PM Modi Pic on Vax Certificate: ಮೋದಿ ಅಮೆರಿಕ ಪ್ರಧಾನಿ ಅಲ್ಲ, ಪ್ರಮಾಣಪತ್ರದಲ್ಲಿ ಫೋಟೋ ಇದ್ರೆ ತಪ್ಪೇನು?

Suvarna News   | Asianet News
Published : Dec 14, 2021, 04:08 PM ISTUpdated : Dec 21, 2021, 11:31 AM IST
PM Modi Pic on Vax Certificate: ಮೋದಿ ಅಮೆರಿಕ ಪ್ರಧಾನಿ ಅಲ್ಲ, ಪ್ರಮಾಣಪತ್ರದಲ್ಲಿ  ಫೋಟೋ ಇದ್ರೆ ತಪ್ಪೇನು?

ಸಾರಾಂಶ

ಕೋವಿಡ್‌ ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ಫೋಟೋ ಇದ್ದರೆ ತಪ್ಪೇನು? 150 ಕೋಟಿ ಜನರಿಗೆ ಇಲ್ಲದ ಅನುಮಾನ ನಿಮಗೆ ಏಕೆ  ಅರ್ಜಿದಾರರಿಗೆ ಕೇರಳ ಹೈಕೋರ್ಟ್‌ ಪ್ರಶ್ನೆ

ಕೊಚ್ಚಿ: ಕೋವಿಡ್‌ ಲಸಿಕೆ ಪ್ರಮಾಣಪತ್ರದ ಮೇಲೆ ಪ್ರಧಾನಿ ನರೇಂದ್ರ ಮೋದಿ ಚಿತ್ರವಿದ್ದರೆ ತಪ್ಪೇನು? ಎಂದು ಕೇರಳ ಹೈಕೋರ್ಟ್‌ ಸೋಮವಾರ ಪ್ರಶ್ನಿಸಿದೆ. ಕೊಟ್ಟಾಯಂನ ಮಾಯಲಿ ಪರಂಬಿಲ್‌(Mayali Parambil), ಸರ್ಕಾರಿ ನಿಧಿಯಿಂದ ನಡೆಸಿದ ಲಸಿಕೆ ಅಭಿಯಾನದಲ್ಲಿ ಮೋದಿ ಚಿತ್ರ ಬಳಸುವುದರಿಂದ ಪಕ್ಷದ ಕುರಿತು ಪ್ರಚಾರ ಮಾಡಿದಂತಾಗುತ್ತದೆ. ಇದು ಚುನಾವಣೆ ವೇಳೆ ಮತದಾರನ ಆಯ್ಕೆಯ ಮೇಲೆ ಪರಿಣಾಮ ಬೀರುವುದರಿಂದ ಮೂಲಭೂತ ಹಕ್ಕಿಗೆ ಧಕ್ಕೆಯುಂಟುಮಾಡುತ್ತದೆ ಎಂದು ಆಕ್ಷೇಪಿಸಿದ್ದರು. ಬೇರೆ ದೇಶಗಳ ಪ್ರಮಾಣ ಪತ್ರದಲ್ಲಿ ಅಲ್ಲಿಯ ರಾಜಕೀಯ ನಾಯಕರ ಚಿತ್ರ ಇಲ್ಲ ಎಂದು ವಾದಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನ್ಯಾಯಾಲಯ, ನೀವು ಕೂಡಾ ಮಾಜಿ ಪ್ರಧಾನಿ ನೆಹರೂ ಹೆಸರಿರುವ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೀರಿ. ಅಲ್ಲಿ ನೆಹರು ಹೆಸರು ತೆಗೆಯುವಂತೆ ಯಾಕೆ ಕೇಳಿಲ್ಲ. ನಿಮಗೆ ರಾಜಕೀಯ ಭಿನ್ನಾಭಿಪ್ರಾಯ ಇರಬಹುದು. ಆದರೆ ಮೋದಿ ನಮ್ಮ ಪ್ರಧಾನಿ. 150 ಕೋಟಿ ಜನರಿಗೆ ಇಲ್ಲದ ಅನುಮಾನ ನಿಮಗೆ ಏಕೆ ಎಂದು ಅರ್ಜಿದಾರರನ್ನು ಪ್ರಶ್ನಿಸಿತು.

