ನಿಮ್ ಅಣ್ಣಾ ಜೈಲಿಗೆ ಹೋಗ್ತಾ ಇದ್ದಾನೆ, ಲೈಕ್ಸ್ ಇರಲಿ, ಲೈವ್‌ನಲ್ಲಿ ಹತ್ಯೆ ಸಂಭ್ರಮಿಸಿದ ಅಪ್ರಾಪ್ತ

Published : Apr 03, 2026, 08:36 PM IST
Delhi Police

ಸಾರಾಂಶ

ನಿಮ್ ಅಣ್ಣಾ ಜೈಲಿಗೆ ಹೋಗ್ತಾ ಇದ್ದಾನೆ, ಲೈಕ್ಸ್ ಇರಲಿ, ಲೈವ್‌ನಲ್ಲಿ ಹತ್ಯೆ ಸಂಭ್ರಮಿಸಿದ ಅಪ್ರಾಪ್ತ, ಒಬ್ಬನನ್ನು ಕೊಂದಿದ್ದೇನೆ. ಸ್ವಲ್ಪ ದಿನ ಪೋಸ್ಟ್ ಇರಲ್ಲ, ಆದರೆ ನಿಮ್ ಪ್ರೀತಿ, ಸಪೋರ್ಟ್,ಲೈಕ್ಸ್ ಹೀಗೆ ಇರಲಿ ಎಂದಿದ್ದಾನೆ

ನವದೆಹಲಿ (ಏ.03) ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಕೆಲವರು ಆದಾಯ ಗಳಿಸುತ್ತಿದ್ದರೆ, ಹಲವರು ಈ ರೀಲ್ಸ್ ಗೀಳು ತಲೆ ಹತ್ತಿ ಸಮಾಜವನ್ನೇ ತಲೆತಗ್ಗಿಸುವಂತೆ ಮಾಡುತ್ತಿದೆ. ರೀಲ್ಸ್ ಕಸರತ್ತು ವೇಳೆ ದುರಂತ ಅಂತ್ಯ ಕಂಡ ಘಟನೆಗಳು ಸಾಕಷ್ಟಿದೆ. ಇದೀಗ ಅಪ್ರಾಪ್ತನೊಬ್ಬನ ಇನ್‌ಸ್ಟಾಗ್ರಾಂ ಲೈವ್ ವಿಡಿಯೋ ಹಲವರನ್ನು ಬೆಚ್ಚಿ ಬೀಳಿಸಿದೆ. ಕ್ಷುಲ್ಲಕ ಕಾರಣಕ್ಕೆ ವಾಗ್ವಾದ ನಡೆದು 20 ವರ್ಷದ ಯುವಕನ ಮೇಲೆ ಚಾಕು ಇರಿದು ಹತ್ಯೆ ಮಾಡಿದ್ದಾನೆ. ಬಳಿಕ ಇನ್‌ಸ್ಟಾಗ್ರಾಂನಲ್ಲಿ ಲೈವ್ ಬಂದ ಈ ಅಪ್ರಾಪ್ತ, ಅಣ್ಣಾ ಇವತ್ತು ಒಬ್ನ ಹತ್ಯೆ ಮಾಡಿದ್ದಾನೆ. ಇನ್ನು ಸ್ವಲ್ಪ ದಿನ ಜೈಲಿಗೆ ಹೋಗ್ತಾನೆ, ಅಲ್ಲೀವರೆಗೆ ರೀಲ್ಸ್, ಪೋಸ್ಟ್ ಇರಲ್ಲ, ಆದರೆ ನಿಮ್ಮ ಪ್ರೀತಿ, ಲೈಕ್ಸ್, ಸಪೋರ್ಟ್ ಇರಲಿ ಎಂದು ತಾನು ಮಾಡಿದ ಕೊಲೆಯನ್ನು ಸಂಭ್ರಮಿಸಿ ಹೇಳಿದ ಘಟನೆ ದೆಹಲಿಯಲ್ಲಿ ನಡೆದಿದೆ.

ನೋಡಿ, ಈಗ ಸಮಯ 11.22 ಎಂದು ಲೈವ್ ಆರಂಭ

ಈ ಅಪ್ರಾಪ್ತ ರಾತ್ರಿ 11.22ಕ್ಕೆ ಇನ್‌ಸ್ಟಾಗ್ರಾಂ ಲೈವ್ ಬಂದಿದ್ದಾನೆ. ಬಳಿಕ ನೋಡಿ ಭಾಯ್, ಈಗ ಸಮಯ 11.22 ರ ರಾತ್ರಿ. ನಿಮ್ಮ ಅಣ್ಣಾ ಒಂದು ಕೊಲೆ ಮಾಡಿದ್ದಾನೆ. ನಿಮ್ಮ ಅಣ್ಣಾ ಕೆಲ ದಿನಗಳ ಮಟ್ಟಿಗೆ ಜೈಲಿಗೆ ಹೋಗುತ್ತಿದ್ದಾನೆ. ನಿಮ್ಮ ಪ್ರೀತಿ ಹೀಗೆ ಇರಲಿ ಎಂದು ಲೈವ್‌ನಲ್ಲಿ ಹೇಳಿದ್ದಾನೆ.

