Gold Smuggling case ಪಿಣರಾಯಿ ವಿಜಯನ್ ಮಾಜಿ ಸೆಕ್ರೆಟರಿ ಆತ್ಮಕತೆ ಸುಳ್ಳಿನ ಕಂತೆ, ಮೌನ ಮುರಿದ ಸ್ವಪ್ನಾ ಸುರೇಶ್!

Published : Feb 04, 2022, 11:30 PM ISTUpdated : Feb 05, 2022, 12:21 AM IST
Gold Smuggling case ಪಿಣರಾಯಿ ವಿಜಯನ್ ಮಾಜಿ ಸೆಕ್ರೆಟರಿ ಆತ್ಮಕತೆ ಸುಳ್ಳಿನ ಕಂತೆ, ಮೌನ ಮುರಿದ ಸ್ವಪ್ನಾ ಸುರೇಶ್!

ಸಾರಾಂಶ

ಚಿನ್ನ ಕಳ್ಳಸಾಗಾಣಿಕೆ ಆರೋಪಿ ಸ್ವಪ್ನಾ ಸುರೇಶ್ ಸ್ಫೋಟಕ ಹೇಳಿಕೆ ಸಿಎಂ ವಿಜಯನ್ ಮಾಜಿ ಪ್ರಧಾನ ಕಾರ್ಯದರ್ಶಿ ವಿರುದ್ಧ ಆರೋಪ ಕಾರ್ಯದರ್ಶಿ ಆತ್ಮಕತೆ ಸುಳ್ಳಿನ ಕಂತೆ, ಹೊಸ ಬಾಂಬ್ ಸಿಡಿಸಿದ ಸ್ವಪ್ನಾ

ತಿರುವನಂತಪುರಂ(ಫೆ.04): ಭಾರತದಲ್ಲಿ ಭಾರಿ ಸದ್ದು ಮಾಡಿದ್ದ ಕೇರಳದ ಚಿನ್ನ ಕಳ್ಳ ಸಾಗಾಣಿಕೆ ಕೇಸ್ ಇದೀಗ ಮತ್ತೆ ಸಂಚಲನ ಸೃಷ್ಟಿಸಿದೆ. ಈ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಜೈಲಿನಿಂದ ಹೊರಬಂದ ಬಳಿಕ ಇದೀಗ ಮೌನ ಮುರಿದಿದ್ದಾರೆ. ಏಷ್ಯಾನೆಟ್ ನ್ಯೂಸ್ ಜೊತೆಗಿನ Exclusive ಸಂದರ್ಶನದಲ್ಲಿ ಸ್ವಪ್ನಾ ಹಲವು ಮಾಹಿತಿ ಬಿಚ್ಚಿಟ್ಟಿದ್ದಾರೆ. ಪ್ರಮುಖವಾಗಿ ಸಿಎಂ ಪಿಣರಾಜಿ ವಿಜಯನ್ ಮಾಜಿ ಪ್ರಧಾನ ಕಾರ್ಯದರ್ಶಿ ಎಂ ಶಿವಶಂಕರನ್ ಬರೆದಿರುವ ಆತ್ಮಕತೆಯಲ್ಲಿ ಸುಳ್ಳನ್ನೇ ಹೇಳಿದ್ದಾರೆ. ಎಲ್ಲಾ ಆರೋಪಗಳನ್ನು ನನ್ನ ಮೇಲೆ ಹಾಕಿ ತಾವು ಶುಭ್ರ ಎಂದು ಬಿಂಬಿಸಲು ಹೊರಟಿದ್ದಾರೆ ಎಂದು  ಸ್ವಪ್ನಾ ಸುರೇಶ್ ಹೇಳಿದ್ದಾರೆ. 

