ಆನ್‌ಲೈನ್‌ ವಿಚಾರಣೆ: ಶೇವಿಂಗ್‌ ಮಾಡುತ್ತಾ ಕೇರಳ ಹೈಕೋರ್ಟ್‌ ವಿಚಾರಣೆ ಎದುರಿಸಿದ ವ್ಯಕ್ತಿ

Suvarna News   | Asianet News
Published : Jan 18, 2022, 09:55 PM ISTUpdated : Jan 18, 2022, 09:57 PM IST
ಆನ್‌ಲೈನ್‌ ವಿಚಾರಣೆ: ಶೇವಿಂಗ್‌ ಮಾಡುತ್ತಾ ಕೇರಳ ಹೈಕೋರ್ಟ್‌ ವಿಚಾರಣೆ ಎದುರಿಸಿದ ವ್ಯಕ್ತಿ

ಸಾರಾಂಶ

  ಆನ್‌ಲೈನ್‌ ವಿಚಾರಣೆ ವೇಳೆ ಅಸಭ್ಯ ವರ್ತನೆ ಹಲ್ಲುಜ್ಜುತ್ತಾ, ಶೇವ್‌ ಮಾಡುತ್ತಾ ವಿಚಾರಣೆಗೆ ಹಾಜರಾದ ವ್ಯಕ್ತಿ ಕೇರಳ ಹೈಕೋರ್ಟ್‌ ವಿಚಾರಣೆ ವೇಳೆ ಘಟನೆ

ತಿರುವನಂತಪುರ(ಜ.18): ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ನ್ಯಾಯಾಲಯಗಳು ಆನ್ಲೈನ್‌ ವಿಚಾರಣೆ ಪ್ರಾರಂಭಿಸಿದ್ದು, ವಿವಿಧ ವೀಡಿಯೊ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ  ವಕೀಲರು ಮತ್ತು ದಾವೆದಾರರು ಕಾಣಿಸಿಕೊಳ್ಳುತ್ತಿದ್ದಾರೆ.  ಆದರೆ ಹೀಗೆ ವಿಚಾರಣೆ ಆರಂಭಿಸಿದ ನ್ಯಾಯಾಲಯಕ್ಕೆ ಈ ಬಾರಿ ಶಾಕ್‌ ಆಗಿದೆ. ಇದಕ್ಕೆ ಕಾರಣವಾಗಿದ್ದು, ವ್ಯಕ್ತಿಯೊಬ್ಬ ಶೇವಿಂಗ್‌ ಮಾಡುವುದರ ಜೊತೆ ಕೈಯಲ್ಲಿ ಬ್ರಶ್‌ ಹಿಡಿದುಕೊಂಡು ವಿಚಾರಣೆಗೆ ಹಾಜರಾಗಿದ್ದು, ಕೇರಳದಲ್ಲಿ ಈ ಘಟನೆ ನಡೆದಿದೆ.

ಸೋಮವಾರದಂದು ಆರಂಭಿಸಿದ ಆನ್‌ಲೈನ್ ವಿಚಾರಣೆಯನ್ನು ಪೂರ್ಣಗೊಳಿಸಲು ಮುಂದಾದ ಕೇರಳ ಹೈಕೋರ್ಟ್ (Kerala High Court) ನ್ಯಾಯಮೂರ್ತಿ ವಿಜಿ ಅರುಣ್(VG Arun) ಅವರು ಇಂದು ವಿಚಾರಣೆ ಆರಂಭಿಸಿದಾಗ, ಅವರ ಮುಂದೆ ವಿಚಾರಣೆಗೆ ಬಂದ ವ್ಯಕ್ತಿ ಹಲ್ಲುಜ್ಜುವುದರ ಜೊತೆಗೆ ಕ್ಷೌರ ಮಾಡಿಕೊಳ್ಳುತ್ತಾ, ಆಗಾಗ್ಗ ಕ್ಯಾಮೆರಾ ಎದುರಿಸುತ್ತಿರುವುದು ಕಂಡು ಬಂದಿದೆ. 

