ಆಂಧ್ರ ಪ್ರದೇಶ ಸಿಎಂ ಜಗನ್‌ ಮೋಹನ್ ರೆಡ್ಡಿ ವಿಡಿಯೋ ವೈರಲ್

By Suvarna NewsFirst Published Feb 4, 2022, 5:31 PM IST
Highlights
  • ಸಾಹಸ ಕ್ರೀಡೆಯಲ್ಲಿ ಭಾಗಿಯಾದ ಆಂಧ್ರಪ್ರದೇಶ ಸಿಎಂ ಜಗನ್‌ ಮೋಹನ್ ರೆಡ್ಡಿ 
  • 2018 ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್‌
  • ನ್ಯೂಜಿಲ್ಯಾಂಡ್‌ನಲ್ಲಿ ಭಂಗಿ ಜಂಪಿಂಗ್ ಮಾಡುತ್ತಿರುವ ವಿಡಿಯೋ

ಹೈದರಾಬಾದ್‌(ಫೆ.4): ಆಂಧ್ರಪ್ರದೇಶ (Andhra Pradesh) ಸಿಎಂ ವೈ.ಎಸ್. ಜಗನ್‌ ಮೋಹನ್‌ ರೆಡ್ಡಿ (Jagan Mohan Reddy) ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ಜಗನ್‌ ಸಾಹಸ ಕ್ರೀಡೆಯಲ್ಲಿ ಭಾಗಿಯಾಗಿರುವ ದೃಶ್ಯವಿದೆ. ಆಂಧ್ರಪ್ರದೇಶದ ಯಂಗ್‌ & ಎನರ್ಜಿಟಿಕ್‌ ನಾಯಕ ಎನಿಸಿರುವ ಜಗನ್‌ ಮೋಹನ್ ರೆಡ್ಡಿ ಈ ಒಂದು ಸಾಹಸದ ಮೂಲಕ ತಾವು ಎಲ್ಲದಕ್ಕೂ ಸೈ ಎಂಬುದನ್ನು ಸಾಬೀತುಪಡಿಸಿದ್ದಾರೆ. 

ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಹಳೆಯ ವೀಡಿಯೊ ಇದಾಗಿದ್ದು ಆನ್‌ಲೈನ್‌ನಲ್ಲಿ ಮತ್ತೆ ಕಾಣಿಸಿಕೊಂಡಿದೆ. ಆ ವಿಡಿಯೋದಲ್ಲಿ ಅವರು ಅವರು ಬಂಗೀ ಜಂಪಿಂಗ್ ಅನ್ನು ಆನಂದಿಸುತ್ತಿದ್ದಾರೆ. ysjaganholic ಎಂಬ ಚಾನಲ್‌ನ ಇನ್ಸ್ಟಾಗ್ರಾಮ್‌( Instagram) ಖಾತೆಯಿಂದ ಈ ವಿಡಿಯೋವನ್ನು  ಅಪ್‌ಲೋಡ್ ಮಾಡಲಾಗಿದೆ. 

Latest Videos

ನ್ಯೂಜಿಲೆಂಡ್‌ನಲ್ಲಿ ಸೆರೆ ಹಿಡಿಯಲಾದ ವಿಡಿಯೋ ಇದಾಗಿದೆ.  ಇದರಲ್ಲಿ ಯುವ  ರಾಜಕಾರಣಿ ಜಗನ್‌ ಸಾಹಸ ಕ್ರೀಡೆಯನ್ನು ಆಡುತ್ತಿರುವ ದೃಶ್ಯವಿದೆ. ವಿಡಿಯೋದ ಆರಂಭದಲ್ಲಿ, ಆಂಧ್ರಪ್ರದೇಶ ಸಿಎಂ ಎತ್ತರದ ಸ್ಥಳದಿಂದ ಕೆಳಕ್ಕೆ ಜಿಗಿಯಲು ಸಿದ್ಧತೆ ನಡೆಸುತ್ತಿರುವಾಗ ಅವರ  ಟ್ರೈನರ್‌ ಅವರ ಪಕ್ಕದಲ್ಲಿ ನಿಂತಿರುವುದನ್ನು ಕಾಣಬಹುದು. ಮೇಲಿನಿಂದ ಕೆಳಗೆ ಜಿಗಿಯುವ ಮುನ್ನ ಅವರು ಕ್ಯಾಮರಾದತ್ತ ಕೈ ಬೀಸುತ್ತಾರೆ.

