ಮಹದಾಯಿ: ಕರ್ನಾಟಕಕ್ಕೆ ಜಯ, ಗೋವಾದ ತಕರಾರಿಗೆ ಮಣೆ ಹಾಕದ ಕೇಂದ್ರ!

By Kannadaprabha NewsFirst Published Feb 28, 2020, 8:36 AM IST
Highlights

ಮಹದಾಯಿ ಅಧಿಸೂಚನೆ ಪ್ರ ಕಟಿಸಿದ ಕೇಂದ್ರ| 13.42 ಟಿಎಂಸಿ ನೀರಿನ ಮೇಲೆ ಹಕ್ಕು ಪಡೆದ ಕರ್ನಾಟಕ | ಸುಪ್ರೀಂ ಆದೇಶ ಕೊಟ್ಟ ವಾರದೊಳಗೆ ಅಧಿಸೂಚನೆ ಪ್ರಕಟ ಕಳಸಾ-ಬಂಡೂರಿ ನಾಲಾ ಯೋಜನೆ ಕಾಮಗಾರಿಗಿದ್ದ ಅಡ್ಡಿ ನಿವಾರಣೆ | ಗೋವಾದ ತಕರಾರಿಗೆ ಮಣೆ ಹಾಕದ ಕೇಂದ್ರ

ನವದೆಹಲಿ[ಫೆ.28]: ಮಹದಾಯಿ ವಿವಾದಕ್ಕೆ ಸಂಬಂಧಿಸಿ ಕರ್ನಾಟಕಕ್ಕೆ ಮತ್ತೊಂದು ಖುಷಿಯ ಸುದ್ದಿ ಸಿಕ್ಕಿದೆ. ಮಹದಾಯಿ ನದಿ ನೀರು ಹಂಚಿಕೆ ಮಾಡಿ ನ್ಯಾಯಾಧಿಕರಣ ನೀಡಿದ್ದ ಐತೀರ್ಪಿನ ಅಧಿಸೂಚನೆಯನ್ನು ಕೇಂದ್ರ ಜಲಶಕ್ತಿ ಸಚಿವಾಲಯ ಗುರುವಾರ ಪ್ರಕಟಿಸಿದೆ. ಈ ಮೂಲಕ ಮಹದಾಯಿ ನ್ಯಾಯಾಧಿಕರಣದ ಆದೇಶ ಕಾರ್ಯರೂಪಕ್ಕೆ ಬಂದಂತಾಗಿದ್ದು, ರಾಜ್ಯದ ಬಹು ನಿರೀಕ್ಷೆಯ ಕಳಸಾ ಮತ್ತು ಬಂಡೂರಿ ನಾಲಾ ಯೋಜನೆ ಜಾರಿಗೆ ಗ್ರೀನ್ ಸಿಗ್ನಲ್ ಸಿಕ್ಕಂತಾಗಿದೆ.

"

2018ರ ಆಗಸ್ಟ್ 14 ರಂದು ಮಹದಾಯಿ ನ್ಯಾಯಾ ಧಿಕರಣವು ಮಹದಾಯಿಯಿಂದ ಕರ್ನಾಟಕಕ್ಕೆ ಒಟ್ಟು 13.42 (ಕುಡಿವ ನೀರಿನ ಬಳಕೆಯ 5.4 ಟಿಎಂಸಿ ಸೇರಿ) ಟಿಎಂಸಿ ನೀರನ್ನು ಬಳಕೆಗೆ ನಿಗದಿ ಮಾಡಿತ್ತು. ಆದರೆ, ನ್ಯಾಯಾಧಿಕರಣದ ಆದೇಶದ ಅಧಿಸೂಚನೆ ಪ್ರಕಟವಾ ಗಿರದ ಹಿನ್ನೆಲೆಯಲ್ಲಿ ಈ ನೀರಿನ ಬಳಕೆಯ ಯೋಜನೆ ಗಳನ್ನು ಕೈಗೆತ್ತಿಕೊಳ್ಳಲು ರಾಜ್ಯಕ್ಕೆ ಸಾಧ್ಯವಾಗಿರಲಿಲ್ಲ.

ತೀರ್ಪಿನ ಅಧಿಸೂಚನೆ ಹೊರಡಿಸಲು ಕಾನೂನಾತ್ಮಕ ವಾಗಿ ಯಾವುದೇ ಅಡ್ಡಿ ಇರದಿದ್ದರೂ ಕೇಂದ್ರ ಸರ್ಕಾ ರವು ಈ ತೀರ್ಪನ್ನು ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿಯಿದೆ ಎಂಬ ನೆಪ ಹೇಳಿ ತ್ತು. ಆದರೆ ಇದೇ ಫೆ.20ರಂದು ಸುಪ್ರೀಂ ಕೋರ್ಟ್ ನ್ಯಾಯಾಧಿಕರಣದ ಐತೀರ್ಪಿನ ಅಧಿಸೂಚನೆ ಹೊರಡಿ ಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಇದಾದ ವಾರದೊಳಗೆ ಈಗ ಅಧಿಸೂಚನೆ ಹೊರಬಿದ್ದಿದೆ.