Courts Switching To Virtual Mode : ಹೈಕೋರ್ಟ್‌ನಲ್ಲಿ ವರ್ಚುವಲ್ ವಿಚಾರಣೆ, ಇವೆರಡು ಪೀಠಕ್ಕೆ ವಿನಾಯಿತಿ!

ಈ ವಿಡಿಯೋದಲ್ಲಿ ಕಾಣುವಂತೆ ವ್ಯಕ್ತಿ ಆಗ ತಾನೆ ಎದ್ದಂತೆ ಕಾಣುತ್ತಿದ್ದು, ವಾಶ್-ಬೇಸಿನ್‌ನೊಂದಿಗೆ ವಾಶ್‌ರೂಮ್‌ನಂತೆ ತೋರುವ ಸ್ಥಳದಲ್ಲಿ ಹಿಂದಕ್ಕೆ ಮತ್ತು ಮುಂದಕ್ಕೆ ನಡೆದುಕೊಂಡು ಹೋಗುತ್ತಿರುವುದು ಕಾಣುತ್ತಿದೆ. ಜೊತೆಗೆ ಅವನ ಮುಖವನ್ನು  ಶೇವ್ ಮಾಡುವುದು ಹಾಗೂ ಹಲ್ಲುಜ್ಜುವುದನ್ನು ವೀಡಿಯೊ ತೋರಿಸುತ್ತಿದೆ. ಆದರೆ ನ್ಯಾಯಮೂರ್ತಿ ಅರುಣ್ ಅವರು ಈ ಘಟನೆಯನ್ನು ಗಮನಿಸಿಲ್ಲ ಎಂದು ತೋರುತ್ತಿದೆ ಆದರೆ ಅದೇ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್‌ ಆಗಿದೆ. 

ಯಾವುದೇ ವಿಡಿಯೋ ಕರೆಯಲ್ಲಿ ತಿಳಿಯದೆಯೂ ಇಂತಹ ಚಟುವಟಿಕೆಗಳಲ್ಲಿ ತೊಡಗುವುದು ಅನುಚಿತ ವರ್ತನೆ ಎಂದು ಪರಿಗಣಿಸಲ್ಪಡುತ್ತದೆ. ಈ ಹಿಂದೆಯೂ ಆನ್‌ಲೈನ್‌ನಲ್ಲಿ ನಡೆದ ಕೋರ್ಟ್ ವಿಚಾರಣೆ ವೇಳೆ ಇದೇ ರೀತಿಯ ಹಲವಾರು ವಿಲಕ್ಷಣ ಘಟನೆಗಳು ಕ್ಯಾಮರಾದಲ್ಲಿ ಸೆರೆಯಾಗಿವೆ . 

ಈ ಹಿಂದೆ ಕಳೆದ ವರ್ಷ ಡಿಸೆಂಬರ್ 21ರಂದು ಮದ್ರಾಸ್ ಹೈಕೋರ್ಟ್‌ ನಡೆಸಿದ ವೀಡಿಯೊ ಕಾನ್ಫರೆನ್ಸ್ ವಿಚಾರಣೆಯ ಸಮಯದಲ್ಲಿ ಮಹಿಳೆಯೊಂದಿಗೆ ಸರಸದಲ್ಲಿ ತೊಡಗಿದ್ದ ವಕೀಲ ಆರ್‌.ಡಿ. ಸಂತಾನ ಕೃಷ್ಣನ್ (RD Santhana Krishnan) ವಿರುದ್ಧ ಮದ್ರಾಸ್ ಹೈಕೋರ್ಟ್ (Madras High Court) ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿತ್ತು.

Madras High Court: ವರ್ಚುವಲ್ ವಿಚಾರಣೆ ವೇಳೆ ಮಹಿಳೆ ಜೊತೆ ಅಶ್ಲೀಲ ಭಂಗಿ, ವಕೀಲ ಸಸ್ಪೆಂಡ್‌!

