ಮಿಸ್ಸಾಯ್ತು ರೈಲು, ದುಡ್ಡಿಲ್ಲ, ಫೋನಿಲ್ಲ, 300 ಕಿ.ಮೀ ನಡೆದುಕೊಂಡೇ ಮನೆ ಸೇರಿದ!

By Suvarna NewsFirst Published Dec 11, 2022, 10:40 PM IST
Highlights

ರೈಲಿನಿಂದ ಇಳಿದ ವಾಪಸ್ ಬರುವಷ್ಟರಲ್ಲೇ ರೈಲು ಹೊರಟಾಗಿದೆ. ಈತನ ಬಳಿ ಫೋನ್ ಇಲ್ಲ, ದುಡ್ಡೂ ಇಲ್ಲ.  ಮನೆ ಸೇರಲು ಈತ ಬರೊಬ್ಬರಿ 300 ಕಿಲೋಮೀಟರ್ ನಡೆದಿದ್ದಾನೆ. 
 

ಪಟ್ಟಣಂತಿಟ್ಟ(ಡಿ.11): ಈಗಿನ ಕಾಲದಲ್ಲಿ ವಯಸ್ಕರು ಮಿಸ್ಸಾದರೆ ಮನೆ ಸೇರುವುದು ಕಷ್ಟದ ಮಾತಲ್ಲ. ಫೋನ್, ದಡ್ಡು ಯಾವುದೂ ಇಲ್ಲ ಎಂದರೂ ಸಣ್ಣ ಪ್ರಯತ್ನ ಮಾಡಿದರೂ ಮನೆ ಸೇರಿಕೊಳ್ಳಬಹುದು. ಆದರೆ ಇಲ್ಲೊಬ್ಬರು ರೈಲಿನಿಂದ ಇಳಿದು ವಾಪಸ್ ಬರುವಷ್ಟರಲ್ಲೇ ರೈಲು ಹೋರಟು ಹೋಗಿದೆ. ಫೋನ್, ದುಡ್ಡು ಯಾವುದೂ ಇಲ್ಲ. ಹೀಗಾಗಿ 300 ಕಿಲೋಮೀಟರ್ ನಡೆದುಕೊಂಡು ಮನೆ ಸೇರಿದ ಘಟನೆ ನಡೆದಿದೆ. ಕೇರಳದ ಅನಿಲ್ ತನ್ನ ಸಂಬಂಧಿಯನ್ನು ಆಂಧ್ರ ಪ್ರದೇಶದ ನರ್ಸಿಂಗ್ ಕಾಲೇಜಿಗೆ ಬಿಡಲು ಹೋಗಿದ್ದಾರೆ. ಮರಳಿ ಬರುವಾಗ ಈ ಘಟನೆ ನಡೆದಿದೆ. ಅನಿಲ್ ಮೊಬೈಲ್ ಫೋನ್ ಬಳಸುತ್ತಿಲ್ಲ. ಇದ್ದ ದುಡ್ಡು ಹಾಗೂ ಬ್ಯಾಗ್ ರೈಲಿನಲ್ಲಿ ಬಿಟ್ಟಾಗಿದೆ. ಮರಳಿ ಹೋಗಲು ಹಣವಿಲ್ಲದೆ ನಡೆದುಕೊಂಡ ಮನೆ ಸೇರಿದ್ದಾರೆ.

