ಕೇರಳ ಸರ್ಕಾರದಿಂದ ಮತ್ತೊಂದು ಮಾದರಿ ಕಾರ್ಯ/ ಒಬ್ಬಳೆ ಒಬ್ಬಳು ಬಾಲಕಿಗಾಗಿ ಬೋಟ್ ಓಡಾಡ/ ಪರೀಕ್ಷೆ ಸಸೂತ್ರವಾಗಿ ಬರೆಯುವಂತೆ ಮಾಡಿದ ಸರ್ಕಾರ/ ಕೇರಳ ಜಲಸಾರಿಗೆಯ ಕೆಲಸಕ್ಕೆ ಅಭಿನಂದನೆ
ಕೊಟ್ಟಾಯಂ(ಜೂ. 01) ಕೇರಳ ರಾಜ್ಯ ಜಲಸಾರಿಗೆ ಸಂಸ್ಥೆ ಜನಮೆಚ್ಚುವ ಕೆಲಸ ಮಾಡಿದೆ. ಕೊರೋನಾ ಸಂದರ್ಭದಲ್ಲಿ ಕೇವಲ ಒಬ್ಬ ಹುಡುಗಿ ಪರೀಕ್ಷಾ ಹಾಲ್ ಗೆ ತೆರಳಲು ಬೋಟ್ ಒಂದನ್ನು ಬಿಟ್ಟಿದೆ. ಅಲ್ಲದೇ ಆಕೆಯನ್ನು ಸುರಕ್ಷಿತವಾಗಿ ವಾಪಾಸ್ ಕರೆದುಕೊಂಡು ಹೋಗಿ ಬಿಡಲಾಗಿದೆ.
ಐದು ಜನ ಸಿಬ್ಬಂದಿ ಒಳಗೊಂಡ ವಾಟರ್ ಬೋಟ್ ಎಂ ಎನ್ ಬ್ಲಾಕ್ ನಿಂದ ಹೊರಟಿದೆ. ನಡುಗಡ್ಡೆ ಕುಟ್ಟಾನಾಡ್ ನಿಂದ ಹೊರಟ ಬೋಟು ಶಾಲೆ ಇರುವ ಕೊಟ್ಟಾಯಂ ತಲುಪಿದೆ
ಸಮುದಾಯದಲ್ಲಿ ಕೊರೋನಾ; ಕೇರಳ ಸರ್ಕಾರದ ದಿಟ್ಟ ಕ್ರಮ
ಕೊಟ್ಟಾಯಂ ನ ಕಾಂಜಿರಂ ನಲ್ಲಿರುವ ಎಸ್ ಎನ್ ಡಿಪಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಬಾಲಕಿ ಸಾಂದ್ರಾ ಸಾಬು ಪ್ಲಸ್ 2( ದ್ವಿತೀಯ ಪಿಯುಸಿ) ಅಧ್ಯಯನ ಮಾಡುತ್ತಿದ್ದಾಳೆ. ಎಪ್ಪತ್ತು ಜನರನ್ನು ಹೊತ್ತೊಯ್ಯುವ ಸಾಮರ್ಥ್ಯುಳ್ಳ ಬೋಟ್ ಎರಡು ದಿನ ಅಂದರೆ ಮೇ 29 ಮತ್ತು 30ರಂದು ಈಕೆ ಒಬ್ಬಳಿಗಾಗಿ ಓಡಾಟ ಮಾಡಿದೆ.
ಕೊಟ್ಟಾಯಂನಿಂದ ಪ್ರಯಾಣ ಬೆಳೆಸಿದ ಬೋಟ್ ಎಂಎನ್ ಬ್ಲಾಕ್ ಮಾರ್ಗವಾಗಿ ಕಾಂಜಿರಂ ತಲುಪಿದೆ. ಬಾಲಕಿಯನ್ನು ಆಕೆಯ ಶಾಲೆಯ ಎದುರಿನಲ್ಲೇ ಡ್ರಾಪ್ ಮಾಡಲಾಗಿದೆ. ಅಲ್ಲದೇ ಆಕೆಯ ಪರೀಕ್ಷೆ ಮುಗಿಯುವವರೆಗೆ ಅಲ್ಲಿಯೇ ಕಾದು ನಂತರ ಮನೆಗೆ ಕಳುಹಿಸಿ ಬರಲಾಗಿದೆ ಎಂದು ಜಲಸಾರಿಗೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಲಸಾರಿಗೆಯ ಸಚಿವ ಶಾಜಿ ವಿ ನಾಯರ್ ನನ್ನ ಜೀವನದಲ್ಲಿ ಮರೆಯಲಾಗದ ಸಹಾಯ ಮಾಡಿದ್ದಾರೆ ಎಂದು ಬಾಲಕಿ ಸಾಂದ್ರಾ ತಿಳಿಸಿದ್ದಾರೆ. ನನ್ನ ಪಾಲಕರು ವಿಚಾರವನ್ನು ಗಮನಕ್ಕೆ ತಂದ ತಕ್ಷಣ ಸ್ಪಂದಿಸಿದ್ದಾರೆ ಎಂದು ಬಾಲಕಿ ಧನ್ಯವಾದ ಅರ್ಪಿಸಿದ್ದಾರೆ. ಇಡೀ ದಿನದ ಬೋಟ್ ಜರ್ನಿಗೆ ಬಾಲಕಿಯಿಂದ 18 ರೂ. ಶುಲ್ಕ ಪಡೆದುಕೊಳ್ಳಲಾಗಿದೆ.