ಪಶ್ಚಾತ್ತಾಪದಿಂದ ಪೊಲೀಸರಿಗೆ ಶರಣು, ಆಗಲೇ ಗೊತ್ತಾಗಿದ್ದು 40 ವರ್ಷ ಹಳೇ ಕೊಲೆ ಪ್ರಕರಣ

Published : Jul 05, 2025, 08:38 PM IST
Police jeep glass broke

ಸಾರಾಂಶ

ಸಣ್ಣ ಗ್ರಾಮದಲ್ಲಿ ನಡೆದ ಕೊಲೆ ಪೊಲೀಸರಿಗೆ ಗೊತ್ತೆ ಆಗಲಿಲ್ಲ. ಸಹಜ ಸಾವಾಗಿ ಪ್ರಕರಣ ದಾಖಲಿಸಿದ್ದ ಪೊಲೀಸರು ಪ್ರಕರಣ ಕ್ಲೋಸ್ ಮಾಡಿದ್ದರು. ಆದರೆ ಕೊಲೆ ಮಾಡಿದ ಆರೋಪಿಗೆ ಪಶ್ಚಾತ್ತಾಪ ಶುರುವಾಗಿದೆ. 40 ವರ್ಷದ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಇದರೊಂದಿಗೆ ಹಳೇ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ.

ತಿರುವುಂತಪುರಂ (ಜು.05) ಪೊಲೀಸ್ ಠಾಣೆಗೆ 50ರ ಹರೆಯದ ವ್ಯಕ್ತಿಯೊಬ್ಬ ಆಗಮಿಸಿ ತನ್ನ ಎರಡು ಕೈಗಳನ್ನು ಪೊಲೀಸರ ಮುಂದೆ ಎತ್ತಿ ಹಿಡಿದು ನನ್ನಿಂದ ತಪ್ಪಾಗಿದೆ. ನನ್ನನ್ನು ಬಂಧಿಸಿ ಎಂದಿದ್ದಾನೆ. ಪೊಲೀಸರಿಗೆ ಅಚ್ಚರಿಯಾಗಿದೆ. ಸೌಮ್ಯ ಸ್ವಭಾವದ ಈ ವ್ಯಕ್ತಿ ಮೇಲೆ ಒಂದೇ ಒಂದು ಪ್ರಕರಣವಿಲ್ಲ. ಇದುವರೆಗೂ ಯಾವುದೇ ಗಲಭೆ, ಪ್ರತಿಭಟನೆಗಲ್ಲಿ ಪಾಲ್ಗೊಂಡಿಲ್ಲ. ತಾನಾಯ್ತು, ತನ್ನ ಕುಟುಂಬವಾಯಿತು ಅನ್ನೋ ಹಾಗೇ ಬದುಕಿದ್ದ ಈತ ಪೊಲೀಸರು ಮುಂದೆ ಶರಣಾಗುತ್ತಿರುವುದೇಕೆ ಎಂದು ಪೊಲೀಸರು ಅಚ್ಚರಿಗೊಂಡಿದ್ದಾರೆ. ಕಡತ ತಡಕಾಡಿದ್ದಾರೆ. ಕೊನೆಗೆ ಪೊಲೀಸರು ಯಾಕೆ ಶರಣಾಗುತ್ತಿದ್ದಿಯಾ ಎಂದು ಪ್ರಶ್ನಿಸಿದಾಗ ಬರೋಬ್ಬರಿ 40 ವರ್ಷಗಳ ಹಿಂದೆ ಕೊಲೆ ಪ್ರಕರಣವೊಂದು ಬಯಲಾಗಿದೆ.

ಕೊಝಿಕೋಡ್ ಜಿಲ್ಲೆಯ ಕೂಡರಾಂಜಿಯಲ್ಲಿ ನಡೆದಿತ್ತು ಕೊಲೆ

ಅದು 1986ರ ಸಮಯ. ಮೊಹಮ್ಮದ್ ಆಲಿ ಅನ್ನೋ ಬಾಲಕ ಅಚಾನಕ್ಕಾಗಿ ಕೊಲೆ ಮಾಡಿದ್ದ. 14 ವರ್ಷದ ಮೊಹಮ್ಮದ್ ಆಲಿ, ಕೋಝಿಕ್ಕೋಡ್‌ನ ಕೊಡರಾಂಜಿ ಗ್ರಾಮದಲ್ಲಿ ದೇವಸ್ಯ ಅನ್ನೋ ಮಾಲೀಕನ ತೋಟದಲ್ಲಿ ಕೆಲಸ ಮಾಡುತ್ತಿದ್ದ. ಆದರೆ ದೇವಸ್ಯ ನೀಡುತ್ತಿದದ್ ಕಿರುಕುಳದಿಂದ ಬೇಸತ್ತ ಮೊಹಮ್ಮದ್ ಆಲಿ ಕಾಲಿನಿಂದ ದೇವಸ್ಸಗೆ ಒದ್ದಿದ್ದ. ಆಧರೆ ಒದ್ದ ರಭಸಕ್ಕೆ ದೇವಸ್ಯ ಪ್ರಜ್ಞೆ ತಪ್ಪಿ ನೀರಿನ ಸಣ್ಣ ತೊರೆಗೆ ಬಿದ್ದಿದ.

ಗಾಬರಿಗೊಂಡ ಮೊಹಮ್ಮದ್ ಆಲಿ ಸ್ಥಳದಿಂದ ಕಾಲ್ಕಿತ್ತಿದ್ದ. ಮರುದಿನ ಬಂದು ಅದೇ ಸ್ಥಳದಲ್ಲಿ ನೋಡಿದಾಗ ದೇವಸ್ಯನ ಮೃತದೇಹ ಅದೇ ನೀರಿನಲ್ಲಿತ್ತು. ಆದರೆ ಬಾಲಕನಾಗಿದ್ದ ಕಾರಣ ಪರಾರಿಯಾಗಲು ಸಾಧ್ಯವಾಗಿಲ್ಲ. ಇತ್ತ ದೇವಸ್ಯ ಕಾಣದಾಗ ಕುಟುಂಬಸ್ಥರು ಹುಡುಕಾಡಿದಾಗ ಮೃತದೇಹ ತೊಟದ ಪಕ್ಕದಲ್ಲಿ ಪತ್ತೆಯಾಗಿದೆ. ಪೊಲೀಸರು ಆಗಮಿಸಿ ಕಾಲು ಜಾರಿ ಬಿದ್ದಿರುವ ಸಾಧ್ಯತೆ ಇದೆ ಎಂದು ಸಹಜ ಸಾವು ಎಂದು ಪ್ರಕರಣ ಕ್ಲೋಸ್ ಮಾಡಿದ್ದರು.

ಈ ಪ್ರಕರಣ ಕುರಿತು ಯಾರಿಗೂ ದೂರು ಇರಲಿಲ್ಲ. ಇಷ್ಟೇ ಅಲ್ಲ ದೇವಸ್ಯ ಆರೋಗ್ಯ ಕೂಡ ಹದಗೆಟ್ಟಿದ್ದ ಕಾರಣ ಇದು ಸಹಜ ಸಾವಾಗಿ ಮಾರ್ಪಟ್ಟಿತ್ತು. ಯಾರಿಗೂ ಇದೊಂದು ಕೊಲೆ ಎಂದು ಅನುಮಾನ ಮೂಡಲೇ ಇಲ್ಲ. ಇತ್ತ ಮೊಹಮ್ಮದ್ ಆಲಿ ಒಂದು ಮಾತು ಆಡದೇ ಸೈಲೆಂಟ್ ಆಗಿದ್ದ. ಎಲ್ಲೂ ಕೂಡ ಈ ರೀತಿಯ ಘಟನೆ ನಡೆದಿದೆ ಎಂದು ಯಾರೂ ಬಳಿಯೂ ಹೇಳಿಕೊಂಡಿಲ್ಲ. ಅದೆಷ್ಟೇ ಆಪ್ಚರಾಗಿದ್ದರೂ, ಈ ಘಟನೆ ಮಾತ್ರ ಬಾಯಿಬಿಡಲೇ ಇಲ್ಲ.

ಪ್ರತಿ ದಿನ ಕಾಡಿತ್ತು ಕೊಲೆ

ಮೊಹಮ್ಮದ್ ಆಲಿ ಪ್ರಕರಣದಿಂದ ಗ್ರೇಟ್ ಎಸ್ಕೇಪ್ ಆಗಿದ್ದ. ಪೊಲೀಸರು ಸಹಜ ಸಾವು ಪ್ರಕರಣ ದಾಖಲಿಸಿಕೊಂಡ ಕಾರಣ ಇದರ ತನಿಖೆಯೂ ನಡೆಯಲಿಲ್ಲ. ಹೀಗಾಗಿ ಮೊಹಮ್ಮದ್ ಆಲಿ ಸೇಫ್ ಆಗಿದ್ದ. ಆದರೆ ಪ್ರತಿ ದಿನ ಮೊಹಮ್ಮದ್ ಆಲಿಗೆ ಈ ಕೊಲೆ ಕಾಡುತ್ತಿತ್ತು. ಯಾರ ಬಳಿಯೂ ಹೇಳಕೊಳ್ಳುವಂತಿರಲಿಲ್ಲ. ದೇವಸ್ಸ ಕುಟುಂಬಸ್ಥರೇ ಈ ಪ್ರಕರಣ ಮರೆತರೂ ಮೊಹಮ್ಮದ್ ಆಲಿ ಮಾತ್ರ ಮರೆತಿರಲಿಲ್ಲ. ಪ್ರತಿ ದಿನ ತಾನು ತಪ್ಪು ಮಾಡಿದ್ದೇನೆ ಅನ್ನೋ ಭಾವನೆ ಕಾಡತೊಡಗಿತು. ಯಾರ ಬಳಿಯಾದರೂ ಹೇಳಿಕೊಳ್ಳಬೇಕು ಏನಿಸಿದೆ. ಆದರೆ ಒಬ್ಬರಿಂದ ಒಬ್ಬರಿಗೆ ಹರಡಿ ಕೊನೆಗೆ ಈ ಘಟನೆಯ ಸ್ವರೂಪ ಬದಲಾಗಲಿದೆ ಅನ್ನೋ ಭಯ ಆವರಿಸಿದೆ.

54ನೇ ವಯಸ್ಸಿನಲ್ಲಿ ಪೊಲೀಸರಿಗೆ ಶರಣು

ಕೊನೆಗೆ ಬೇರೆ ದಾರಿ ಕಾಣದೆ, ಇತ್ತ ಪಶ್ಚಾತ್ತಾಪದಿಂದ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ನಡದ ಘಟನೆ ಹೇಳಿ ಶರಣಾಗಿದ್ದಾನೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಮೊಹಮ್ಮದ್ ಆಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಪೊಲೀಸರಿಗೆ ಶರಣಾಗುವ ಮೂಲಕ ಬರೋಬ್ಬರಿ 40 ವರ್ಷಗಳ ಹಿಂದಿನ ಕೊಲೆ ಪ್ರಕರಣ ಬಯಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌
ಜಾಲತಾಣಗಳಲ್ಲಿ ಮಕ್ಕಳ ಬಳಕೆ ನಿರ್ಬಂಧಿಸಿ: ಸುಧಾ ಮೂರ್ತಿ