ದೇಶದ ಜನರಿಂದ ಅಧಿಕಾರಕ್ಕೆ ಆಯ್ಕೆಯಾದ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಹೊಂದಿರುವ COVID-19 ಲಸಿಕೆ ಪ್ರಮಾಣಪತ್ರದಲ್ಲಿ ಏನು ತಪ್ಪಾಗಿದೆ ಎಂದು ಕೇರಳ ಹೈಕೋರ್ಟ್ ಸೋಮವಾರ ಆಶ್ಚರ್ಯ ವ್ಯಕ್ತಪಡಿಸಿದೆ. ಪ್ರಮಾಣಪತ್ರದಿಂದ ಪ್ರಧಾನಿಯವರ ಚಿತ್ರವನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಲಾದ ಮನವಿಯnfnu ಪರಿಶೀಲಿಸಿದ ನ್ಯಾಯಮೂರ್ತಿ ಪಿ.ವಿ. ಕುನಿ ಕೃಷ್ಣನ್(P.V. Kunnikrishnan) ಅವರು ಪ್ರಧಾನಿ ಬಗ್ಗೆ ನಾಚಿಕೆಪಡುತ್ತೀರಾ ಎಂದು ಅರ್ಜಿದಾರರನ್ನು ಕೇಳಿದರು. ಪ್ರಧಾನಿಯವರು ದೇಶದ ಜನರಿಂದ ಚುನಾಯಿತರಾಗಿದ್ದಾರೆ ಮತ್ತು ಪ್ರಮಾಣಪತ್ರದಲ್ಲಿ ಅವರ ಭಾವಚಿತ್ರ ಇರುವುದರಲ್ಲಿ ತಪ್ಪೇನು ಎಂದು ನ್ಯಾಯಾಧೀಶರು ಹೇಳಿದರು.

ಚು.ರಾಜ್ಯಗಳಲ್ಲಿ ಮಹತ್ವದ ನಿರ್ಧಾರ : ಪ್ರಮಾಣ ಪತ್ರದಿಂದ ಮೋದಿ ಔಟ್‌

ಇತರ ದೇಶಗಳಲ್ಲಿ ಇಂತಹ ಪದ್ಧತಿ ಇಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದಾಗ, ನ್ಯಾಯಾಧೀಶರು,  ಅವರು ತಮ್ಮ ಪ್ರಧಾನ ಮಂತ್ರಿಗಳ ಬಗ್ಗೆ ಹೆಮ್ಮೆಪಡದಿರಬಹುದು, ನಾವು ನಮ್ಮ ಪ್ರಧಾನಿಯ ಬಗ್ಗೆ ಹೆಮ್ಮೆಪಡುತ್ತೇವೆ. ನೀವು (ಅರ್ಜಿದಾರರು) ಪ್ರಧಾನ ಮಂತ್ರಿಯ ಬಗ್ಗೆ ಏಕೆ ನಾಚಿಕೆಪಡುತ್ತೀರಿ? ಅವರು ಜನ ಆದೇಶದ ಮೂಲಕ ಅಧಿಕಾರಕ್ಕೆ ಬಂದವರು. ನಮಗೆ ವಿಭಿನ್ನ ರಾಜಕೀಯ ದೃಷ್ಟಿಕೋನಗಳು ಇರಬಹುದು. ಆದರೆ ಅವರು ಇನ್ನೂ ನಮ್ಮ ಪ್ರಧಾನ ಮಂತ್ರಿಯಾಗಿರುತ್ತಾರೆ ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರ ಪರ ವಕೀಲ ಪೀಟರ್ ಮೈಲಿಪರಂಪಿಲ್(Peter Myaliparampil)ಪ್ರಮಾಣಪತ್ರವು ವೈಯಕ್ತಿಕ ವಿವರಗಳೊಂದಿಗೆ ಖಾಸಗಿಯಾಗಿದೆ ಮತ್ತು ಪ್ರಮಾಣ ಪತ್ರಕ್ಕೆ ಪ್ರಧಾನಿಯವರ ಫೋಟೋ ಸೇರಿಸಿರುವುದರಿಂದ ವ್ಯಕ್ತಿಯ ಖಾಸಗಿತನಕ್ಕೆ ಇದನ್ನು ಹೇರಿದಂತಾಗಿದೆ ಇದು ಸೂಕ್ತವಲ್ಲ ಎಂದು ಹೇಳಿದರು. ಇದಕ್ಕೆ, ದೇಶದ 100 ಕೋಟಿಗೂ ಹೆಚ್ಚು ಜನರಿಗೆ ಪ್ರಮಾಣಪತ್ರದಲ್ಲಿ ಪ್ರಧಾನಿಯವರ ಫೋಟೋ ಇರುವುದಕ್ಕೆ ಸಮಸ್ಯೆಯಾಗಿಲ್ಲ ನಿಮಗೇಕೆ ಈ ಸಮಸ್ಯೆ ಎಂದು ನ್ಯಾಯಾಲಯ ಅರ್ಜಿದಾರರನ್ನು ಪ್ರಶ್ನಿಸಿತು. 

ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಬದಲು ಸಿಎಂ ಫೋಟೋ: ಭುಗಿಲೆದ್ದ ವಿವಾದ!

ಈ ಅರ್ಜಿಗೆ ಯಾವುದೇ ಅರ್ಹತೆ ಇದೆಯೇ ಎಂಬುದನ್ನು ಪರಿಶೀಲಿಸುವುದಾಗಿ ಮತ್ತು ಇಲ್ಲದಿದ್ದರೆ, ಅರ್ಜಿಯನ್ನು ವಿಲೇವಾರಿ ಮಾಡುವುದಾಗಿ ನ್ಯಾಯಾಲಯ ಹೇಳಿದೆ. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ವಿಚಾರಣೆಯಲ್ಲಿ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಅಜಿತ್ ಜಾಯ್(Ajit Joy) ಪ್ರಧಾನಿಯ ಬಗ್ಗೆ ಹೆಮ್ಮೆ ಪಡಬೇಕೋ ಬೇಡವೋ ಎಂಬುದು ವೈಯಕ್ತಿಕ ಆಯ್ಕೆಯಾಗಿದೆ. ಇದು ರಾಜಕೀಯ ಭಿನ್ನಾಭಿಪ್ರಾಯದ ವಿಷಯವಲ್ಲ. ಏಕೆಂದರೆ ಸಾರ್ವಜನಿಕ ಹಣವನ್ನು ಬಳಸಿಕೊಂಡು ಜಾಹೀರಾತುಗಳು ಮತ್ತು ಪ್ರಚಾರಗಳಿಗೆ ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನು ಹಾಕಿದೆ ಎಂದು ಅವರು ಹೇಳಿದರು.

ಪ್ರಮಾಣಪತ್ರದಲ್ಲಿ ಫೋಟೋ ಇದ್ದರೆ ಮತದಾರರ ಮನಸ್ಸಿನ ಮೇಲೂ ಪ್ರಭಾವ ಬೀರಲಿದ್ದು, ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಈ ವಿಚಾರ ಪ್ರಸ್ತಾಪವಾಗಿತ್ತು. ಕೇಂದ್ರ ಸರ್ಕಾರವು ಈ ಮನವಿಯೂ  ಪ್ರಚಾರಕ್ಕಾಗಿ ಮಾಡಿದ ಅರ್ಜಿ ಎಂದು ಹೇಳುವ ಮೂಲಕ ಇದನ್ನು ವಿರೋಧಿಸಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Viral Video: ದೇಶದ ಭಯಂಕರ ವಿಷಕಾರಿ ಹಾವಿನ ವಿಡಿಯೋ ಹಂಚಿಕೊಂಡ IFS ಅಧಿಕಾರಿ; ಇದು ಕಚ್ಚಿದ್ರೆ ಟಿಕೆಟ್ ಫಿಕ್ಸ್!
ಸೋಪಾದಿಂದ ಮೇಲೇಳುವಾಗ ಸೊಂಟದಲ್ಲಿದ್ದ ಗನ್ ಟ್ರಿಗರ್ ಆಗಿ ಪಂಜಾಬ್‌ನಲ್ಲಿ ಎನ್‌ಆರ್‌ಐ ಸಾವು