ಕೇರಳದ ಚಿನ್ನ ಕಳ್ಳಾ ಸಾಗಾಣಿಕೆ ಪ್ರಕರಣದಲ್ಲಿ ಬಂಧನನಕ್ಕೊಳಗಾಗಿದ್ದ  ಸ್ವಪ್ನಾ ಸುರೇಶ್ ಸರಿಸುಮಾರು ಒಂದು ವರ್ಷದ ಬಳಿಕ ಜಾಮೀನು ಪಡೆದು ಹೊರಬಂದಿದ್ದರು. 2021ರ  ನವೆಂಬರ ತಿಂಗಳಲ್ಲಿ ಜೈಲಿನಿಂದ ಬಿಡುಗಡೆಯಾದ ಸ್ವಪ್ನಾ ಯಾರ ಕೈಗೂ ಸಿಗದೆ ಮೌನಕ್ಕೆ ಶರಣಾಗಿದ್ದರು.ಇತ್ತ ಚಿನ್ನ ಕಳ್ಳ ಸಾಗಾಣಿಕೆ ಕೇಸ್‌ನಲ್ಲಿ ಪ್ರಮುಖವಾಗಿ ಸಿಎಂ ಪಿಣರಾಯಿ ವಿಜಯನ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಂ ಶಿವಶಂಕರನ್ ಪಾತ್ರದ ಕುರಿತು ಸ್ಪಿಪ್ನಾ ಬಾಯ್ಬಿಟ್ಟಿದ್ದರು. ಇದರ ಪರಿಣಾಮ ಶಿವಶಂಕರನ್ ತಮ್ಮ ಹುದ್ದೆಯನ್ನೂ ಕಳೆದುಕೊಂಡು ವಿಚಾರಣೆ ಎದುರಿಸುತ್ತಿದ್ದಾರೆ. ಇತ್ತೀಚೆಗೆ ಶಿವಶಂಕರನ್ ಆತ್ಮಕತೆಯೊಂದನ್ನು ಬರೆದಿದ್ದು, ಇದರಲ್ಲಿ ಪ್ರಮುಖವಾಗಿ ಸ್ಪಪ್ನ ಕಾರಣ ತಾನು ವಿನಾಕಾರಣ ಬಲಿಯಾಗಿದ್ದೇನೆ ಎಂದಿದ್ದಾರೆ. ಈ ಆತ್ಮಕತೆ ಕೇರದಲ್ಲೀಗ ಭಾರಿ ಸಂಚಲನ ಸೃಷ್ಟಿಸಿದೆ. ಈ ಕುರಿತು ಗರಂ ಆಗಿರುವ ಸ್ಪಪ್ನಾ ತನ್ನ ನೋವು ಹಾಗೂ ಸಿಟ್ಟನ್ನು ಏಷ್ಯಾನೆಟ್ ಸಂದರ್ಶನದಲ್ಲಿ ಹೊರಹಾಕಿದ್ದಾರೆ.

Gold Smuggling case; ವರ್ಷದ ನಂತರ ಸ್ವಪ್ನ ಸುರೇಶ್‌ಗೆ ಜಾಮೀನು! ಯಾವ ಗ್ರೌಂಡ್ಸ್!

ಎಂ ಶಿವಶಂಕರನ್ ತಮ್ಮ ಆತ್ಮಕತೆ ಅಶ್ವತ್ಥಾತ್ಮಾವ್ ವೆರುಂ ಒರು ಆನಾ ಎಂಬ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಈ ಕುರಿತು ಎದ್ದಿರುವ ಹಲವು ಗೊಂದಲ ಹಾಗೂ ಚರ್ಚೆಗೆ ಸ್ವಪ್ನಾ ಉತ್ತರಿಸಿದ್ದಾರೆ. ಎಂ ಶಿವಶಂಕರನ್ ಸಣ್ಣ ಪುಸ್ತಕ ಬರೆದಿದ್ದಾರೆ. ನಾನು ಹಲವು ವಿಚಾರಗಳನ್ನು ಮುಂದಿಟ್ಟು ಇದಕ್ಕಿಂತ ದೊಡ್ಡ ಬುಕ್ ಬರೆಯಬಲ್ಲೇ. ಆದರೆ ಸತ್ಯ ಹೇಳುವಲ್ಲಿ ಎಂ ಶಿವಶಂಕರನ್ ಹಿಂದೇಟು ಹಾಕಿದ್ದಾರೆ ಎಂದಿದ್ದಾರೆ.

ಎಂ ಶಿವಶಂಕರನ್ ಬರೆದಿರುವ ಬುಕ್ ಕುರಿತು ಮಾಹಿತಿ ಇದೆ. ಆದರೆ ಸಂಪೂರ್ಣ ಬುಕ್ ಓದಿಲ್ಲ. ಕಾರಣ ಇದು ಮಲೆಯಾಳಂ ಭಾಷೆಯಲ್ಲಿದೆ. ನನಗೆ ಮಲೆಯಾಳಂ ಓದಲು ಬರುವುದಿಲ್ಲ. ಆದರೆ ಬುಕ್ ಖರೀದಿಸಿ ಇತರರ ಸಹಾಯದಿಂದ ಓದುತ್ತೇನೆ. ಸದ್ಯ ನನಗೆ ಆತ್ಮಕತೆಯಲ್ಲಿರುವ ಕೆಲ ಮಾಹಿತಿಗಳು ಮಾತ್ರ ತಿಳಿದಿದೆ. ಆದರೆ ಶಿವಶಂಕರನ್ ಹೇಳಿರುವ ಆ ಮಾಹಿತಿಗಳು ತಪ್ಪು ಎಂದು ಸ್ವಪ್ನಾ ಹೇಳಿದ್ದಾರೆ.

