ಕೇರಳ ಸಿಎಂ ಜತೆ 'ಸಂಪರ್ಕ' ಒಪ್ಪಿಕೊಂಡ ಸ್ವಪ್ನಾ ಸುರೇಶ್

By Kannadaprabha NewsFirst Published Aug 7, 2020, 12:28 PM IST
Highlights

ಚಿನ್ನ ಕಳ್ಳಸಾಗಣೆ ಹಗರಣದ ರೂವಾರಿ ಸ್ವಪ್ನ ಸುರೇಶ್ ತನಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಸಾಮಾನ್ಯ ಸಂಪರ್ಕವಿದೆ ಎಂದು ಎನ್‌ಐಎ ಎದುರು ಬಾಯಿ ಬಿಟ್ಟಿದ್ದಾಳೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಕೊಚ್ಚಿ(ಆ.07): ಕೇರಳದ ಬಹುಕೋಟಿ ಚಿನ್ನ ಕಳ್ಳಸಾಗಣೆ ಹಗರಣದ ರೂವಾರಿ ಸ್ವಪ್ನಾ ಸುರೇಶ್‌ ತನಗೆ ಮುಖ್ಯಮಂತ್ರಿ ಪಿಣರಾಯಿ ವಿಜಯ್‌ ಜೊತೆ ‘ಸಾಮಾನ್ಯ ಸಂಪರ್ಕ’ ಇದೆ ಎಂದು ಒಪ್ಪಿಕೊಂಡಿದ್ದಾಳೆ. 

ಈ ವಿಷಯವನ್ನು ಹಗರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಗುರುವಾರ ಕೋರ್ಟ್‌ಗೆ ತಿಳಿಸಿದೆ. ಅದರೊಂದಿಗೆ, ಹಗರಣದಲ್ಲಿ ಕೇರಳದ ಮುಖ್ಯಮಂತ್ರಿ ಕೂಡ ಭಾಗಿಯಾದ್ದು, ಅವರು ರಾಜೀನಾಮೆ ನೀಡಬೇಕು ಎಂಬ ಪ್ರತಿಪಕ್ಷಗಳ ಕೂಗಿಗೆ ಮತ್ತಷ್ಟು ಬಲ ಬಂದಂತಾಗಿದೆ.

ಸ್ವಪ್ನಾ ಗ್ಯಾಂಗ್‌ನಿಂದ 300 ಕೆ.ಜಿ. ಚಿನ್ನ ಕಳ್ಳ ಸಾಗಣೆ!

ಸ್ವಪ್ನಾ ತನಗೆ ಮುಖ್ಯಮಂತ್ರಿ ಜೊತೆ ‘ಸಾಮಾನ್ಯ ಸಂಪರ್ಕ’ ಇದೆ ಎಂದು ಹೇಳಿಕೆ ನೀಡಿದ್ದಾಳೆ. ಅಲ್ಲದೆ ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್‌ ತನ್ನ ಮಾರ್ಗದರ್ಶಕ ಎಂದೂ ಹೇಳಿದ್ದಾಳೆ. ಕೊಚ್ಚಿ ವಿಮಾನನಿಲ್ದಾಣದಲ್ಲಿ ಜು.5ರಂದು ಸ್ವಪ್ನಾ ತಂದಿದ್ದ ರಾಜತಾಂತ್ರಿಕ ಬ್ಯಾಗೇಜ್‌ನಲ್ಲಿ 30 ಕೆ.ಜಿ. ಅಕ್ರಮ ಚಿನ್ನ ಪತ್ತೆಯಾಗಿ ಜಪ್ತಿ ಮಾಡಿದಾಗ ಆಕೆ ತನ್ನ ನೆರವಿಗೆ ಬರುವಂತೆ ಶಿವಶಂಕರ್‌ ಅವರ ಫ್ಲ್ಯಾಟ್‌ಗೆ ಹೋಗಿ ಕೇಳಿದ್ದಳು. ಆದರೆ, ಶಿವಶಂಕರ್‌ ನೆರವು ನೀಡಿರಲಿಲ್ಲ ಎಂದು ಎನ್‌ಐಎ ತಿಳಿಸಿದೆ.

ಮೈ ಮಾಟದಿಂದ ಅಧಿಕಾರಿಗಳನ್ನು ಬಲೆಗೆ ಹಾಕಿ ಕೊಳ್ಳುತ್ತಿದ್ದ ಸ್ವಪ್ನಾ ಸುರೇಶ್

click me!