ಅನಿಲ್ ಹಾಗೂ ಕುಟುಂಬಸ್ಥರು ಸಂಬಂಧಿಯೊಬ್ಬಳನ್ನು ನರ್ಸಿಂಗ್ ಕಾಲೇಜಿಗೆ ಬಿಡಲು ಕೇರಳದಿಂದ ಆಂಧ್ರಪ್ರದೇಶಕ್ಕೆ ತೆರಳಿದ್ದಾರೆ. ಮರಳಿ ರೈಲಿನ ಮೂಲಕವೇ ವಾಪಾಸ್ಸಾಗಿದ್ದಾರೆ. ಆದರೆ ರೈಲು ದಿಂಡುಗಲ್ ಬಳಿ ನಿಂತಿತ್ತು. ಈ ವೇಳೆ ರೈಲಿನಿಂದ ಇಳಿದ ಅನಿಲ್, ಮರಳಿ ಬರುವಷ್ಟರಲ್ಲೇ ರೈಲು ಹೋರಟಾಗಿದೆ. ಇತ್ತ ರೈಲಿನಲ್ಲಿದ್ದ ಸಂಬಂಧಿಕರಿಗೆ ಅನಿಲ್ ಎಲ್ಲಿ ಇಳಿದಿದ್ದಾನೆ? ಎಲ್ಲಿ ಮಿಸ್ಸಾಗಿದ್ದಾನೆ ಅನ್ನೋದು ಗೊತ್ತಿಲ್ಲ. 

ಬೆಳಗಾವಿ: ಸಂಕೇಶ್ವದಲ್ಲಿ ಕಾಣೆಯಾದ ಬಾಲಕ ದೆಹಲಿ ರೈಲ್ವೆ ನಿಲ್ದಾಣದಲ್ಲಿ ಪತ್ತೆ..!

ಅನಿಲ್ ಮೊದಲೇ ಮೊಬೈಲ್ ಫೋನ್ ಬಳಕೆ ಮಾಡುತಿಲ್ಲ. ಹೀಗಾಗಿ ಮನೆಯವರ ಫೋನ್ ನಂಬರ್ ಈತನಿಗೆ ತಿಳಿದಿಲ್ಲ. ಆಪ್ತರು, ಸಂಬಂಧಿಕರು ಸೇರಿದಂತೆ ಯಾರ ನಂಬರ್ ಕೂಡ ಈತನಿಗೆ ಗೊತ್ತಿಲ್ಲ. ಕೈಯಲ್ಲಿ ಒಂದು ರೂಪಾಯಿ ಕೂಡ ಇಲ್ಲ. ರೈಲು ನಿಲ್ದಾಣದಿಂದ ಹೊರಬಂದ ಅನಿಲ್‌ ಎದುರಿಗೆ ಬಂದ ಪೊಲೀಸ್ ಅಧಿಕಾರಿಯಲ್ಲಿ ಮನವಿ ಮಾಡಿದ್ದಾರೆ. 

ಪೊಲೀಸ್ ಅಧಿಕಾರಿ ತಮ್ಮ ವಾಹನದಲ್ಲಿ ಕೆಲ ದೂರ ಡ್ರಾಪ್ ಮಾಡಿದ್ದಾರೆ. ಬಳಿಕ 200 ರೂಪಾಯಿ ನೀಡಿದ್ದಾರೆ. ಮೊದಲೇ ಹೆಚ್ಚು ಒದಿಲ್ಲದ ಅನಿಲ್ ಈ ಹಣದಲ್ಲಿ ರೈಲು ಹತ್ತುವ ಪ್ರಯತ್ನ ಮಾಡಿಲ್ಲ. ಬಸ್‌ಗೆ ಈ ಹಣ ಸಾಕಾಗುತ್ತೆ ಅನ್ನೋ ನಂಬಿಕೆ ಅನಿಲ್‌ಗಿಲ್ಲ. ಹೀಗಾಗಿ 200 ರೂಪಾಯಿ ಹಿಡಿದು ಕೇರಳದ ಪಟಣಂತಿಟ್ಟ ಜಿಲ್ಲೆಯ ಮಾಥೂರ್‌ಗೆ ನಡೆದುಕೊಂಡೇ ಪ್ರಯಾಣ ಆರಂಭಿಸಿದ್ದಾನೆ.

ಕಾಡಿನಲ್ಲಿ ನಾಪತ್ತೆಯಾಗಿದ್ದ ಮಾಲೀಕನ ಹುಡುಕಿಕೊಟ್ಟ ಸಾಕು ನಾಯಿ ಟಾಮಿ!

