ಕನ್ನಡದಲ್ಲಿ ಬಸವಣ್ಣನ ವಚನದ ಮೂಲಕ ಐಕ್ಯತೆ ಸಂದೇಶ ಸಾರಿದ ಕೇರಳ ಸಿಎಂ!

Suvarna News   | Asianet News
Published : Apr 26, 2020, 05:50 PM IST
ಕನ್ನಡದಲ್ಲಿ ಬಸವಣ್ಣನ ವಚನದ ಮೂಲಕ ಐಕ್ಯತೆ ಸಂದೇಶ ಸಾರಿದ ಕೇರಳ ಸಿಎಂ!

ಸಾರಾಂಶ

ಲಾಕ್‌ಡೌನ್ ನಡುವೆಯೂ ಮನೆ ಮನಗಳಲ್ಲಿ ಬಸವಣ್ಣನ ಜಯಂತಿ ಆಚರಿಸಲಾಗಿದೆ. ಸಿಎಂ ಬಿಸ್ ಯಡಿಯೂರಪ್ಪ ಸೇರಿದಂತೆ ಹಲವರು ಬಸವಣ್ಣ ಪುತ್ಥಳಿ, ಫೋಟೋಗೆ ಮಾಲಾರ್ಪಣೆ ಮಾಡಿ ಜಯಂತಿ ಆಚರಿಸಿದ್ದಾರ. ಪ್ರತಿ ವರ್ಷ ಕನ್ನಡಿಗರು ಬಸವಣ್ಣನ ಜಯಂತಿ ಆಚರಿಸುತ್ತಾರೆ. ಇದೀಗ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕನ್ನಡದಲ್ಲಿ ಬಸವಣ್ಣನ ವಚನದ ಮೂಲಕ ಬಸವ ಜಯಂತಿಂದು ಐಕ್ಯತೆ ಸಂದೇಶ ಸಾರಿದ್ದಾರೆ.

ಕೊಚ್ಚಿ(ಏ.26): ಕರ್ನಾಟಕ ಮಾತ್ರವಲ್ಲ ದೇಶ-ವಿದೇಶಗಳಲ್ಲೂ ಬಸವಣ್ಣ ಜಯಂತಿ ಆಚರಿಸಲಾಗುತ್ತದೆ. ಆದರೆ ಈ ಬಾರಿ ಲಾಕ್‌ಡೌನ್ ಕಾರಣ ಕಾರ್ಯಕ್ರಮಗಳೆಲ್ಲಾ ರದ್ದಾಗಿದೆ. ಹೀಗಾಗಿ ಮನೆಯಲ್ಲೇ ಬಸವಣ್ಣನ ಜಯಂತಿ ಆಚರಿಸಿದ್ದಾರೆ. ಕೊರೋನಾ ವೈರಸ್ ಕಾರಣ ರಾಜ್ಯ ಸರ್ಕಾರ ಕೂಡ ಸರಳವಾಗಿ ಬಸವ ಜಯಂತಿ ಆಚರಿಸಿದೆ. ಅತ್ತ ಕೇರಳ ಮುಖ್ಯಮಂತ್ರಿ ಬಸವ ಜಯಂತಿಗೆ, ಬಸವಣ್ಣನ ವಚನವನ್ನು ಟ್ವಿಟರ್ ಮೂಲಕ ಕನ್ನಡದಲ್ಲೇ ಪ್ರಕಟಿಸಿ ಎಲ್ಲರ ಮನ ಗೆದ್ದಿದ್ದಾರೆ.

ದೇಶದಲ್ಲೇ ಮೊದಲ ಕೊರೋನಾ ಕೇಸ್‌ ಕೇರಳದಲ್ಲಿ ಪತ್ತೆ; ಈಗ ಅಲ್ಲೇ ಸೋಂಕು ಕಡಿಮೆ

ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಇದೀಗ ಇತರ ರಾಜ್ಯಗಳು ಕೇರಳ ಮಾದರಿ ಅನುಸರಿಸುತ್ತಿದೆ. ಈ ಮೂಲಕ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇತರ ರಾಜ್ಯಗಳಲ್ಲೂ ಸುದ್ದಿಯಾಗುತ್ತಿದ್ದಾರೆ. ಕರ್ನಾಟಕದಲ್ಲಿ ಇದೀಗ ಬಸವ ಜಯಂತಿಗೆ ಪಿಣರಾಯಿ ವಿಜಯನ್ ಕನ್ನಡದಲ್ಲಿ ಬಸವಣ್ಣನ ಇವನಾರವ, ಇವನಾರವ ವಚನದ ಮೂಲಕ ಎಲ್ಲೂ ಒಗ್ಗಟ್ಟಾಗಿ ಕೊರೋನಾ ವಿರುದ್ಧ ಹೋರಾಡೋಣ ಎಂಬ ಸಂದೇಶ ಸಾರಿದ್ದಾರೆ.

 

ಬಸವಣ್ಣನವರ ವಚನದ "ಇವನಾರವ ಇವನಾರವ ಇವನಾರವನೆಂದು ಎನಿಸದಿರಯ್ಯ. ಇವ ನಮ್ಮವ ಇವ ನಮ್ಮವ, ಇವ ನಮ್ಮವನೆಂದು ಎನಿಸಯ್ಯ. ಎಂಬ ಎರಡು ಸಾಲುಗಳನ್ನು ಟ್ವಿಟರ್‌ನಲ್ಲಿ ಪ್ರಕಟಿಸಿರುವ ಪಿಣರಾಜಿ ವಿಜಯನ್, ಬಸವಣ್ಣ ನಮ್ಮಲ್ಲರ ಮಾರ್ಗದರ್ಶಕ, ಅವರ ತತ್ವ ಹಾಗೂ ಮಾರ್ಗದರ್ಶನದಲ್ಲಿ ಮುನ್ನಡೆಯೋಣ. ನಮ್ಮೊಳಗಿನ ಭೇದ ಭಾವ ಬಿಟ್ಟು ಎಲ್ಲೂ ಒಗ್ಗಟ್ಟಾಗಿ ಕೊರೋನಾ ವಿರುದ್ಧ ಹೋರಾಡೋಣ ಎಂದು ಪಿಣರಾಯಿ ವಿಜಯ್ ಟ್ವಿಟರ್ ಮೂಲಕ ಪೊಸ್ಟ್ ಮಾಡಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು