ವೈದ್ಯಕೀಯ ವಿದಾರ್ಥಿಗಳ ಸಕತ್ ಡ್ಯಾನ್ಸ | ಸಾಮಾಜಿಕ ಜಾಲತಾಣದಲ್ಲಿ ವಿಡೀಯೋ ವೈರಲ್ | ಕೇರಳ ಮೂಲದ ವೈದ್ಯಕೀಯ ವಿದ್ಯಾರ್ಥಿಗಳು | ಒಮ್ ಕುಮಾರ್ ಮತ್ತು ನವೀನ್ ರಜಾಖ್ ನೃತ್ಯಕ್ಕೇ ನೆಟ್ಟಿಗರು ಫಿದಾ
ತಿರುವನಂತಪುರಂ(ಏ.05): ಕೊರೋನಾ ಮಹಾಮಾರಿ ಜಗತ್ತನ್ನು ನಾವು ನೋಡುವ ದೃಷ್ಟಿಕೋನವನ್ನೇ ಬದಲಾಯಿಸಿದೆ. ಕೊರೊನಾ ವೈರಸ್ ಜಗತ್ತಿನ ಬಹುತೇಕ ದೇಶಗಳ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಮೇಲೆ ಪರಿಣಾಮ ಬೀರಿದೆ.
ಈ ಮಹಾಮಾರಿಯ ಆರ್ಭಟದ ಮಧ್ಯೆ ಹಗಲು ರಾತ್ರಿ ಎನ್ನದೇ ದುಡಿದಿದ್ದು ಆರೋಗ್ಯ ಕಾರ್ಯಕರ್ತರು. ಆರೋಗ್ಯ ಕಾರ್ಯಕರ್ತರು ತಿಂಗಳುಗಟ್ಟಲೇ ಯಾವುದೇ ರಜೆ ಪಡೆದುಕೊಳ್ಳದೇ ರೋಗಿಗಳ ಸೇವೆ ಮಾಡಿರುವ ಹಲವಾರು ಘಟನೆಗಳನ್ನು ನಾವು ನೋಡಿದ್ದೇವೆ. ಕೊರೊನಾದಂತಹ ಸಂಧಿಗ್ಧ ಸ್ಥಿತಿಯಲ್ಲೂ ಕೂಡ ತಮ್ಮ ಉತ್ಸಾಹ ಕುಗ್ಗದಂತೆ ನೋಡಿಕೊಳ್ಳಲು ಹಲವಾರು ರೀತಿಯ ಕಸರತ್ತುಗಳನ್ನು ಮಾಡಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
undefined
ಈಗ ಇದೇ ಮಾದರಿಯಲ್ಲಿ ಕೇರಳದ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಮಾಡಿರುವ ನೃತ್ಯದ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡ್ತಾ ಇದೆ. ತ್ರಿಸ್ಸುರ್ ವೈದ್ಯಕೀಯ ಕಾಲೇಜಿನ 3ನೇ ಮತ್ತು 4ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಾದ ಜಾನಕಿ ಒಮ್ ಕುಮಾರ್ ಮತ್ತು ನವೀನ್ ರಜಾಖ್ ತಮ್ಮ ಅದ್ಭುತ ನೃತ್ಯದ ಮೂಲಕ ಈಗ ಇಂಟರ್ನೇಟ್ ಸೆನ್ಸೇಷನ್ ಆಗಿದ್ದಾರೆ.
1970 ರ ದಶಕದ ಪ್ರಖ್ಯಾತ ಹಾಡಿಗೆ ಸ್ಟೇಪ್ಸ ಹಾಕಿರುವ ಇವರು ವೆನೆಸಾ ಸೆಕೊ ಎಂಬ ನೃತ್ಯ ನಿರ್ದೇಶಕರಿಂದ ಪ್ರಭಾವಿತರಾಗಿದ್ದಾರೆ. ಕೆಲವೇ ಹೊತ್ತು ಈ ನೃತ್ಯವನ್ನು ಅಭ್ಯಾಸ ಮಾಡಿ ನಂತರ ಕ್ಯಾಮೆರಾ ಮುಂದೆ ನೃತ್ಯವನ್ನು ಮಾಡಿದ್ದಾರೆ.
ʼ ಪರೀಕ್ಷೆಯ ಒತ್ತಡದಿಂದ ನಮಗೆ ಸ್ವಲ್ಪ ಹೊತ್ತು ಬಿಡುಗಡೆ ಬೇಕಾಗಿತ್ತು, ಹಾಗಾಗಿ ನಮ್ಮ ಇಷ್ಟದ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದೇವೆ. 2 ಗಂಟೆಯಲ್ಲಿ ಈ ನೃತ್ಯವನ್ನು ಚಿತ್ರೀಕರಿಸಿದ್ದೇವೆ.ಈ ಹಿಂದೆ ಕೂಡ ನಾವು ಈ ರೀತಿ ಪ್ರಯತ್ನಗಳನ್ನೂ ಮಾಡಿದ್ದೇವು. ಆದರೆ ಇದೆ ಮೊದಲ ಬಾರಿಗೆ ನಮ್ಮ ವಿಡೀಯೋಗೆ ಸಾಮಾಜಿಕ ಜಾಲತಾಣದಲ್ಲಿ ಪ್ರೋತ್ಸಾಹ ಸಿಕ್ಕಿದೆʼ ಎಂದು ಜಾನಕಿ ಮತ್ತು ನವೀನ್ ಹೇಳಿದ್ದಾರೆ.
ನವೀನ್ ರಜಾಖ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಾಕಿದ ಈ ವಿಡೀಯೋಗೆ 2.5 ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಬಂದಿದ್ದು ಬೇರೆ ಜಾಲತಾಣಗಳಲ್ಲೂ ಕೂಡ ಲಕ್ಷಾಂತರ ಜನ ವೀಕ್ಷೀಸಿದ್ದಾರೆ. ʼನಾನು ಮೋಬೈಲನ್ನೂ ಹೆಚ್ಚು ಬಳಸುವುದಿಲ್ಲ ಅಲ್ಲದೇ ಸಾಮಾಜಿಕ ಜಾಲತಾಣದಲ್ಲು ಕೂಡ ಅಷ್ಟು ಯ್ಯಾಕ್ಟೀವ್ ಆಗಿರಲಿಲ್ಲ. ಆದರೆ ಕೆಲವು ದಿನಗಳಿಂದ ನಮ್ಮ ವಿಡೀಯೋ ವೈರಲ್ ಆಗಿದೆ. ವಿಡೀಯೋ ವೈರಲ್ ಆಗಿರುವುದು ಖುಷಿ ತಂದಿದೆ. ಎಲ್ಲರಿಗೂ ಧನ್ಯವಾದಗಳುʼ ಎಂದು ನವೀನ್ ರಜಾಖ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಕೊರೊನ ಲಾಕಡೌನ್ ಸಂದರ್ಭದಲ್ಲೂ ಕೂಡ ಕ್ವಾರೈಂಟೈನ್ ಸೆಂಟರ್ಗಳಲ್ಲಿ ವೈದ್ಯರು ನೃತ್ಯ ಮಾಡಿದ್ದ ವೀಡಿಯೋಗಳು ವೈರಲ್ ಆಗಿದ್ದವು. ಈಗ ಕೇರಳದ ವೈದ್ಯಕೀಯ ವಿದ್ಯಾರ್ಥಿಗಳು ನೃತ್ಯ ಮಾಡಿರುವ ಈ ವಿಡೀಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದು ನೆಟ್ಟಿಗರು ಫಿದಾ ಆಗಿದ್ದಾರೆ.