Kerala Politics: ಕಾಲೇಜುಗಳಲ್ಲಿ ರಾಜಕೀಯ ಹಸ್ತಕ್ಷೇಪವನ್ನು ಸಹಿಸಲಾಗದು: ಕೇರಳ ರಾಜ್ಯಪಾಲ

By Suvarna News  |  First Published Dec 11, 2021, 9:06 PM IST
  • ಕೇರಳ ಸರ್ಕಾರದ ವಿರುದ್ಧ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ವಾಗ್ದಾಳಿ 
  • ವಿಶ್ವವಿದ್ಯಾನಿಲಯಗಳಲ್ಲಿ ರಾಜಕೀಯ ಹಸ್ತಕ್ಷೇಪಗಳನ್ನು ಸಹಿಸಲಾಗದು
  • ಡಿಸೆಂಬರ್ 8 ರಂದು ಸಿಎಂಗೆ ಪತ್ರ ಬರೆದಿದ್ದ ರಾಜ್ಯಪಾಲರು
     

ನವದೆಹಲಿ/ತಿರುವನಂತಪುರ: ಕೇರಳದಲ್ಲಿ ಅಧಿಕಾರದಲ್ಲಿರುವ ಪಿಣರಾಯಿ ವಿಜಯನ್‌(pinarayiVijayan) ನೇತೃತ್ವದ ಎಡರಂಗ ಸರ್ಕಾರದ ವಿರುದ್ಧ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌(Arif Mohammed Khan)ಮತ್ತೆ ವಾಗ್ದಾಳಿ ನಡೆಸಿದ್ದಾರೆ. ವಿಶ್ವವಿದ್ಯಾನಿಲಯಗಳಲ್ಲಿ ರಾಜಕೀಯ ಹಸ್ತಕ್ಷೇಪಗಳನ್ನು ಸಹಿಸಲಾಗದು. ವಿಶ್ವವಿದ್ಯಾನಿಲಯಗಳ ಕಾರ್ಯನಿರ್ವಹಣೆಯಲ್ಲಿ ನೀವು ಹಸ್ತಕ್ಷೇಪ ಮಾಡಬಾರದು ಎಂದು ಅವರಿಗೆ(ಪಿಣರಾಯಿ ವಿಜಯನ್‌) ಅರ್ಥಮಾಡಿಸಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದೆ. ಈ ರಾಜಕೀಯ ಹಸ್ತಕ್ಷೇಪವನ್ನು ನಾನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. 

ವಿಶ್ವವಿದ್ಯಾನಿಲಯಗಳಲ್ಲಿನ ರಾಜಕೀಯ ಹಸ್ತಕ್ಷೇಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್( Pinarayi Vijayan) ಅವರಿಗೆ ಪತ್ರ ಬರೆದ ಒಂದು ದಿನದ ನಂತರ ರಾಜ್ಯಪಾಲರು ನವದೆಹಲಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು. ರಾಜಕೀಯ ಹಸ್ತಕ್ಷೇಪಗಳು ದಕ್ಷಿಣ ರಾಜ್ಯದಲ್ಲಿ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿದೆ. ಮುಖ್ಯಮಂತ್ರಿಗೆ ವಿಶ್ವವಿದ್ಯಾನಿಲಯಗಳ ಕುಲಪತಿಯಾಗಲು ಅಧಿಕಾರ ನೀಡುವ ಕಾಯಿದೆಗಳಿಗೆ ತಿದ್ದುಪಡಿ ತರಲು ಸುಗ್ರೀವಾಜ್ಞೆ ತಂದರೆ ತಕ್ಷಣವೇ ಸಹಿ ಹಾಕಲು ತಾವು ಸಿದ್ಧ ಎಂದು ಮುಖ್ಯಮಂತ್ರಿ ವಿಜಯನ್ ಅವರಿಗೆ ರಾಜ್ಯಪಾಲರು ತಿಳಿಸಿದರು. ವಿಶ್ವ ವಿದ್ಯಾನಿಲಯಗಳ ಸ್ವಾಯತ್ತತೆಗೆ ಧಕ್ಕೆಯುಂಟು ಮಾಡುವಂತಹ, ಕಾರ್ಯವೈಖರಿಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು ಎಂದು ತಿಳಿಸಿದ ರಾಜ್ಯಪಾಲರು, ವಿಶ್ವವಿದ್ಯಾಲಯಗಳ ಕುಲಪತಿಯಾಗಿ ಉನ್ನತ ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆಯನ್ನು ಉಳಿಸಲು ತಾವು ಶಕ್ತಿಮೀರಿ ಪ್ರಯತ್ನಿಸಿದ್ದೇನೆ ಎಂದರು.