 

ತಮ್ಮ ಕಾಲಿಗೆ ಸುರಕ್ಷಿತವಾಗಿ ಹಗ್ಗವನ್ನು ಕಟ್ಟಲಾಗಿದೆ ಎಂದು ಖಚಿತಪಡಿಸಿಕೊಂಡ ನಂತರ, ವೈ.ಎಸ್. ಜಗನ್ ಮೋಹನ್ ರೆಡ್ಡಿ ಮೇಲಿನಿಂದ ಕೆಳಗೆ ಜಿಗಿಯುತ್ತಾರೆ.  ಅವರು ಕೆಳಗೆ ಜಿಗಿಯುತ್ತಿರುವ ಪ್ರದೇಶದಲ್ಲಿ ಸುತ್ತ ಬೆಟ್ಟಗುಡ್ಡಗಳಿದ್ದು ಕೆಳಗೆ ನದಿ ಹರಿಯುತ್ತಿದೆ. ಈ ವೀಡಿಯೊ ಶೀಘ್ರದಲ್ಲೇ ವೈರಲ್ ಆಗಿದ್ದು, ಇನ್ಸ್ಟಾಗ್ರಾಮ್‌ನಲ್ಲಿ(Instagram)ನಲ್ಲಿ ಸುಮಾರು 1.4 ಲಕ್ಷ ಜನ ಇದನ್ನು ಲೈಕ್ ಮಾಡಿದ್ದಾರೆ. 

Three Capital Bill| ಮಸೂದೆ ರದ್ದು ಮಾಡಿದರೂ, ಮರು ಜಾರಿ ಪ್ರತಿಜ್ಞೆ ಮಾಡಿದ ಜಗನ್‌!

ವರದಿಯ ಪ್ರಕಾರ, 2018 ರ ವಿಡಿಯೋ ಇದಾಗಿದೆ. ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ನ್ಯೂಜಿಲೆಂಡ್‌ನಲ್ಲಿ(New Zealand) ತಮ್ಮ ಕುಟುಂಬದೊಂದಿಗೆ ವಿಹಾರಕ್ಕೆ ತೆರಳಿದಾಗ  ಈ ವೀಡಿಯೊವನ್ನು ಚಿತ್ರೀಕರಿಸಲಾಗಿದೆ. ಅವರು ಬಂಗೀ ಜಂಪ್ ಮಾಡಿದ ಸ್ಥಳವನ್ನು ಕವಾರೌ ಬಂಗಿ ಸೆಂಟರ್ (Kawarau Bungy Centre) ಎಂದು ಗುರುತಿಸಲಾಗಿದ್ದು, ಇದನ್ನು  ನ್ಯೂಜಿಲೆಂಡ್‌ನಲ್ಲಿ ಭೇಟಿ ನೀಡಲೇಬೇಕಾದ ತಾಣವೆಂದು ಪರಿಗಣಿಸಲಾಗಿದೆ.

Andhra Pradeshಕ್ಕೆ ಅಮರಾವತಿ ಒಂದೇ ರಾಜಧಾನಿ : ಸಿಎಂ ಜಗನ್ ಮೋಹನ್ ರೆಡ್ಡಿ ಘೋಷಣೆ!

ಸಾಮಾನ್ಯವಾಗಿ ಹಿಂದೆಲ್ಲಾ ರಾಜಕಾರಣಿಗಳು ಎಂದಾಗ ಕುರ್ತಾ ಪೈಜಾಮ ಮತ್ತು ನೆಹರೂ ಜಾಕೆಟ್ ಧರಿಸಿರುವ ವ್ಯಕ್ತಿಗಳು ಕಣ್ಣ ಮುಂದೆ ಬರುತ್ತಿದ್ದರು. ಆದರೆ ಈಗ ಕಾಲದ ಜೊತೆ ರಾಜಕಾರಣಿಗಳು ಬದಲಾಗಿದ್ದು, ಆಧುನಿಕ ಡ್ರೆಸ್‌ಗಳಲ್ಲಿ ಅವರೂ ಮಿಂಚುತ್ತಿದ್ದಾರೆ. ಅಲ್ಲದೇ ರಾಜಕಾರಣಿಗಳು ಕೇವಲ ಚುನಾವಣೆ, ಪ್ರಚಾರ ಹಾಗೂ ಇತರ ರಾಜಕಾರಣದಲ್ಲೇ ತಮ್ಮ ಸಮಯವನ್ನು ಕಳೆಯುತ್ತಾರೆ ಎಂಬ ಯೋಚನೆ ಜನರಲ್ಲಿದೆ. ಆದರೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಈ ಸಂಪ್ರದಾಯವನ್ನು ಮುರಿದಿದ್ದಾರೆ.

ಯೆದುಗುರಿ ಸಂದಿಂಟಿ ಜಗನ್ ಮೋಹನ ರೆಡ್ಡಿ ರಾಜಕಾರಣದ ಹಿನ್ನೆಲೆಯ ಕುಟುಂಬದಿಂದ ಬಂದವರಾಗಿದ್ದಾರೆ. ಇವರು ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ಸುಪುತ್ರ. ಆಂಧ್ರ ಪ್ರದೇಶದ ಕಡಪಾ ಜಿಲ್ಲೆಯ ಪುಲಿವೆಂದುಲ ಗ್ರಾಮದಲ್ಲಿ ಡಿಸೆಂಬರ್ 21, 1972 ರಂದು ಇವರು ಜನಿಸಿದರು.

click me!