ಫಲಿಸದ ಪ್ರಾರ್ಥನೆ: ನಾಪತ್ತೆಯಾದ 6 ವರ್ಷದ ದೇವಾನಂದ ಶವವಾಗಿ ಪತ್ತೆ!

By Suvarna NewsFirst Published Feb 28, 2020, 11:03 AM IST
Highlights

ಫಲಿಸದ ಪ್ರಾರ್ಥನೆ, ನಾಪತ್ತೆಯಾದ ಬಾಲಕಿ ಶವವಾಗಿ ಪತ್ತೆ| 24 ಗಂಟೆ ಬಳಿಕ ಪತ್ತೆಯಾಯ್ತು 6 ವರ್ಷದ ಬಾಲಕಿ ಮೃತದೇಹ| ಸೋಶಿಯಲ್ ಮೀಡಿಯಾದಲ್ಲೂ ಬಾಲಕಿಯ ಪತ್ತೆಗೆ ನಡೆದಿತ್ತು ಕಸರತ್ತು

ಕೊಲ್ಲಂ[ಫೆ.28]: ನೂರಾರು ಮಂದಿ ಆ ಪುಟ್ಟ ಬಾಲಕಿಗಾಗಿ ತೀವ್ರ ಹುಡುಕಾಟ ನಡೆಸಿದ್ದರು, ಸೋಶಿಯಲ್ ಮೀಡಿಯಾದಲ್ಲೂ ಬಾಲಕಿ ನಾಪತ್ತೆಯಾಗಿದ್ದಾಳೆ ಎಂಬ ಪೋಸ್ಟ್ ಗಳು ಭಾರೀ ಪ್ರಮಾಣದಲ್ಲಿ ಶೇರ್ ಆಗಿದ್ದವು. ಬಾಲಕಿಯ ಹೆತ್ತವರು ಕಂಡ ಕಂಡ ದೇವರ ಮೊರೆ ಹೋಗಿದ್ದರು. ಆದರೀಗ ಆ ಪುಟ್ಟ ಬಾಲಕಿಯ ಶವ ನದಿಯಲ್ಲಿ ಪತ್ತೆಯಾಗಿದೆ. 

ಹೌದು ಕೇರಳದ ಕೊಲ್ಲಂ ಎಲವೂರು ಎಂಬ ಪ್ರದೇಶದಲ್ಲಿ 6 ವರ್ಷದ ಬಾಲಕಿ ದೇವಾನಂದ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆಯೇ ಹೆತ್ತವರು, ಕುಟುಂಬಸ್ಥರು ತೀವ್ರ ಹುಡುಕಾಟ ನಡೆಸಿದ್ದರು. ಗ್ರಾಮಸ್ಥರೆಲ್ಲಾ ಊರಿನ ಮೂಲೆ ಮೂಲೆಯಲ್ಲೂ ಬಾಲಕಿಗಾಗಿ ಹುಡುಕಾಟ ನಡೆಸಿದ್ದರು. ಆಕೆಯ ಸುಳಿವೇ ಸಿಗದಾಗ ಸೋಶಿಯಲ್ ಮೀಡಿಯಾ ಮೂಲಕವೂ ಸಂದೇಶ ರವಾನೆಯಾಗಿತ್ತು. ಆದರೀಗ ಈ ಎಲ್ಲಾ ಪ್ರಯತ್ನಗಳು ವ್ಯರ್ಥವಾಗಿವೆ. ನಾಪತ್ತೆಯಾದ ಒಂದು ದಿನದ ಬಳಿಕ ಮನೆ ಬಳಿಯ ಇತ್ತಿಕಾರಾ ಕೆರೆಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ.

ಸಿಬ್ಬಂದಿ ಬೇಜವಾಬ್ದಾರಿ, ವಿದೇಶಕ್ಕೆ ಹಾರೋ ಕನಸಲ್ಲಿದ್ದ ಯುವಕರು ಕಂಗಾಲು

ಇನ್ನು ಗುರುವಾರ ಬೆಳಗ್ಗೆ ಬಾಲಕಿ ನಾಪತ್ತೆಯಾದ ಬೆನ್ನಲ್ಲೇ ಮನೆ ಬಳಿಯ ಕೆರೆಯಲ್ಲಿ ಮುಳುಗು ತಂಡ ಬಾಲಕಿಗಾಗಿ ತೀವ್ರ ಶೋಧ ನಡೆಸಿತ್ತು. ಹೀಗಿದ್ದರೂ ಆಕೆ ಪತ್ತೆಯಾಗಿರಲಿಲ್ಲ. ಆದರೆ ಶುಕ್ರವಾರ ಬೆಳಗ್ಗೆ ಇಲ್ಲಿನ ಸ್ಥಳೀಯರು ಕೆರೆಯಲ್ಲಿ ದೇಹವೊಂದು ತೇಲುತ್ತಿರುವುದನ್ನು ಗಮನಿಸಿದ್ದು, ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಪರಿಶೀಲನೆ ಬಳಿಕ ಈ ಮೃತದೇಹ ನಾಪತ್ತೆಯಾದ ಬಾಲಕಿ ದೇವಾನಂದಳದ್ದೇ ಎಂಬುವುದನ್ನು ಸರ್ಕಲ್ ಇನ್ಸ್ಪೆಕ್ಟರ್ ವಿಪಿನ್ ಕುಮಾರ್ ಖಚಿತಪಡಿಸಿದ್ದಾರೆ. ದೇವಾನಂದ ಮೇತದೇಹ ಆಕೆಯ ಮನೆಯಿಂದ ಸುಮಾರು 600 ರಿಂದ 700 ಮೀಟರ್ ದೂರದಲ್ಲಿ ಪತ್ತೆಯಾಗಿದೆ

ಇನ್ನು ಬಾಲಕಿ ಕೆಸರಿನಲ್ಲಿ ಸಿಲುಕಿಕೊಂಡಿರುವ ಸಾಧ್ಯತೆ ಇತ್ತು. ಹೀಗಾಗಿ ಹುಡುಕಾಟ ನಡೆಸಿದಾಗ ಪತ್ತೆಯಾಗದಿರಬಹುದು ಎಂದು ಸ್ಥಳಿಯರೊಬ್ಬರು ತಿಳಿಸಿದ್ದಾರೆ. ಮೃತದೇಹ ಊದಿಕೊಂಡಿದ್ದು, ಬಾಲಕಿಯ ಕೂದಲು ಕೆರೆಯಲ್ಲಿದ್ದ ಗಿಡದ ರೆಂಬೆಗೆ ಸಿಲುಕಿಕೊಂಡಿತ್ತು. ಸದ್ಯ ಮೃತದೇಹವನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದ್ದು, ಇದು ಆಕಸ್ಮಿಕ ಸಾವೋ? ಅಥವಾ ಬೇರೇನಾದರೂ ಕಾರಣವಿದೆಯೋ? ಎಂಬುವುದು ತಿಳಿದು ಬರಬೇಕಷ್ಟೇ. ಲ್ಲದೇ ಬಾಲಕಿ ಮೃತದೇಹದ ಬಳಿ ಕಂದು ಬಣ್ಣದ ಶಾಲು ಕೂಡಾ ಪತ್ತೆಯಾಗಿದ್ದು, ಇದು ಬಾಲಕಿ ಧರಿಸಿದ್ದೆಳೋ ಎಂಬುವುದನ್ನು ಆಕೆಯ ಹೆತ್ತವರು ಖಚಿತಪಡಿಸಬೇಕಷ್ಟೇ.

ನಾಪತ್ತೆಗೂ ಮುನ್ನ ನಡೆದಿದ್ದೇನು?

6 ವರ್ಷದ ದೇವಾನಂದ ಪ್ರದೀಪ್ ಕುಮಾರ್ ಹಾಗೂ ಧಾನ್ಯ ದಂಪತಿ ಮಗಳು. ಮಗಳ ನಾಪತ್ತೆ ಕುರಿತು ಪ್ರತಿಕ್ರಿಯಿಸಿರುವ ಧಾನ್, ಗುರುವಾರ ಬೆಳಗ್ಗೆ ಸುಮಾರು 10.15ಕ್ಕೆ ತಾನು ಮನೆ ಬಳಿ ಬಟ್ಟೆ ತೊಳೆಯಲು ತೆರಳಿದ್ದೆ. ಈ ವೇಳೆ ದೇವಾನಂದ ಕೂಡಾ ಹಿಂಬಾಲಿಸಿದ್ದಳು. ಈ ವೇಳೆ ದೇವಾನಂದಗೆ ಮನೆಯಲ್ಲಿರುವಂತೆ ಸೂಚಿಸಿದ್ದೆ. ಆದರೆ ಕೆಲಸ ಮುಗಿಸಿ ಮನೆಗೆ ಬಂದಾಗ ದೇವಾನಂದ ಮನೆಯಲ್ಲಿರಲಿಲ್ಲ ಎಂದಿದ್ದಾರೆ. 

ಫೆಬ್ರವರಿ 28ರ ಟಾಪ್ 10 ಸುದ್ದಿಗಾಗಿ  ಇಲ್ಲಿ ಕ್ಲಿಕ್ ಮಾಡಿ: 

click me!