
ಕೊಡಗು (ಡಿ.09): ಕೇರಳದ ಪಡಿಚಾಟುನಿಂದ ಕೊಡಗು ಪ್ರವಾಸಕ್ಕೆ ಬಂದಿದ್ದ ಕೇರಳದ ಕುಟುಂಬವೊಂದು ಅರೇಕಾ ರೆಸಾರ್ಟ್‌ನಲ್ಲಿ ತಮ್ಮ 11 ವರ್ಷದ ಹೆಣ್ಣು ಮಗಳನ್ನು ಕೊಲೆಗೈದು, ಕೊನೆಗೆ ತಾವು ಕೂಡ ಡೆತ್‌ನೋಟ್ ಬರೆದಿದ್ದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಇಂದು ಬೆಳಗ್ಗೆ ಕಂಡುಬಂದಿದೆ.
ಕೇರಳದ ಪಡಿಚಾಟು ದಂಪತಿ ಕೊಡಗಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೊಡಗು ಜಿಲ್ಲೆಯ ಬಿಳಿಗೇರಿಯ ಅರೆಕಾ ರೆಸಾರ್ಟ್ ನಲ್ಲಿ ಘಟನೆ ನಡೆದಿದೆ. ಮೃತರನ್ನು ವಿನೋದ್ (41), ಝುಬಿ ಅಬ್ರಹಾಂ (37), ಜೋಹನ್ (11) ಎಂದು ಗುರುತಿಸಲಾಗಿದೆ. ತಮ್ಮ ಮಗಳು ಜೋಹನ್‌ಳನ್ನು ಮೊದಲು ಸಾಯಿಸಿ ಬಳಿಕ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೆಸಾರ್ಟ್ ಮಾಲೀಕರು ಇಂದು ಬೆಳಗ್ಗೆ ವೇಳೆ ತಿಂಡಿಗೆ ಬಾರದ ದಂಪತಿಯನ್ನು ಮಾತನಾಡಿಸಲು ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಆಗ ತಿಂಡಿಗೆ ಕರೆಯಲು ಹೋದ ರೆಸಾರ್ಟ್ ಸಿಬ್ಬಂದಿ ಇನ್ನೂ ಮಲಗಿರಬೇಕು ಎಂದು ವಾಪಸ್ ಬಂದಿದ್ದಾರೆ. ಮಧ್ಯಾಹ್ನದ ವೇಳೆಗಾದರೂ ಊಟಕ್ಕೆ ಬರುತ್ತಾರೆ ಎಂದು ಕಾಯುತ್ತಿದ್ದ ರೆಸಾರ್ಟ್ ಸಿಬ್ಬಂದಿಗೆ ಅವರು ಕೊಠಡಿ ಬಾಗಿಲು ತೆರೆದು ಹೊರಗೆ ಬಾರದಿರುವುದು ಅನುಮಾನಕ್ಕೆ ಕಾರಣವಾಗಿದೆ. ಆಗ ಕಿಟಕಿಯಿಂದ ಬಗ್ಗೆ ನೋಡಿದಾಗ ದಂಪತಿ ಆತ್ಮಹತ್ಯೆಗೆ ಶರಣಾಗಿರುವುದು ಪತ್ತೆಯಾಗಿದೆ.
Breaking: ಚಿತ್ರದುರ್ಗ ಮದುವೆ ದಿಬ್ಬಣಕ್ಕೆ ಹೊರಟಿದ್ದ ಬಸ್ ಅಪಘಾತ: ಇಬ್ಬರ ಸಾವು, ಹಲವರ ಸ್ಥಿತಿ ಗಂಭೀರ
ಇನ್ನು ಈ ಘಟನೆ ಕುರಿತಂತೆ ರೆಸಾರ್ಟ್ ಮಾಲೀಕರು ಮಡಿಕೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ಆಗ ದಂಪತಿ ಮೃತ ದೇಹ ಫ್ಯಾನ್‌ಗೆ ನೇನು ಬಿಗಿದ ಸ್ಥಿತಿಯಲ್ಲಿದ್ದರೆ ಹೆಣ್ಣು ಮಗು ಹಾಸಿಗೆ ಮೇಲೆ ಮೃತಪಟ್ಟು ಬಿದ್ದಿತ್ತು. ಸ್ಥಳ ಪರಿಶೀಲನೆ ಮಾಡಿದ ಪೊಲೀಸರಿಗೆ ಮೃತ ದಂಪತಿ ಡೆತ್ ಓಟ್ ಬರೆದಿಟ್ಟಿರುವುದು ಪತ್ತೆಯಾಗಿದೆ. ಇನ್ನು ಮೃತ ದೇಹಗಳನ್ನು ಕೊಡಗು ಜಿಲ್ಲಾಸ್ಪತ್ರೆಗೆ ರವಾನಿಸಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕೇರಳದಿಂದ ಬರುವ ಅವರ ಕುಟುಂಬಸ್ಥರಿಗೆ ಒಪ್ಪಿಸಲಿದ್ದಾರೆ.
