ಮಧ್ಯ ಏಷ್ಯಾದಲ್ಲಿಯೇ ಅತ್ಯುತ್ತಮ ಸಿಬ್ಬಂದಿ ಹೊಂದಿರುವುದು ನಮ್ಮ ಬೆಂಗಳೂರು ಏರ್‌ಪೋರ್ಟ್!

By Suvarna NewsFirst Published Aug 23, 2021, 11:55 PM IST
Highlights

* ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮತ್ತೊಂದು ಗರಿ
* ಮಧ್ಯ ಏಷ್ಯಾದಲ್ಲಿಯೇ ಅತ್ಯುತ್ತಮ ಸಿಬ್ಬಂದಿ ಹೊಂದಿರುವ ನಿಲ್ದಾಣ
* ನೀರಿನ ಸದುಪಯೋಗದಲ್ಲಿಯೂ ಸಾಧನೆ

ಬೆಂಗಳೂರು(ಆ. 23)  ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಮತ್ತೊಂದು ಗರಿ ಸಿಕ್ಕಿದೆ.  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಸಿಬ್ಬಂದಿಗಳಿಗೆ 'ಬೆಸ್ಟ್ ಏರ್ ಪೋರ್ಟ್ ಸ್ಟಾಫ್ ಇನ್ ಇಂಡಿಯಾ ಮತ್ತು ಸೆಂಟ್ರಲ್ ಏಷ್ಯಾ' ಪುರಸ್ಕಾರ ಸಿಕ್ಕಿದೆ.

ಸ್ಕೈ ಟ್ರಾಕ್ಸ್ ವರ್ಲ್ಡ್ ಏರ್ ಪೋರ್ಟ್ ಅವಾರ್ಡ್ ಸಂಸ್ಥೆ ಪುರಸ್ಕಾರ ಕೊಡಮಾಡಿದೆ.  ಕೊರೋನಾ ಕಾರಣದಿಂದಾಗಿ ವಿಮಾನಯಾನ ಉದ್ಯಮ ತೀವ್ರ ಸಂಕಷ್ಟವನ್ನು ಎದುರಿಸುತ್ತಿರುವ ಈ ಸಂದರ್ಭ ಇದೊಂದು ಪ್ರೋತ್ಸಾಹದಾಯಕ ಪುರಸ್ಕಾರ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕೃತ ಪ್ರಕಟಣೆ ತಿಳಿಸಿದೆ. 

ಏಕಕಾಲಕ್ಕೆ ಎರಡು ರನ್ ವೇ ಬಳಸುವ ತಾಕತ್ತು

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ ಹರಿ ಮರಾರ್ 'ಈ ಪುರಸ್ಕಾರವನ್ನು ವಿಮಾನ ಪ್ರಯಾಣಿಕರು ನೀಡಿದ ವೋಟಿಂಗ್ ಆಧರಿಸಿ ನೀಡಲಾಗುತ್ತದೆ. ನಮ್ಮ ಸಿಬ್ಬಂದಿ ಮತ್ತು ಉತ್ತಮ ಪ್ರಯಾಣಿಕರ ನೆರವಿನಿಂದ ಎಲ್ಲವೂ ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನೀರಿನ ಸದ್ಬಳಕೆ ವಿಚಾರದಲ್ಲಿಯೂ ಶ್ರೇಯಾಂಕ ಪಡೆದುಕೊಂಡಿತ್ತು.  ವಾಟರ್ ಪಾಸಿಟಿವ್ ಇಂಡೆಕ್ಸ್  ನಲ್ಲಿ ಶೇ. 100 ಸಾಧನೆ ತೋರಿತ್ತು.    ಇದೀಗ ಅತ್ಯುತ್ತಮ ಸಿಬ್ಬಂದಿ ಹೊಂದಿರುವ ನಿಲ್ದಾಣ ಎಂಬ ಶ್ರೇಯಕ್ಕೂ ಪಾತ್ರವಾಗಿದೆ.

was named the ‘Best Airport Staff in India/Central Asia’ at the 2021. A big thank you to all our passengers & visitors who appreciated our efforts and voted for us. https://t.co/XmdBxLYlvh pic.twitter.com/d5YrXFI67T

— BLR Airport (@BLRAirport)
click me!