Tap to resize

Latest Videos

undefined

ಸಿಎಎ ವಿರುದ್ಧದ ಕೇರಳ ವಿಧಾನಸಭೆ ನಿರ್ಣಯ ಸಂವಿಧಾನ ಬಾಹಿರ ಎಂದ ರಾಜ್ಯಪಾಲ!

ವಿಶ್ವವಿದ್ಯಾನಿಲಯಗಳ ಕಾರ್ಯನಿರ್ವಹಣೆಯಲ್ಲಿ ನೀವು ಮಧ್ಯಪ್ರವೇಶಿಸಬಾರದು ಎಂದು ಅವರಿಗೆ ಅರ್ಥಮಾಡಿಕೊಳ್ಳಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದೆ. ಈ ರಾಜಕೀಯ ಹಸ್ತಕ್ಷೇಪವನ್ನು ನಾನು ತಡೆದುಕೊಳ್ಳಲು ಸಾಧ್ಯವಿಲ್ಲ, ಎಂದು ಖಾನ್ ಹೇಳಿದರು. ಡಿಸೆಂಬರ್ 8 ರಂದು ಸಿಎಂಗೆ ಬರೆದ ಪತ್ರದಲ್ಲಿ ರಾಜ್ಯಪಾಲರು, ವಿಶ್ವವಿದ್ಯಾನಿಲಯಗಳ ಕಾಯ್ದೆಗೆ ತಿದ್ದುಪಡಿ ತಂದು ಕುಲಪತಿ ಹುದ್ದೆಯನ್ನು ಅಲಂಕರಿಸುವಂತೆ ವ್ಯಂಗ್ಯವಾಡಿದ್ದರು. "ಅಲ್ಲಿ (ವಿಶ್ವವಿದ್ಯಾಲಯಗಳಲ್ಲಿ) ರಾಜಕೀಯ ಹಸ್ತಕ್ಷೇಪ ನಡೆಯುತ್ತಿರುವ ರೀತಿಯನ್ನು ನಾನು ನನ್ನ ಪತ್ರದಲ್ಲಿ ಬರೆದಿದ್ದೇನೆ . ಇದು ನನಗೆ ಅಸಹನೀಯವಾಗಿದೆ ಮತ್ತು ನಾನು ಸರ್ಕಾರದೊಂದಿಗೆ ಯಾವುದೇ ಸಂಘರ್ಷದ ಹಾದಿಯನ್ನು ಅನುಸರಿಸಲು ಬಯಸುವುದಿಲ್ಲ" ಎಂದು ಖಾನ್ ಹೇಳಿದರು. ಸರ್ಕಾರ ತಮ್ಮ ರಾಜಕೀಯ ಅಜೆಂಡಾವನ್ನು ನಿರ್ವಹಿಸುವಂತೆ ಮುಖ್ಯಮಂತ್ರಿಗೆ ವಿಶ್ವವಿದ್ಯಾಲಯಗಳ ಕುಲಪತಿಯಾಗಲು ಅಧಿಕಾರ ನೀಡುವ ಕಾಯಿದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ತರುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದು ರಾಜ್ಯಪಾಲರು ಪತ್ರದಲ್ಲಿ ವ್ಯಂಗ್ಯವಾಡಿದ್ದಾರೆ.