ಇದಕ್ಕೂ ಒಂದು ತಿಂಗಳ ಮೊದಲು, ಹಿರಿಯ ವಕೀಲೆ ಇಂದಿರಾ ಜೈಸಿಂಗ್(Indira Jaising) ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಆನ್‌ಲೈನ್‌ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಅರೆಬೆತ್ತಲೆಯಾಗಿ ಕಾಣಿಸಿಕೊಂಡ ವ್ಯಕ್ತಿಯ ವಿರುದ್ಧ ನ್ಯಾಯಾಲಯ ನಿಂದನೆ ಪ್ರಕರಣ ಮತ್ತು ಲೈಂಗಿಕ ಕಿರುಕುಳದ ದೂರು ದಾಖಲಿಸುವುದಾಗಿ ಟ್ವಿಟರ್ ಮೂಲಕ ಘೋಷಿಸಿದ್ದರು.

ಆನ್‌ಲೈನ್‌ ವಿಚಾರಣೆಯೇ ಆಗಿರಲಿ ಅಥವಾ ನ್ಯಾಯಾಲಯಕ್ಕೆ ಭೇಟಿ ನೀಡಿ ವಿಚಾರಣೆ ಎದುರಿಸುವುದೇ ಆಗಿರಲಿ ವಕೀಲರು ಮತ್ತು ಕಕ್ಷಿದಾರರು ಸೂಕ್ತವಲ್ಲದ ವೇಷಭೂಷಣಗಳಲ್ಲಿ ಕಾಣಿಸಿಕೊಳ್ಳುವುದು ನ್ಯಾಯಾಲಯದ  ವಸ್ತ್ರ ಸಂಹಿತೆಯ ಉಲ್ಲಂಘನೆಯಾಗುತ್ತದೆ. 

ಏಪ್ರಿಲ್ 2020 ರಲ್ಲಿ, ವಕೀಲರೊಬ್ಬರು ಆನ್‌ಲೈನ್‌ನಲ್ಲಿ ವಾದಿಸಲು ರಾಜಸ್ಥಾನ ಹೈಕೋರ್ಟ್‌ಗೆ ಕೇವಲ ಬನಿಯನ್‌ ಧರಿಸಿ ಹಾಜರಾಗಿದ್ದರು. ಇದಕ್ಕೂ ಮೊದಲು  ದೆಹಲಿ ಹೈಕೋರ್ಟ್ ತನ್ನ ಆನ್‌ಲೈನ್‌ ವಿಚಾರಣೆಗೆ ಬನಿಯನ್‌ನಲ್ಲಿ ಹಾಜರಾದ ವ್ಯಕ್ತಿಗೆ 10,000 ದಂಡವನ್ನು ವಿಧಿಸಿತು. ಇನ್ನು ಜೂನ್ 2020 ರಲ್ಲಿ, ವಕೀಲರೊಬ್ಬರು ಟಿ-ಶರ್ಟ್ ಧರಿಸಿ ಹಾಸಿಗೆಯ ಮೇಲೆ ಮಲಗಿಕೊಂಡೆ ಸುಪ್ರೀಂಕೋರ್ಟ್‌ ವಿಚಾರಣೆಗೆ ಹಾಜರಾದ ಘಟನೆ ನಡೆದಿತ್ತು.

2020ರ  ಸೆಪ್ಟೆಂಬರ್‌ನಲ್ಲಿ ವರ್ಚುವಲ್ ವಿಚಾರಣೆಯ ಸಮಯದಲ್ಲಿ ಕ್ಯಾಮರಾದಲ್ಲಿ ಉಗುಳುವುದು ಕಂಡುಬಂದ ಕಾರಣ ಆರೋಪಿಗೆ ಗುಜರಾತ್ ಹೈಕೋರ್ಟ್ ದಂಡ ವಿಧಿಸಿತು.

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಸಗುಲ್ಲಾ ಖಾಲಿ ಆಯ್ತು ಎಂದು ಮುರಿದು ಬಿತ್ತು ಮದ್ವೆ: ಮದುವೆ ಮನೆಯಾಯ್ತು ರಣಾಂಗಣ
ಮೋದಿ-ಪುಟಿನ್ ಆರ್ಮರ್ಡ್ ಬದಲು ಸಾಮಾನ್ಯ ಟೊಯೋಟಾ ಫಾರ್ಚೂನ್ ಕಾರಿನಲ್ಲಿ ಪ್ರಯಾಣಿಸಿದ್ದೇಕೆ?