ಚಿನ್ನ ಕಳ್ಳ ಸಾಗಣೆ ಕೇಸ್‌: ಕೇರಳ ಸಿಎಂ ಪಿಣರಾಯಿಗೆ ಉರುಳು?

ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣ ಕುರಿತು ನನಗೆ ಏನೆಲ್ಲಾ ತಿಳಿದಿದೆ ಅನ್ನೋದು ಶಿವಶಂಕರನ್ ಅವರಿಗೂ ತಿಳಿದಿದೆ. ನನಗೆ ಗೊತ್ತಿರುವ ಮಾಹಿತಿಯನ್ನು ತನಿಖಾ ಸಂಸ್ಥೆಗಳ ಮುಂದೆ ವಿಚಾರಣೆಯಲ್ಲಿ ಹೇಳಿದ್ದೇನೆ. ಶಿವಶಂಕರನ್ ಆತ್ಮಕತೆಯಲ್ಲಿ ಸ್ವಪ್ನ ತನಗೆ ಮೋಸ ಮಾಡಿದ್ದಾರೆ. ಕಸ್ಟಮ್ ಅಧಿಕಾರಿಗಳಿಂದ ಕಳ್ಳ ಸಾಗಾಣಿಕೆಯ ಚಿನ್ನ ಬಿಡಿಸಿಕೊಳ್ಳಲು ಸಿಎಂ ಪ್ರಧಾನ ಕಾರ್ಯದರ್ಶಿಯಾಗಿದ್ದ ನನ್ನ ಹೆಸರು ಹೇಳಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಸ್ಪಪ್ನಾ ನಾನು ಅವರಿಗೆ ಮೋಸ ಮಾಡಿದ್ದೇನೆ? ಓರ್ವ ಸಿಎಂ ಪ್ರಧಾನ ಕಾರ್ಯದರ್ಶಿಗೆ ಸಾಮಾನ್ಯಳಾದ ಸ್ಪಪ್ನಾ ಮೋಸ ಮಾಡಲು ಹೇಗೆ ಸಾಧ್ಯ? ಇದನ್ನು ಅವರು ಬಹಿರಂಗ ಪಡಿಸಲಿ ಎಂದಿದ್ದಾರೆ.