ವಿಲನ್ ಡಾಡ್ ಒಕೆ ಎಂಬ ಇನ್‌ಸ್ಟಾಗ್ರಾಂ ಖಾತೆ ಹೊಂದಿರುವ ಈತನ ಆರೋಪಿ ಹೆಸರು ಕರಣ್ ಕುಮಾರ್. ವಯಸ್ಸು 18. ಈತ, ಈತನ ಗೆಳೆಯ 22ರ ಹರೆಯ ಮಾಂಟಿ ಹಾಗೂ ಮತ್ತೊಬ್ಬ ಸೇರಿ ಹತ್ಯೆ ಮಾಡಿದ್ದಾರೆ. 20 ವರ್ಷದ ನಿತೀಶ್ ಮೇಲೆ ಚಾಕು ಮೂಲಕ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ. ಶಾಲಿಮಾರ್ ಭಾಗ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ರಾತ್ರಿ ವೇಳೆ ಇದೇ ದಾರಿಯಲ್ಲಿ ಸಾಗುವ ಕೆಲ ವ್ಯಕ್ತಿಗಳು ಗಾಯಗೊಂಡು ಬಿದ್ದ ಯುವಕನ ನೋಡಿ ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಕಾರಣ ನಿತೀಶ್ ಬದುಕಿ ಉಳಿಯಲಿಲ್ಲ.

ಮೂವರು ಅರೆಸ್ಟ್

ಇತ್ತ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ಸಿಸಿಟಿವಿ ದೃಶ್ಯಗಳ ಪರಿಶೀಲಿಸಿ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ತನಿಖೆ ವೇಳೆ ಈ ಮೂವರು ಆರೋಪಿ ಪೈಕಿ ಕರಣ್ ಕುಮಾರ್ ಹತ್ಯೆ ಬಳಿಕ ಇನ್‌ಸ್ಟಾಗ್ರಾಂನಲ್ಲಿ ಲೈವ್ ಬಂದಿರುವು ಮಹಿತಿಯೂ ಲಭ್ಯವಾಗಿದೆ.

ಈತನ ಇನ್‌ಸ್ಟಾಗ್ರಾಂ ಖಾತೆಗೆ 1500 ಮಂದಿ ಫಾಲೋವರ್ಸ್ ಇದ್ದಾರೆ. ಈತನ ಮಾಡಿದ ಕೆಲಸಕ್ಕೆ ಅಣ್ಣಾ ಸೂಪರ್, ಅಣ್ಣ ನಿಮ್ ರೀಲ್ಸ್ ಮಿಲಿಯನ್ ಲೈಕ್ಸ್ ಗ್ಯಾರೆಂಟಿ, ಅಣ್ಣಾ ನಿಮ್ ಧೈರ್ಯ ಸೂಪರ್ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇದೀಗ ಪೊಲೀಸರು ಈ ಕಮೆಂಟ್ ಮಾಡಿದವರ ಮೇಲೂ ಕಣ್ಣಿಟ್ಟಿದ್ದಾರೆ. ಹತ್ಯೆ ಮಾಡಿದ ಬಳಿಕ ಅವರನ್ನು ಪ್ರೋತ್ಸಾಹಿಸಿದ ಗುರುತರ ಆರೋಪಗಳು ಈ ಕಮೆಂಟ್ ಮಾಡಿದರಿಗೆ ಎದುರಾಗಿದೆ. ಈ ಅಣ್ಣಾ ಅರೆಸ್ಟ್ ಆಗುತ್ತಿದ್ದಂತೆ ಕೆಲವರು ಕಮೆಂಟ್ಸ್ ಡಿಲೀಟ್ ಮಾಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಮೋಡಿಗೆ ವಿದೇಶಿಗರು ಫಿದಾ, ಚಿತ್ರಗಳಲ್ಲಿ ಪುದುಚೇರಿ ರೋಡ್‌ಶೋದ ವಿಶೇಷ ಕ್ಷಣಗಳು
100 ಮಹಿಳೆಯರ ಜೊತೆ ಗುರೂಜಿ ಕಾಮಪುರಾಣ ಕೇಸ್‌ನಲ್ಲಿ ಟ್ವಿಸ್ಟ್; ಸಚಿವರತ್ತ ತಿರುಗಿದ ತನಿಖೆ