ಅವರು ತಮ್ಮ ರಾಜಕೀಯ ಉದ್ದೇಶಗಳಿಗಾಗಿ ವಿಶ್ವವಿದ್ಯಾಲಯಗಳನ್ನು ಬಳಸಲು ಬಯಸುತ್ತಾರೆ. ಮತ್ತು ನಾನು ಆ ಉದ್ದೇಶಕ್ಕಾಗಿ ಬಳಸಲು ಬಯಸುವುದಿಲ್ಲ, ಈ ನಡುವೆ, ಪ್ರತಿಪಕ್ಷ ಕಾಂಗ್ರೆಸ್ ಕೂಡ ಈ ವಿಷಯದ ಬಗ್ಗೆ ಸಿಪಿಐ(ಎಂ) ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಎಡ ಸರ್ಕಾರವು ವಿಶ್ವವಿದ್ಯಾಲಯಗಳನ್ನು  ಪಕ್ಷದ ಕಚೇರಿಯಾಗಿ ಪರಿವರ್ತಿಸುತ್ತಿದೆ ಎಂದು ಅದು ಆರೋಪಿಸಿದೆ.

ಯೂರೋಪಿನ ಬಾಹ್ಯಾಕಾಶ ಸಂಸ್ಥೆಗಳ ಯಶಸ್ಸಿಗೆ ಸೂರ್ಯ ಸಿದ್ಧಾಂತ ಗ್ರಂಥ ಕಾರಣ’!

ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ರಾಜ್ಯಪಾಲರು ಪ್ರಸ್ತಾಪಿಸಿದ ವಿಷಯಗಳು "ಅತ್ಯಂತ ಗಂಭೀರ" ಎಂದು ಬಣ್ಣಿಸಿದ್ದು, ಇದು ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣದ ರಾಜಕೀಯೀಕರಣಕ್ಕೆ ಇತ್ತೀಚಿನ ಉದಾಹರಣೆಯಾಗಿದೆ. ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ ನೇಮಕಾತಿಗಳಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತದ ಬಗ್ಗೆ ಪ್ರತಿಪಕ್ಷಗಳು ಪದೇ ಪದೇ ಸಾಕ್ಷಿ ಸಮೇತ ಹೇಳಿಕೆ ನೀಡುತ್ತಿವೆ ಎಂದು ಸತೀಶನ್ ಹೇಳಿದರು.

ವಿಶ್ವವಿದ್ಯಾನಿಲಯಗಳಲ್ಲಿ ಹಿಂಬಾಗಿಲ ನೇಮಕಾತಿ ನಡೆಯುತ್ತದೆ. ವಿಶ್ವವಿದ್ಯಾನಿಲಯಗಳನ್ನು ಪಕ್ಷದ ಕಚೇರಿಗಳಾಗಿ ಪರಿವರ್ತಿಸಲಾಗುತ್ತಿದೆ. ಮುಖ್ಯಮಂತ್ರಿಗಿಂತ ಪಕ್ಷದ ಕಾರ್ಯದರ್ಶಿಯನ್ನು ಕುಲಪತಿಯನ್ನಾಗಿ ಮಾಡುವುದು ಉತ್ತಮ. ಪ್ರತಿಪಕ್ಷಗಳು ಈ ಹಿಂದೆ ಪ್ರಸ್ತಾಪಿಸಿದ್ದನ್ನು ರಾಜ್ಯಪಾಲರು ಖಚಿತಪಡಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಹೇಳಿಕೆಯಲ್ಲಿ ತಿಳಿಸಿದ್ದಾರೆ. . ಎಲ್‌ಡಿಎಫ್ ಆಡಳಿತದಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಆಡಳಿತಾರೂಢ ರಾಜಕಾರಣಿಗಳ ಸಂಬಂಧಿಕರನ್ನು ಪ್ರಮುಖ ಹುದ್ದೆಗಳಲ್ಲಿ ನೇಮಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಆರೋಪಿಸಿದ್ದಾರೆ.

click me!