ಸುಪ್ರೀಂ ಸೂಚನೆ: ದಯಾಮರಣ ಅರ್ಜಿ ವಾಪಸ್‌ಗೆ ಮಹದಾಯಿ ಹೋರಾಟಗಾರರ ನಿರ್ಧಾರ

ಈ ಅಧಿಸೂಚನೆಯೊಂದಿಗೆ ಕಳಸಾ-ಬಂಡೂರಿ ಯೋಜನೆಯನ್ನು ತ್ವರಿತಗತಿಯಲ್ಲಿ ಮುಗಿಸಲು ರಾಜ್ಯಕ್ಕೆ ಅವಕಾಶ ಸಿಕ್ಕಂತಾಗಿದೆ. ಕುಡಿಯುವ ನೀರಿನ ಈ ಯೋಜನೆಗೆ ಪರಿಸರ ಅನುಮತಿ ಅಗತ್ಯವಿಲ್ಲ ಎಂದು ಕೇಂದ್ರ ಪರಿಸರ ಸಚಿವಾಲಯ ಈಗಾಗಲೇ ಹೇಳಿರುವುದು ಈ ಯೋಜನೆಗಿದ್ದ ದೊಡ್ಡ ಅಡ್ಡಿ ನಿವಾರಿಸಿದೆ. ಆದರೆ ವನ್ಯಜೀವಿ ಇಲಾಖೆಯ ಅನುಮತಿ ಪಡೆಯುವುದು ಇನ್ನೂ ಬಾಕಿ ಇದೆ

ಮಹದಾಯಿಯ ನೀರಿನಲ್ಲಿ ಒಟ್ಟು 36.55 ಟಿಎಂಸಿ ನೀರಿನ ಪಾಲು ಅಪೇಕ್ಷಿಸಿದ್ದ ರಾಜ್ಯಕ್ಕೆ ನ್ಯಾಯಾಧಿಕರಣ ನೀಡಿದ್ದು ಕೇವಲ 13.42 ಟಿಎಂಸಿ. ಇದರಲ್ಲಿ ವಿದ್ಯುತ್ ಗಾಗಿ ಸುಮಾರು 8 ಟಿಎಂಸಿ ನೀರು ನಿಗದಿ ಪಡಿಸಲಾ ಗಿದೆ. ಇನ್ನೂ ಹೆಚ್ಚಿನ ಪಾಲಿಗಾಗಿ ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳ ಕಾನೂನು ಹೋರಾಟ ಸುಪ್ರೀಂ ಕೋರ್ಟ್‌ನಲ್ಲಿ ಮುಂದುವರಿದಿದ್ದು, ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟೇ ಈ ಅಧಿಸೂಚನೆ ಪ್ರಕಟಿಸಲಾಗಿದೆ.

ಈ ಅಧಿಸೂಚನೆಯಂತೆ ಮಹದಾಯಿ ನದಿ ಜಲ ಪ್ರಾಧಿಕಾರ ರಚನೆಯೂ ಆಗಲಿದ್ದು, ಮಹದಾಯಿ ನದಿ ನೀರಿನ ಹಂಚಿಕೆ ಉಸ್ತುವಾರಿಯನ್ನು ಈ ಪ್ರಾಧಿ ಕಾರ್ಯ ನಿರ್ವಹಿಸಲಿದೆ. ಮಹದಾಯಿ ನ್ಯಾಯಾಧಿಕರಣದ ಅಧಿಸೂಚನೆಗೆ ಸಂಬಂಧಿಸಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಬುಧವಾರವಷ್ಟೇ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆದಷ್ಟು ಶೀಘ್ರ ಅಧಿಸೂಚನೆ ಹೊರಡಿಸುವಂತೆ ಮನವಿ ಮಾಡಿದ್ದರು

'ಕೊಟ್ಟ ಮಾತಿನಂತೆ ನಡೆದುಕೊಳ್ಳಿ ಮೋದಿ ಅವರೇ, ಮಹದಾಯಿ ವಿವಾದ ಬಗೆಹರಿಸಿ'

ಮಹದಾಯಿ ಯೋಜನೆಯಿಂದಾಗಿ ಕರ್ನಾಟಕದ ಬೆಳಗಾವಿ, ಗದಗ, ಧಾರವಾಡ ಹಾಗೂ ಬಾಗಲಕೋ ಟೆಯ ೧೧ಕ್ಕೂ ಹೆಚ್ಚು ತಾಲೂಕುಗಳ ಹತ್ತಾರು ಹಳ್ಳಿಗಳ ಕುಡಿಯುವ ಹಾಗೂ ಕೃಷಿ ಉದ್ದೇಶದ ನೀರಿನ ಸಮಸ್ಯೆ ನಿವಾರಣೆಯಾದಂತಾಗಲಿದೆ.

click me!