ಸ್ಪಪ್ನಾ ಕಳ್ಳ ಸಾಗಾಣಿಕೆಯಲ್ಲಿ ಸಿಕ್ಕಿಬಿದ್ದು ಬಿಡಿಸಿಕೊಳ್ಳಲು ತನ್ನ ಬಳಿ ನೆರವು ಕೇಳಿದ್ದಾರೆ. ಇದಕ್ಕಿಂತ ಹೊರತಾಗಿ ಸ್ಪಪ್ನ ನನಗೆ ತಿಳಿದಿಲ್ಲ. ನಾವು ಆತ್ಮೀಯರಲ್ಲ ಎಂದು ಶಿವಶಂಕರನ್ ತಮ್ಮ ಆತ್ಮಕತೆಯಲ್ಲಿ ಹೇಳಿಕೊಂಡಿದ್ದಾರೆ. ಇದು ತಪ್ಪು ಎಂದು ಸ್ಪಪ್ನಾ ಹೇಳಿದ್ದಾರೆ. ಇಷ್ಟೇ ಅಲ್ಲ ಐಫೋನ್ ನೀಡಿ ಓರ್ವ ಪ್ರಧಾನ ಕಾರ್ಯದರ್ಶಿಯನ್ನು ಬಲೆಗೆ ಬೀಳಿಸುವುದು ಸಾಧ್ಯವೇ? ನಾನು ಹಲವು ಉಡುಗೊರೆಗಳನ್ನು ಶಿವಶಂಕರನ್ ಅವರಿಗೆ ನೀಡಿದ್ದೇನೆ. ಇದರಲ್ಲಿ ಫೋನ್ ಕೂಡ ಒಂದು. ಆದರೆ ಈ ಫೋನ್ ಹಿಂದೆ ಕಳ್ಳ ಸಾಗಾಣಿಕೆ ಗೂಡಾಲೋಚನೆ ಇತ್ತು ಎಂದು ಅರಿತಿರಲಿಲ್ಲ ಅನ್ನೋ ಶಿವಶಂಕರನ್ ವಾದ ಒಪ್ಪುವುದಲ್ಲ. ನಾನು ಕಳೆದ 3 ರಿಂದ 4 ವರ್ಷದಲ್ಲಿ ಹಲವು ಉಡುಗೊರೆಗಳನ್ನು ನೀಡಿದ್ದೇನೆ. ಶಿವಶಂಕರನ್ ಈ ಪ್ರಕರಣದಿಂದ ನುಣುಚಿಕೊಳ್ಳಲು ಸುಳ್ಳು ಬರೆದಿದ್ದಾರೆ. ಹೀಗಾದಲ್ಲಿ ನಾನು ಸಾರ್ವಜನಿಕರಿಗೆ ಸತ್ಯ  ಬಹಿರಂಗ ಪಡಿಸಬೇಕಾದ ಅನಿವಾರ್ಯ ಎದುರಾಗಲಿದೆ. ನಾನು ಕೂಡ ಆತ್ಮಕತೆ ಬರೆಯಬೇಕಾಗುತ್ತದೆ ಎಂದು ಸ್ವಪ್ನಾ ಹೇಳಿದ್ದಾರೆ.

ಕೇರಳ ಸಿಎಂ ಜತೆ 'ಸಂಪರ್ಕ' ಒಪ್ಪಿಕೊಂಡ ಸ್ವಪ್ನಾ ಸುರೇಶ್

ಶಿವಶಂಕರನ್ ಆತ್ಮಕತೆಯಲ್ಲಿರುವ ಪ್ರಕಾರ ಹೇಳುವುದಾದರೆ ನನಗೆ ಶಿವಶಂಕರನ್ ಮೋಸ ಮಾಡಿದ್ದಾರೆ. ನನ್ನ ಬಳಸಿ ತಮ್ಮ ಕಾರ್ಯಸಾಧನೆ ಮಾಡಿದ್ದಾರೆ. ಶಿವಶಂಕರನ್ ಈ ರೀತಿಯ ಬರೆಯುವುದಕ್ಕಿಂತ ಮೊದಲು ನಮ್ಮ ಗೆಳೆತನ, ಸಂಬಂಧ ಕುರಿತು ಆಲೋಚನೆ ಮಾಡಬೇಕಿತ್ತು. ಆದರೆ ತಮ್ಮ ಮೇಲಿನ ಕಪ್ಪು ಚುಕ್ಕೆಯಿಂದ ಹೊರಬಲು ಇಲ್ಲಸಲ್ಲದ ಕತೆಗಳನ್ನು ಬರೆದಿದ್ದಾರೆ ಎಂದು ಸ್ಪಪ್ನಾ ಆರೋಪಿಸಿದ್ದಾರೆ.

ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ನನ್ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕುವಂತೆ ಎಂ ಶಿವಶಂಕರನ್ ಸೇರಿದಂತೆ ಹಲವು ಸೂಚಿಸಿದ್ದರು. ನಿರೀಕ್ಷಣಾ ಜಾಮೀನು ಪಡೆದ ಬಳಿಕ ಹೇಳಿಕೆ ನೀಡಬೇಕು ಅನ್ನೋ ಸೂಚನೆ ನನಗೆ ನೀಡಲಾಗಿತ್ತು. ನಾನು ಆಡಳಿತ ಕೆಲಸ ಹಾಗೂ ಕಾರ್ಯದರ್ಶಿ ಕೆಲಸಗಳನ್ನು ಮಾಡಿದ್ದೇನೆ. ಪ್ರಕರಣ ಬೆಳಕಿಗೆ ಬಂದಾಗ ನನಗೆ ಮಾನಸಿಕ ಹಿಂಸೆ ಆರಂಭಗೊಂಡಿತು. ಹೀಗಾಗಿ ಶಿವಶಂರನ್, ಸಂದೀಪ್ ಹಾಗೂ ನನ್ನ ಪತಿ ಜೈಶಂಕರ್ ಸೂಚನೆಯನ್ನು ಪಾಲಿಸಿದೆ. ರಾತ್ರೋರಾತ್ರಿ ಕೊಚ್ಚಿಗೆ ತೆರಳಿ ವಕೀಲರ ಭೇಟಿಯಾಗಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿ, ಬೆಂಗಳೂರಿಗೆ ತೆರಳಿದೆ. ಈ ವಿಚಾರ ಕೋರ್ಟ್‌ನಲ್ಲಿರುವ ಕಾರಣ ಹೆಚ್ಚಿನ ಮಾಹಿತಿ ನೀಡುವು ಸೂಕ್ತವಲ್ಲ. ಆದರೆ ನನ್ನನ್ನು ದಾಳವಾಗಿ ಬಳಸಿಕೊಂಡರು ಎಂದು ಸ್ವಪ್ನಾ ಹೇಳಿದ್ದಾರೆ.

