
ನವದೆಹಲಿ(ಸೆ.28): ರಾಜ್ಯದಲ್ಲಿ ಆನ್‌ಲೈನ್ ಜೂಜು(Online Gambling) ನಿಷೇಧಿಸಿ ಕೇರಳ ಸರ್ಕಾರ(Kerala Govt) ಹೊರಡಿಸಿದ್ದ ಅಧಿಸೂಚನೆಯನ್ನು ಕೇರಳ ಹೈಕೋರ್ಟ್(Kerala HighCourt) ಸೋಮವಾರ ವಜಾ ಮಾಡಿದೆ.
ಕರ್ನಾಟಕ ಸರ್ಕಾರ(karnataka Govt) ಕೂಡಾ ಆನ್‌ಲೈನ್ ಜೂಜು(Online Gambling) ಸೇರಿದಂತೆ ಎಲ್ಲಾ ರೀತಿಯ ಆನ್‌ಲೈನ್ ಜೂಜು ನಿಷೇಧಿಸುವ ವಿಧೇಯಕವನ್ನು ಇತ್ತೀಚೆಗೆ ಕರ್ನಾಟಕದ ವಿಧಾನ ಮಂಡಲ ಅಂಗೀಕರಿಸಿದ ಬೆನ್ನಲ್ಲೇ, ನೆರೆಯ ಕೇರಳದಲ್ಲಿ ಹೈಕೋರ್ಟ್‌ನಿಂದ ಇಂಥ ಆದೇಶ ಹೊರಬಿದ್ದಿದೆ.
ಕಳೆದ ಫೆಬ್ರುವರಿ ತಿಂಗಳಲ್ಲಿ ಎಲ್ಲಾ ಆನ್‌ಲೈನ್ ಜೂಜು ನಿಷೇಧಿಸುವ ಸಂಬಂಧ ಕೇರಳ ಸರ್ಕಾರ, ‘1960ರ ಗೇಮಿಂಗ್ ಕಾಯ್ದೆಗೆ ತಿದ್ದುಪಡಿ ತಂದು ಅಧಿಸೂಚನೆ ಹೊರಡಿಸಿತ್ತು. ಆನ್‌ಲೈನ್ ಜೂಜು ಹಣಕಾಸಿನ ಸಮಸ್ಯೆ ಹಾಗೂ ಆತ್ಮಹತ್ಯೆಗೆ ಕಾರಣವಾಗುತ್ತದೆ ಎಂದು ಸರ್ಕಾರ ಕಾರಣ ನೀಡಿತ್ತು.
ಆದರೆ ಇದನ್ನು ಪ್ರಶ್ನಿಸಿ 4 ಗೇಮಿಂಗ್ ಕಂಪೆನಿಗಳು ಹೈಕೋರ್ಟ್ ಮೊರೆ ಹೋಗಿತ್ತು. ‘ಸುಪ್ರೀಂಕೋರ್ಟ್ ಸೇರಿದಂತೆ ಹಲವು ಹೈಕೋರ್ಟ್‌ಗಳು ಇದು ಕೌಶಲ್ಯಕ್ಕೆ ಸಂಬಂಧಿಸಿದ ಗೇಮ್ ಎಂದು ಹೇಳಿದೆ. ಯಶಸ್ಸು ಹೆಚ್ಚಿನ ಪ್ರಮಾಣದಲ್ಲಿ ಕೌಶಲ್ಯವನ್ನು ಅಲವಂಬಿಸಿರುವ ಸ್ಪರ್ಧೆಗಳು ಜೂಜು ಎಂದು ಪರಿಗಣಿತವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಕೂಡಾ ಹೇಳಿದೆ.
ಹೀಗಾಗಿ ಆನ್‌ಲೈನ್ ಜೂಜು ನಿಷೇಧಿಸಬಾರದು’ ಎಂದು ವಾದಿಸಿತ್ತು. ಈ ವಾದ ಆಲಿಸಿದ ಕೇರಳ ಹೈಕೋರ್ಟ್, ಆನ್‌ಲೈನ್ ಜೂಜು ನಿಷೇಧಿಸುವ ಕೇರಳ ಸರ್ಕಾರದ ಆದೇಶ ಏಕಪಕ್ಷೀಯ ಮತ್ತು ಅಸಾಂವಿಧಾನಿಕ ಎಂದು ಹೇಳಿ ಅಧಿಸೂಚನೆ ವಜಾಗೊಳಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