ಇತ್ತ ಅನಿಲ್ ಕುಟಂಬಸ್ಥರು ಚೆಂಗನ್ನೂರು ರೈಲು ನಿಲ್ದಾಣದಲ್ಲಿ ಇಳಿದಿದ್ದಾರೆ.  ಈ ವೇಳೆ ಅನಿಲ್ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ರೈಲು ಹೋಗಿ ಕೆಲ ಹೊತ್ತಾದರೂ ಅನಿಲ್ ಸುಳಿವಿಲ್ಲ. ಈ ವೇಳೆ ಅನಿಲ್ ನಿಜಕ್ಕೂ ಕಳೆದುಹೋಗಿದ್ದಾರೆ ಎಂದು ನಿರ್ದರಿಸಿದ ಕುಟುಂಬ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. 

ಇತ್ತ ಅನಿಲ್ ಯಾರಬಳಿ ಹಣ ಕೇಳಲು ಮುಜುಗರ. ಎಲ್ಲಿ ತಪ್ಪು ತಿಳಿದುಕೊಳ್ಳುತ್ತಾರೋ, ಸುಳ್ಳು ಹೇಳಿ ಹಣವಸೂಲಿ ಮಾಡುವಾತ ಎಂದುಕೊಳ್ಳುತ್ತಾರೋ ಎಂದು ಯಾರಲ್ಲೂ ಹಣ ಕೇಳಿಲ್ಲ. ನಡೆದುಕೊಂಡೇ ಸಾಗಿದ್ದಾನೆ. ರಾತ್ರಿ ಬಸ್ ನಿಲ್ದಾಣಗಳಲ್ಲಿ ಮಲಗಿದ್ದಾನೆ. ನಾಲ್ಕು ದಿನ ಊಟ ಮಾಡದೇ ನಡೆದಿದ್ದಾನೆ. ಬಸ್ ನಿಲ್ದಾಣಗಳಲ್ಲಿನ ಕುಡಿಯುವ ನೀರು ಕುಡಿದು ಯಾತ್ರೆ ಮುಂದುವರಿಸಿದ್ದಾನೆ. 

ರಾತ್ರಿ ನಡೆಯುವ ಸಾಹಸಕ್ಕೆ ಮುಂದಾಗಿಲ್ಲ. ರಾತ್ರಿ ನಿಲ್ದಾಣಗಳು, ದೇವಸ್ಥಾನಗಳ ಬಳಿ ಮಲಗಿ ಮತ್ತೆ ಬೆಳಗ್ಗೆ ಪ್ರಯಾಣ ಮುಂದುವರಿಸಿದ್ದಾನೆ. ಹೀಗೆ ನಿಲ್ದಾಣದಲ್ಲಿ ರಾತ್ರಿ ಕಳೆಯುವ ವೇಳೆ ಕೆಲ ಭಿಕ್ಷುಕರು ಚಹಾ ಕುಡಿಯಲು ಹಣ ನೀಡಿದ್ದಾರೆ. ನಡೆದುಕೊಂಡು ಬರೋಬ್ಬರಿ 300 ಕಿಲೋಮೀಟರ್ ಕ್ರಮಿಸಿದ್ದಾನೆ. ಈ ವೇಳೆ ಅನಿಲ್ ಗ್ರಾಮದವ ವ್ಯಕ್ತಿಯೊರ್ವ ಈತನನ್ನು ಗಮನಿಸಿದ್ದಾರೆ. ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಆಗಮಿಸಿ ಅನಿಲ್‌ನನ್ನು ವಾಹನದಲ್ಲಿ ಮನಗೆ ಬಿಟ್ಟಿದ್ದಾರೆ. ಬರೋಬ್ಬರಿ 300 ಕಿ.ಮೀ ನಡೆದುಕೊಂಡು ಮನೆ ಸೇರಿದ ಈ ಅನಿಲ್ ಇದೀಗ ಪಟ್ಟಣಂತಿಟ್ಟ ಜಿಲ್ಲೆಯ ಮನೆಮಾತನಾಗಿದ್ದಾರೆ.

click me!