ಕೇರಳದಲ್ಲಿ ಕೊರೋನಾ ನಿಗ್ರಹಕ್ಕೆ 20000 ಕೋಟಿ ಪ್ಯಾಕೇಜ್‌

By Kannadaprabha NewsFirst Published Mar 20, 2020, 11:01 AM IST
Highlights

ದೇಶದಲ್ಲಿ ಕೊರೋನಾ ಅಟ್ಟಹಾಸ ದಿನದಿನಕ್ಕೂ ಹೆಚ್ಚಾಗುತಿದ್ದು, ಇದರ ನಿಯಂತ್ರಣಕ್ಕೆ ಕೇರಳ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. 

ತಿರುವನಂತಪುರಂ [ಮಾ.20]:  ಮಾರಕ ಕೊರೋನಾ ತಡೆಗೆ ಗಮನಾರ್ಹ ಕ್ರಮಗಳನ್ನು ಕೈಗೊಳ್ಳುತ್ತಿರುವ ಕೇರಳ ಸರ್ಕಾರ, ಗುರುವಾರ ವ್ಯಾಧಿ ನಿಯಂತ್ರಣಕ್ಕೆ 20 ಸಾವಿರ ಕೋಟಿ ರುಪಾಯಿಗಳ ವಿಶೇಷ ಪ್ಯಾಕೇಕ್‌ ಘೋಷಣೆ ಮಾಡಿದೆ.

ಇದರಡಿ ಎಪಿಎಲ್‌ ಬಿಪಿಎಲ್‌ ವ್ಯತ್ಯಾಸ ಇಲ್ಲದೇ ಎಲ್ಲರಿಗೂ ಒಂದು ತಿಂಗಳ ಆಹಾರ ಧಾನ್ಯ ಉಚಿತವಾಗಿ ವಿತರಣೆ ಮಾಡುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಘೋಷಿಸಿದ್ದಾರೆ. ಸಭೆ ಬಳಿಕ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಒಟ್ಟಿಗೆ ಕುಳಿತು ಪತ್ರಿಕಾಗೋಷ್ಟಿನಡೆಸಿದ್ದು ವಿಶೇಷವಾಗಿತ್ತು.

ಕಾಸರಗೋಡು ಪ್ರಯಾಣಿಕರ ಗಡಿ ದಾಟಿಸಲು ವಿಶೇಷ ಬಸ್‌...

- ಒಂದು ತಿಂಗಳ ಆಹಾರ ಧಾನ್ಯ ಉಚಿತ

- ನರೇಗಾ ಕಾರ್ಮಿಕರಿಗೆ 2000 ಕೋಟಿ

-ವಿವಿಧ ಪಿಂಚಣಿಗಳನ್ನು ಎರಡು ತಿಂಗಳು ಮೊದಲೇ ಪಾವತಿಸುವುದು

-ಸಾಮಾಜಿಕ ಭದ್ರತಾ ಪಿಂಚಣಿ ಪಡೆಯದ ಕುಟುಂಬಗಳಿಗೆ 1000 ರು.

-ಏಪ್ರಿಲ್‌ನಲ್ಲಿ ಇಂದಿರಾ ಕ್ಯಾಂಟೀನ್‌ ಮಾದರಿ 1,000 ರೆಸ್ಟೋರೆಂಟ್‌

- ಮುಂದಿನ ಮೂರು ತಿಂಗಳು ಬಸ್‌ಗಳಿಗೆ ತೆರಿಗೆ ಮನ್ನಾ

- ವಿದ್ಯುತ್‌ ಮತ್ತು ನೀರಿನ ಬಿಲ್ ಪಾವತಿಸಲು ಒಂದು ತಿಂಗಳ ರಜೆ

click me!