ಸ್ಮಗ್ಲಿಂಗ್ ಕೇಸ್ NIA(National Investigation Agency) ಅಡಿ ಬರುವುದಿಲ್ಲ. ಆದರೆ ಶಿವಶಂಕರನ್ ಇದರ ಹಿಂದೆ ಭಾರಿ ಕೆಲಸ ಮಾಡಿದ್ದಾರೆ. ಕಸ್ಟಮ್ ಅಧಿಕಾರಿಗಳ ವ್ಯಾಪ್ತಿಗೆ ಬರುವ ಈ ಪ್ರಕರಣ NIA ಕೈಸೇರವಂತೆ ಶಿವಶಂಕರನ್ ನೋಡಿಕೊಂಡಿದ್ದಾರೆ ಎಂದು ಸ್ಪಪ್ನಾ ಸುರೇಶ್ ಹೇಳಿದ್ದಾರೆ.

NIA ತಂದಿರುವ ಉದ್ದೇಶ ನನ್ನನ್ನು ಜೈಲಿಗೆ ಅಟ್ಟಬೇಕು, ನಾನು ಈ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದ ಕುರಿತು ಯಾವ ಮಾಹಿತಿಯನ್ನು ಬಿಚ್ಚಿಡಬಾರದು, ಯಾರ ಹೆಸರನ್ನು ಬೆಳಕಿಗೆ ತರಬಾರದು ಅನ್ನೋ ಉದ್ದೇಶದಿಂದ ಈ ಪ್ರಕರಣದಲ್ಲಿ ಭಯೋತ್ಪಾದಕ ಲಿಂಕ್ ಮಾಡಲಾಗಿದೆ. ಹೀಗಾಗಿ NIA ಪ್ರವೇಶ ಮಾಡಿದೆ. ಈ ಪ್ರಕರಣದಲ್ಲಿ ಎಂ ಶಿವಶಂಕರನ್ ಪಾತ್ರ ಇಲ್ಲ ಎಂದು ಹೇಳುತ್ತಿದ್ದಾರೆ. ಹೀಗಾದರೆ NIA ವಿಚಾರಣೆ ಅವರ ಬಳಿ ಬಂದಿದ್ದು ಹೇಗೆ? ನನಗೆ ಮಾಡಿದ ವ್ಯಾಟ್ಸ್ಆ್ಯಪ್ ಸಂದೇಶ, ಫೋನ್ ಕಾಲ್ ಎಲ್ಲವೂ ತನಿಖೆಯಾಗಿದೆ. ನನ್ನ ಸಂಪರ್ಕದಲ್ಲಿದ್ದವರ ವಿಚಾರಣೆ ನಡೆದಿದೆ ಎಂದು ಸ್ವಪ್ನಾ ಹೇಳಿದ್ದಾರೆ.

ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಸ್ಪಪ್ನಾ ಆಡಿಯೋ ವೈರಲ್ ಆಗಿದೆ. ಈ ಆಡಿಯೋದಲ್ಲಿ ಸಿಎಂ ಪಿಣರಾಯಿ ವಿಜಯನ್ ಹಾಗೂ ಸರ್ಕಾರದ ಪಾತ್ರವಿಲ್ಲ ಎಂಬ ಹೇಳಿಕೆ ಇತ್ತು ನಿಜ. ಆದರೆ ಈ ಹೇಳಿಕೆಯನ್ನು ಎಂ ಶಿವಶಂಕರನ್, ಸಂದೀಪ್ ಅವರ ನಿರ್ದೇಶದ ಪ್ರಕಾರ ಹೇಳಿದ್ದೇನೆ. ಅವರು ನನ್ನ ರಕ್ಷಣೆಗೆ ನಿಂತಿದ್ದಾರೆ ಎಂದು ನಾನು ಭಾವಿಸಿದ್ದೆ. ಅವರು ಹೇಳಿದ ಎಲ್ಲಾ ಸೂಚನಗಳನ್ನು ಪಾಲಿಸಿ ಹೇಳಿಕೆ ನೀಡುತ್ತಿದ್ದೆ ಎಂದು ಸ್ಪಪ್ನಾ ಹೇಳಿದ್ದಾರೆ. ಈ ಮೂಲಕ ಕೇರಳದಲ್ಲಿ ಕೋಲಾಹಲ ಎಬ್ಬಿಸಿದ್ದ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಸರ್ಕಾರದ ಪಾತ್ರ ಇದೆ ಅನ್ನೋದನ್ನು ಸ್ಪಪ್ನಾ ಒಪ್ಪಿಕೊಂಡಿದ್ದಾರೆ.

ಸಿಎಂ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿ ನನ್ನ ಜೊತೆ ದುಬೈನಲ್ಲಿ ಕಾಲ ಕಳೆಯಲು ಎಂ ಶಿವಶಂಕರನ್ ನಿರ್ದರಿಸಿದ್ದರು. ದುಬೈನಲ್ಲಿ ಬ್ಯುಸಿನೆಸ್ ಮಾಡಲು ಶಿವಶಂಕರನ್ ನಿರ್ದರಿಸಿದ್ದರು. ನನ್ನ ಜೀವನವನ್ನೇ ಅವರಿಗೆ ನೀಡಿದ್ದೆ. ಆದರೆ ಅವರು ಸಿಕ್ಕಿಬಿದ್ದಾಗ ತಮ್ಮಲ್ಲಿರುವ ಅಧಿಕಾರ ಬಳಸಿ ನನ್ನ ಜೈಲಿಗೆ ತಳ್ಳಿದರು. ಇದೀಗ ನನ್ನ ವಿರುದ್ಧವೇ ಪುಸ್ತಕ ಬರೆದು ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ನಾಳೆ ಅವರ ಜೀವನದಲ್ಲಿ ಇನ್ನೊಬ್ಬ ಸಪ್ನಾ ಸುರೇಶ್ ಬರಬಹುದು, ಅವರು ಬಳಸಿಕೊಂಡು ಬಿಸಾಡಬಹುದು. ನನ್ನ ಜೀವನದಲ್ಲಿ ಶಿವಶಂಕರನ್ ಅಧ್ಯಾಯ ಮುಗಿದಿದೆ. ನಾನು ದೈಹಿಕವಾಗಿ, ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ಮಾಸಿಕ ಖಿನ್ನತೆ ಸೇರಿದಂತೆ ಹಲವು ಸಮಸ್ಯಗೆ ಗುರಿಯಾಗಿದ್ದೇನೆ. ಆದರೆ ನ್ಯಾಯ ಸಿಗಲಿದೆ ಎಂದು ಸ್ಪಪ್ನಾ ಹೇಳಿದ್ದಾರೆ. 

ಜೈಲು ಸೇರಿದ 6 ತಿಂಗಳ ಕಾಲ ನಾನು ಅವರ ಸೂಚನೆ ಪಾಲಿಸಿದ್ದೇನೆ. ಎಲ್ಲಾ ಸೂಚನೆಗಳಲ್ಲಿ ಅವರು ಬಜಾವ್ ಆಗುವ ಮಾರ್ಗಗಳೇ ಇತ್ತು. ಆದರೆ NIA ಈ ಪ್ರಕರಣ ತನಿಖೆ ಆರಂಭಿಸದ ಬಳಿಕ ನನ್ನಲ್ಲಿನ ದಾಖಲೆ ಪರಿಶೀಲಿಸಿ ಎಂ ಶಿವಶಂಕರನ್ ಅವರ ವಿಚಾರಣೆ ನಡೆಸಿದೆ. ಈ ಪ್ರಕರಣದಲ್ಲಿ ನಾನು ಕೈಗೊಂಬೆಯಾಗಿದ್ದೆ. ಅಪರಾಧಿಯಲ್ಲ. ಕೋರ್ಟ್ ನ್ಯಾಯ ಕೊಡಿಸಲಿದೆ ಎಂದು ಸ್ಪಪ್ನಾ ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ
ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು