗೆ ವೈಯಕ್ತಿಕವಾಗಿ ಮಾತನಾಡುವುದು ಅವಳ ಇನ್ನೊಂದು ಕನಸಾಗಿತ್ತು. ಅವರ ಈ ಎರಡು ಕನಸು ನನಸಾಗುವ ಮೊದಲೇ ಗುರುವಾರ ರಾತ್ರಿ 11.55 ಕ್ಕೆ ನಿಧನರಾಗಿದ್ದಾರೆ.

ಗಣಿತ ಪರೀಕ್ಷೆಯಲ್ಲಿ ಭಗೀರಥಿ ಅಮ್ಮ 75% ಅಂಕಗಳೊಂದಿಗೆ ಉತ್ತೀರ್ಣರಾಗಿ 100% ಅಂಕಗಳನ್ನು ಗಳಿಸಿದಾಗ ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ನಲ್ಲಿ ಬಹಿರಂಗವಾಗಿ ಹೊಗಳಿದ್ದರು. ಭಾಗೀರಥಿ ಅಮ್ಮನ ಆಪ್ತ ಸ್ನೇಹಿತೆ ಮತ್ತು ನೆರೆಯ ಶಾರದಾ ಅವರ ಪುತ್ರಿ ಎಸ್.ಎನ್. ಶೆರ್ಲಿ ಅವರಿಗೆ ಕಲಿಸುತ್ತಿದ್ದರು. ಅವರ ಕಿರಿಯ ಮಗಳು ತಂಕಮಣಿ ಪಿಳ್ಳೈ ಕೂಡ ಜೊತೆಯಾಗಿ ನೆರವಾಗಿದ್ದರು,  ಇಡೀ ತ್ರಿಕ್ಕರು ಪಂಚಾಯತ್  ಇನ್ನಷ್ಟು ಕಲಿಯಲು ಅವರ ಪ್ರಯತ್ನವನ್ನು ಬೆಂಬಲಿಸಿತು ಮತ್ತು ಪ್ರೋತ್ಸಾಹಿಸಿತು. 

ಭಾಗೀರಥಿ ಅಮ್ಮ ದಿವಂಗತ ರಾಘವನ್ ಪಿಳ್ಳೈ ಅವರ ಪತ್ನಿ. ಪತ್ಮಕ್ಷಿ ಅಮ್ಮ, ತುಲಸೀಧರನ್ ಪಿಳ್ಳೈ, ಸೋಮನಾಥನ್ ಪಿಳ್ಳೈ, ಅಮ್ಮಿನಿ ಅಮ್ಮ ಮತ್ತು ತಂಕಮಣಿ ಎ ಪಿಳ್ಳೈ ಎಂಬ ಮಕ್ಕಳಿದ್ದಾರೆ.

click me!