ಡೆತ್‌ನೋಟ್‌ನಲ್ಲಿ ಏನಿದೆ?
ದಂಪತಿ ಮೃತಪಟ್ಟ ಸ್ಥಳದಲ್ಲಿ ಸಿಕ್ಕ ಡೆತ್ ನೋಟ್ ಪರಿಶೀಲನೆ ಮಾಡಿದಾಗ ಅದರಲ್ಲಿ ನಾವು ಸ್ವಯಂಕೃತವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಬರೆದಿಟ್ಟಿರುವುದು ಕಂಡುಬಂದಿದೆ. ನಮ್ಮ ಸಾವಿಗೆ ನಾವೇ ಕಾರಣ. ನಮ್ಮ ತಿಳುವಳಿಕೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದೇವೆ ಎಂದು ಬರೆದಿದ್ದಾರೆ. ಜೊತೆಗೆ, ದಂಪತಿ ಇಬ್ಬರೂ ಡೆತ್‌ನೋಟ್‌ಗೆ ಸಹಿಯನ್ನೂ ಹಾಕಿದ್ದಾರೆ. ಇನ್ನು ಪೊಲೀಸರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಪ್ರಾಥಮಿಕ ಮಾಹಿತಿಯನ್ನು ನೀಡಿದ್ದು, ಆದರೂ ಮರಣೋತ್ತರ ಪರೀಕ್ಷೆ ನಂತರ ಖಚಿತ ಮಾಹಿತಿ ನೀಡುವುದಾಗಿ ಹೇಳಿದ್ದಾರೆ. ಜೊತೆಗೆ, ಮಗುವಿನ ಕೊಲೆಯ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಆಂಬುಲೆನ್ಸ್ ಅಪಘಾತ: ಮದುವೆ ವಾರ್ಷಿಕೋತ್ಸವ ಗಿಫ್ಟ್ ಕೊಡ್ತೀನಂತ ಆಸ್ಪತ್ರೆಗೆ ಹೊರಟ ಗರ್ಭಿಣಿ ಹೆಂಡ್ತಿ ದಾರುಣ ಸಾವು!
ರೆಸಾರ್ಟ್ ಮ್ಯಾನೇಜರ್ ಹೇಳಿದ್ದೇನು?
ಇಬ್ಬರು ದಂಪತಿ ಮಗುವಿನೊಂದಿಗೆ ನಿನ್ನೆ ಸಂಜೆ ನಮ್ಮ ರೆಸಾರ್ಟ್‌ನಲ್ಲಿ ಬಂದು ತಂಗಿದ್ದಾರೆ. ಅವರು ಕೇರಳ ರಾಜ್ಯದ ಕೊಟ್ಟಾಯಂ ಬಳಿಯ ಪಡಿಚಾಟು ಗ್ರಾಮದವರು ಎಂಬ ವಿಳಾಸ ಕೊಟ್ಟಿದ್ದಾರೆ. ಅವರಿಗೆ ಕೊಡಲಾಗಿದ್ದ ಕೋಣೆಯಲ್ಲಿ ಇಂದು ಮೃತದೇಹಗಳು ಪತ್ತೆಯಾಗಿವೆ. ಈ ಬಗ್ಗೆ ಪೊಲೀಸರುಗೆ ಮಾಹಿತಿ ನೀಡಿದ್ದೇವೆ. ಪೊಲೀಸರು ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಅವರು ಬಂದ ನಂತರ ಸಂಬಂಧಪಟ್ಟು ವಸ್ತುಗಳನ್ನು ರವಾನಿಸುವಂತೆ ತಿಳಿಸಿದ್ದಾರೆ ಎಂದು ರೆಸಾರ್ಟ್ ವ್ಯವಸ್ಥಾಪಕ ಆನಂದ್ ಅವರಿಂದ ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